Advertisement
ರಣಜಿ ಚಾಂಪಿಯನ್ ಗುಜರಾತ್ ವಿರುದ್ಧ 132 ರನ್ ಹಿನ್ನಡೆಗೆ ಸಿಲುಕಿದ ಪೂಜಾರ ನೇತೃತ್ವದ ಶೇಷ ಭಾರತ 379 ರನ್ನುಗಳ ಕಠಿನ ಗುರಿ ಪಡೆದಿದ್ದು, 4ನೇ ದಿನದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 266 ರನ್ ಪೇರಿಸಿದೆ. ಸಾಹಾ 123 ಹಾಗೂ ಪೂಜಾರ 83 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ತಂಡಕ್ಕೆ ಆಶಾಕಿರಣ ವಾಗಿದ್ದಾರೆ. 63ಕ್ಕೆ 4 ವಿಕೆಟ್ ಉದುರಿಸಿಕೊಂಡು ತಂಡ ತೀವ್ರ ಸಂಕಟದಲ್ಲಿದ್ದಾಗ ಜತೆಗೂಡಿದ ಇವರು ಮುರಿಯದ 5ನೇ ವಿಕೆಟಿಗೆ ಈಗಾಗಲೇ 203 ರನ್ ಪೇರಿಸಿದ್ದಾರೆ.
ರೆಸ್ಟ್ ಆಫ್ ಇಂಡಿಯಾದ ದ್ವಿತೀಯ ಸರದಿಯ ಆರಂಭ ಕೂಡ ಶೋಚನೀಯವಾಗಿತ್ತು. ಅಖೀಲ್ ಹೆರ್ವಾಡ್ಕರ್ (20), ಅಭಿನವ್ ಮುಕುಂದ್ (19), ಕರುಣ್ ನಾಯರ್ (7) ಮತ್ತು ಮನೋಜ್ ತಿವಾರಿ (7) ಬೇಗನೇ ಆಟ ಮುಗಿಸಿ ಪೆವಿಲಿಯನ್ ಸೇರಿಕೊಂಡರು. ಆಗ ಗುಜರಾತ್ ಸ್ಪಷ್ಟ ಗೆಲುವು ಸಾಧಿಸುವ ಎಲ್ಲ ಸೂಚನೆ ಲಭಿಸಿದ್ದು ಸುಳ್ಳಲ್ಲ. ಆದರೆ 5ನೇ ವಿಕೆಟಿಗೆ ಜತೆಗೂಡಿದ ಪೂಜಾರ-ಸಾಹಾ ಗುಜರಾತ್ ದಾಳಿಯನ್ನು ಮೆಟ್ಟಿ ನಿಂತರು.
Related Articles
ನಲ್ಲಿ ಕೇವಲ 5 ರನ್ ಮಾಡಿದ್ದರು. ಆದರೆ ಸೋಮವಾರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, 214 ಎಸೆತ ಎದುರಿಸಿ 123 ರನ್ ಮಾಡಿದ್ದಾರೆ. ಇದರಲ್ಲಿ 16 ಬೌಂಡರಿ, 3 ಸಿಕ್ಸರ್ ಸೇರಿದೆ.
Advertisement
ಇದು ಶೇಷ ಭಾರತ ತಂಡದ ಕೊನೆಯ ಬ್ಯಾಟಿಂಗ್ ಸ್ಪೆಷಲಿಸ್ಟ್ ಜೋಡಿ ಎನಿಸಿದೆ. ಇವರನ್ನು ಬೇಗನೇ ಔಟ್ ಮಾಡಿದರಷ್ಟೇ ಗುಜ ರಾತ್ ಗೆಲುವು ಕಾಣಬಹುದು. ಬ್ಯಾಟಿಂಗಿಗೆ ಬರಬೇಕಾದವರು ಕುಲದೀಪ್ ಯಾದವ್, ಶಾಬಾಜ್ ನದೀಂ, ಪಂಕಜ್ ಸಿಂಗ್, ಸಿದಾ§ರ್ಥ ಕೌಲ್ ಮತ್ತು ಮೊಹಮ್ಮದ್ ಸಿರಾಜ್. ಇವರಲ್ಲಿ ಸಿರಾಜ್ ಹೊರತುಪಡಿಸಿ ಮೊದಲ ಇನ್ನಿಂಗ್ಸಿನಲ್ಲಿ ಯಾರೂ ಕ್ಲಿಕ್ ಆಗಿರಲಿಲ್ಲ.
3ನೇ ದಿನದ ಅಂತ್ಯಕ್ಕೆ 8ಕ್ಕೆ 227 ರನ್ ಗಳಿಸಿದ್ದ ಗುಜರಾತ್, ಸೋಮವಾರ ಬ್ಯಾಟಿಂಗ್ ಮುಂದುವರಿಸಿ 246ಕ್ಕೆ ಆಲೌಟ್ ಆಯಿತು.
ಸಂಕ್ಷಿಪ್ತ ಸ್ಕೋರ್ ಗುಜರಾತ್-358 ಮತ್ತು 246 (ಪಾಂಚಾಲ್ 73, ಗಾಂಧಿ 70, ಪಾರ್ಥಿವ್ 32, ನದೀಂ 64ಕ್ಕೆ 4, ಕೌಲ್ 70ಕ್ಕೆ 3, ಸಿರಾಜ್ 39ಕ್ಕೆ 2). ಶೇಷ ಭಾರತ-226 ಮತ್ತು 4 ವಿಕೆಟಿಗೆ 266 (ಸಾಹಾ ಬ್ಯಾಟಿಂಗ್ 123, ಪೂಜಾರ ಬ್ಯಾಟಿಂಗ್ 83, ಹಾರ್ದಿಕ್ ಪಟೇಲ್ 59ಕ್ಕೆ 2).