Advertisement

Irani Cup 2024: ಮುಂಬಯಿಗೆ ಲೀಡ್… 274 ರನ್‌ ಮುನ್ನಡೆ

11:07 PM Oct 04, 2024 | Team Udayavani |

ಲಕ್ನೋ: ಶೇಷಭಾರತ ವಿರುದ್ಧ ಒಟ್ಟು 274 ರನ್‌ ಮುನ್ನಡೆ ಸಾಧಿಸಿರುವ ಮುಂಬೈ, ಗೆಲುವಿನ ಬಲವಾದ ಭರವಸೆ ಹೊಂದಿದೆ. ಒಂದು ವೇಳೆ ಶನಿವಾರ ಮುಂಬೈ ಬೇಗನೇ ಆಲೌಟಾದರೆ, ಶೇಷಭಾರತಕ್ಕೂ ಗೆಲುವಿನ ಅವಕಾಶವಿದೆ. ಹೀಗಾಗಿ ಫ‌ಲಿತಾಂಶ ರೋಚಕ ಘಟ್ಟಕ್ಕೆ ತಲುಪಿದೆ. ಮುಂಬೈನ 537 ರನ್ನುಗಳಿಗೆ ದಿಟ್ಟ ರೀತಿಯಲ್ಲೇ ಜವಾಬು ನೀಡಿದ ಶೇಷ ಭಾರತ, 4ನೇ ದಿನದಾಟದಲ್ಲಿ 416ಕ್ಕೆ ಆಲೌಟ್‌ ಆಯಿತು. ನಾಯಕ ಅಭಿಮನ್ಯು ಈಶ್ವರನ್‌ 191 ರನ್‌, ಧ್ರುವ ಜುರೆಲ್‌ 93 ರನ್‌ ಬಾರಿಸಿದರು. 121 ರನ್‌ 1ನೇ ಇನಿಂಗ್ಸ್‌ ಮುನ್ನಡೆ ಸಾಧಿಸಿದ ಮುಂಬೈ ದ್ವಿತೀಯ ಇನಿಂಗ್ಸ್‌ನಲ್ಲಿ ಕುಸಿದು 6ಕ್ಕೆ 153 ರನ್‌ ಮಾಡಿದೆ.
ಸಂಕ್ಷಿಪ್ತ ಸ್ಕೋರ್‌: ಮುಂಬೈ 1ನೇ ಇನಿಂಗ್ಸ್‌ 537 ಮತ್ತು 2ನೇ ಇನಿಂಗ್ಸ್‌ 153/6 (ಪೃಥ್ವಿ ಶಾ 76, ಸಾರಾಂಶ್‌ 67ಕ್ಕೆ 4, ಮಾನವ್‌ 40ಕ್ಕೆ 2). ಶೇಷಭಾರತ 1ನೇ ಇನಿಂಗ್ಸ್‌ 416 (ಈಶ್ವರನ್‌ 191, ಜುರೆಲ್‌ 93, ತನುಷ್‌101ಕ್ಕೆ 3, ಮುಲಾನಿ 122ಕ್ಕೆ 3).

Advertisement

ನಾಯಕನ ಮ್ಯಾರಥಾನ್‌ ಇನ್ನಿಂಗ್ಸ್‌
ಆರಂಭಕಾರ ಅಭಿಮನ್ಯು ಮಿಥುನ್‌ 292 ಎಸೆತಗಳಿಂದ ನಾಯಕನ ಇನ್ನಿಂಗ್ಸ್‌ ಕಟ್ಟಿದರು. ಅವರ 191 ರನ್ನುಗಳ ಮ್ಯಾರಥಾನ್‌ ಇನ್ನಿಂಗ್ಸ್‌ ಒಂದು ಸಿಕ್ಸರ್‌ ಹಾಗೂ 16 ಬೌಂಡರಿಗಳನ್ನು ಒಳಗೊಂಡಿತ್ತು. ಜುರೆಲ್‌ 93 ರನ್ನಿಗೆ 121 ಎಸೆತಗಳನ್ನು ಎದುರಿಸಿದರು. ಸಿಡಿಸಿದ್ದು 13 ಬೌಂಡರಿ ಹಾಗೂ ಒಂದು ಸಿಕ್ಸರ್‌. ಇವರಿಬ್ಬರ ಜತೆಯಾಟದಲ್ಲಿ 5ನೇ ವಿಕೆಟಿಗೆ 165 ರನ್‌ ಒಟ್ಟುಗೂಡಿತು. ಆದರೆ ಇಬ್ಬರೂ 3 ರನ್‌ ಅಂತರದಲ್ಲಿ ಪೆವಿಲಿಯನ್‌ ಸೇರಿಕೊಂಡ ಬಳಿಕ ಶೇಷ ಭಾರತದ ಹೋರಾಟ ಕೊನೆಗೊಂಡಿತು.

ಒಂದು ಹಂತದಲ್ಲಿ 4ಕ್ಕೆ 393 ರನ್‌ ಮಾಡಿ ಮುನ್ನಡೆಯ ಸೂಚನೆ ನೀಡಿದ್ದ ಶೇಷ ಭಾರತ, ಕೇವಲ 23 ರನ್‌ ಅಂತರದಲ್ಲಿ 6 ವಿಕೆಟ್‌ ಉದುರಿಸಿಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next