ನವದೆಹಲಿ: ದೇಶದ ಪ್ರಮುಖ ರೈಲು ಮಾರ್ಗಗಳಲ್ಲಿ 39 ಹೊಸ ರೈಲುಗಳ ಸಂಚಾರಕ್ಕೆ ಕೇಂದ್ರ ರೈಲ್ವೆ ಇಲಾಖೆ ಸಮ್ಮತಿಸಿದೆ. ಯಶವಂತಪುರ-ಕಾಮಾಕ್ಯ, ಯಶವಂತಪುರ-ಚೆನ್ನೈ ಮಾರ್ಗಗಳು ಸೇರಿದಂತೆ ವಿವಿಧ ವಲಯಗಳ ಪ್ರಮುಖ ಮಾರ್ಗಗಳಲ್ಲಿ ಹೆಚ್ಚುವರಿ ರೈಲುಗಳ ಸಂಚಾರಕ್ಕೆ ಅನುಮತಿ ಕೊಡುವಂತೆ ರೈಲ್ವೆ ಮಂಡಳಿ ಸಲ್ಲಿಸಿದ್ದ ಮನವಿಗೆ ಸಚಿವಾಲಯ ಒಪ್ಪಿಗೆ ನೀಡಿದೆ.
ಬೆಂಗಳೂರಿಗೆ ಐದು ರೈಲು: ಕಾಮಾಕ್ಯ-ಯಶವಂತ ಪುರ ನಡುವೆ ವಾರಕ್ಕೊಮ್ಮೆ ಎಸಿ ಎಕ್ಸ್‌ಪ್ರೆಸ್ ರೈಲು ಸಂಚಾರವಿರಲಿದೆ. ಹಾಗೆಯೇ ರಾಜಸ್ಥಾನದ ಬಾರ್ಬರ್ -ಯಶವಂತಪುರದ ನಡುವೆ ವಾರಕ್ಕೊಮ್ಮೆ ಎಸಿ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದೆ. ಪಶ್ಚಿಮ ಬಂಗಾಳದ ಹೌರಾದಿಂದ ಯಶವಂತಪುರದವರೆಗೆ ಮತ್ತೊಂದು ಎಸಿ ಎಕ್ಸ್‌ಪ್ರೆಸ್ ವಾರಕ್ಕೊಮ್ಮೆ ಓಡಾಡಲಿದೆ. ಇನ್ನು,ಬೆಂಗ ಳೂರು-ಚೆನ್ನೈ ನಡುವೆ ಪ್ರತಿ ಮಂಗಳವಾರ ಶತಾಬ್ದಿ ರೈಲು ಹೆಚ್ಚುವರಿಯಾಗಿ ಸಂಚರಿಸಲಿದ್ದು, ಚೆನ್ನೈ-ಬೆಂಗಳೂರು ನಡುವೆ ಡಬಲ್ ಡೆಕ್ಕರ್ ರೈಲು ಪ್ರತಿದಿನವೂ ಪಯಣಿಸಲಿದೆ.
ತೇಜಸ್ ಪುನರಾರಂಭ: ಭಾರತೀಯ ರೈಲ್ವೆಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್‌ನ (ಐಆರ್‌ಸಿಟಿಸಿ) ಲಕ್ನೋ-ನವದೆಹಲಿ,ಅಹಮ್ಮದಾಬಾದ್-ಮುಂಬೈ ನಡುವೆ ಎರಡು ತೇಜಸ್ ರೈಲುಗಳು ಅ. 17ರಿಂದ ಸಂಚಾರ ಆರಂಭಿಸಲಿವೆ. ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಆ ರೈಲುಗಳನ್ನು ಮಾ. 19ರಿಂದ ರದ್ದುಗೊಳಿಸಲಾಗಿತ್ತು.
ಪುಟಿನ್ ಭೇಟಿಗೆ ಉತ್ಸುಕ: ಮೋದಿ ಕೊರೊನಾ ಸೋಂಕಿನ ಪ್ರಮಾಣ ತಗ್ಗುತ್ತಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭಾರತದಲ್ಲಿ
ಭೇಟಿಯಾಗಲು ಉತ್ಸುಕನಾಗಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆಗೆ ಫೋನ್‌ನಲ್ಲಿ ಮಾತನಾಡಿದ ಪ್ರಧಾನಿ ಮುಂದಿನ ದಿನಗಳಲ್ಲಿ ರಷ್ಯಾ ಜತೆಗೆ ಸೋಂಕು ನಿವಾರಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ 2 ರಾಷ್ಟ್ರಗಳು ಜತೆಗೂಡಿ ಕೆಲಸ ಮಾಡಬೇಕಾಗಿದೆ ಎಂದರು. ಇದರ ಜತೆಗೆ ಪುಟಿನ್ ಜತೆಗೆ ಹೊಂದಿರುವ ಸ್ನೇಹ ಮತ್ತು ವ್ಯೂಹಾತ್ಮಕ ಬಾಂಧವ್ಯಗಳ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದ್ದಾರೆ. ಪ್ರಧಾನಿ ಮೋದಿ ಮಾಸ್ಕೋಗೆ ಭೇಟಿ ನೀಡಿ ಪುಟಿನ್ ಜತೆಗೆ ಮಾತುಕತೆ ನಡೆಸಬೇಕಾಗಿತ್ತು. ಆದರೆ ಸೋಂಕಿನಿಂದಾಗಿ ಅದು ಸಾಧ್ಯವಾಗಿಲ್ಲ.