Advertisement

ವಿದರ್ಭ ವೈಭವಕ್ಕೆ ಮಳೆ ಅಡ್ಡಿ

06:00 AM Mar 17, 2018 | |

ನಾಗ್ಪುರ: ಇರಾನಿ ಕಪ್‌ ಪಂದ್ಯದ 3ನೇ ದಿನದಾಟಕ್ಕೆ ಮಳೆಯಿಂದ ಅಡ್ಡಿಯಾಗಿದ್ದು, ಕೇವಲ 28 ಓವರ್‌ಗಳ ಆಟವಷ್ಟೇ ಸಾಧ್ಯವಾಗಿದೆ. ರಣಜಿ ಚಾಂಪಿಯನ್‌ ವಿದರ್ಭ ಬ್ಯಾಟಿಂಗ್‌ ಮುಂದುವರಿಸಿ 5 ವಿಕೆಟಿಗೆ 702 ರನ್‌ ಪೇರಿಸಿದೆ. ಇರಾನಿ ಇತಿಹಾಸದಲ್ಲಿ ತಂಡವೊಂದು 700 ರನ್‌ ಬಾರಿಸಿದ ಕೇವಲ 2ನೇ ದೃಷ್ಟಾಂತ ಇದಾಗಿದೆ.

Advertisement

ಶೇಷ ಭಾರತ ಈವರೆಗೆ 208 ಓವರ್‌ಗಳನ್ನು ಎಸೆದಿದ್ದು, ವಿಕೆಟ್‌ ಉರುಳಿಸಲು ಪರದಾಡುತ್ತಿದೆ. ಒಟ್ಟು 4 ಮಂದಿ ಬೌಲರ್‌ಗಳು ನೂರಕ್ಕೂ ಹೆಚ್ಚಿನ ರನ್‌ ಬಿಟ್ಟುಕೊಟ್ಟಿದ್ದಾರೆ. ಸ್ಪಿನ್ನರ್‌ ಜಯಂತ್‌ ಯಾದವ್‌ ಎಲ್ಲರಿಗಿಂತ ಮುಂದಿದ್ದು, 202 ರನ್‌ ನೀಡಿದ್ದಾರೆ. ಶಾಬಾಜ್‌ ನದೀಂ 159 ರನ್‌, ಆರ್‌. ಅಶ್ವಿ‌ನ್‌ 123 ರನ್‌ ಹಾಗೂ ನವದೀಪ್‌ ಸೈನಿ 106 ರನ್‌ ನೀಡಿ ದುಬಾರಿಯಾಗಿದ್ದಾರೆ. 

ವಾಸಿಮ್‌ ಜಾಫ‌ರ್‌ ಅವರಿಗೆ ತ್ರಿಶತಕವನ್ನು ತಪ್ಪಿಸಿದ್ದಷ್ಟೇ ಶೇಷ ಭಾರತದ 3ನೇ ದಿನದಾಟದ ಸಾಧನೆ ಎನಿಸಿಕೊಂಡಿತು. 285 ರನ್‌ ಮಾಡಿ ಆಡುತ್ತಿದ್ದ ಜಾಫ‌ರ್‌, ಈ ಮೊತ್ತಕ್ಕೆ ಕೇವಲ ಒಂದು ರನ್‌ ಸೇರಿಸಿ ಸಿದ್ಧಾರ್ಥ್ ಕೌಲ್‌ ಎಸೆತಕ್ಕೆ ಬೌಲ್ಡ್‌ ಆದರು. ಒಟ್ಟು 431 ಎಸೆತ ನಿಭಾಯಿಸಿದ ಜಾಫ‌ರ್‌ 34 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿ ಮೆರೆದರು. ಜಾಫ‌ರ್‌ ಅವರ 286 ರನ್‌ ಇರಾನಿ ಕಪ್‌ ಇತಿಹಾಸದ ಸರ್ವಾಧಿಕ ವೈಯಕ್ತಿಕ ಗಳಿಕೆಯಾಗಿದೆ. 266 ರನ್‌ ಬಾರಿಸಿದ್ದ ಮುರಳಿ ವಿಜಯ್‌ ದಾಖಲಾಯನ್ನು ಜಾಫ‌ರ್‌ ಮುರಿದರು.

ಶೇಷ ಭಾರತಕ್ಕೆ ಇನ್ನೊಂದು ಯಶಸ್ಸು ಅಕ್ಷಯ್‌ ವಾಡ್ಕರ್‌ (37) ರೂಪದಲ್ಲಿ ಲಭಿಸಿತು. ಅಪೂರ್ವ್‌ ವಾಂಖೇಡೆ 99 ರನ್‌ ಮಾಡಿ ಆಡುತ್ತಿದ್ದು, ಇವರ ಶತಕ ಪೂರ್ತಿ ಆದೊಡನೆ ವಿದರ್ಭ ನಾಯಕ ಫ‌ಯಾಜ್‌ ಫ‌ಜಲ್‌ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಬಹುದು. ಅಥವಾ ಇರಾನಿ ಟ್ರೋಫಿಯಲ್ಲಿ ಸರ್ವಾಧಿಕ ಮೊತ್ತದ ನೂತನ ದಾಖಲೆಯನ್ನೂ ನಿರ್ಮಿಸಬಹುದು. 1990ರ ಬೆಂಗಳೂರು ಪಂದ್ಯದಲ್ಲಿ ಬಂಗಾಲ ವಿರುದ್ಧ ಶೇಷ ಭಾರತ 7ಕ್ಕೆ 737 ರನ್‌ ಪೇರಿಸಿದ್ದು ದಾಖಲೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next