Advertisement

ಅಮೆರಿಕ ಅಡ್ಡಿ ಮಾಡಿದರೆ ತೈಲ ಮಾರಾಟಕ್ಕೆ ತಡೆ 

09:05 AM Dec 05, 2018 | Karthik A |

ಜಿನೀವಾ: ಕಠಿನಾತಿಕಠಿನ ಆರ್ಥಿಕ ದಿಗ್ಬಂಧಗಳ ವಿರುದ್ಧ ಖಡಕ್‌ ಪ್ರತಿಕ್ರಿಯೆ ನೀಡಿರುವ ಇರಾನ್‌, ಅಮೆರಿಕಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಇರಾನ್‌ನಿಂದ ಕಚ್ಚಾತೈಲ ರಫ್ತಿಗೆ ಅಡ್ಡಿಪಡಿಸಿದ್ದೇ ಆದಲ್ಲಿ, ಪರ್ಶಿಯನ್‌ ಗಲ್ಫ್ ಪ್ರದೇಶದಿಂದ ಯಾವುದೇ ದೇಶಕ್ಕೆ ಒಂದು ಹನಿ ತೈಲವೂ ರಫ್ತಾಗದಂತೆ ನೋಡಿಕೊಳ್ಳುತ್ತೇವೆ ಎಂದು ಇರಾನ್‌ ಅಧ್ಯಕ್ಷ ಹಸನ್‌ ರೊಹಾನಿ ಎಚ್ಚರಿಕೆ ನೀಡಿದ್ದಾರೆ.

Advertisement

ಇರಾನ್‌ನ ಶಹ್ರೌಂಡ್‌ ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ‘ನಾವು ಇತರ ದೇಶಗಳಿಗೆ ಕಚ್ಚಾ ತೈಲ ಮಾರಾಟ ಮಾಡಿಯೇ ತೀರುತ್ತೇವೆ ಎನ್ನುವುದನ್ನು ಅಮೆರಿಕ ಮನಗಾಣಬೇಕು. ಒಂದು ವೇಳೆ ಅದಕ್ಕೆ ಅಮೆರಿಕ ತಡೆಯೊಡ್ಡಿದರೆ, ಪರ್ಶಿಯನ್‌ ಕೊಲ್ಲಿ ಪ್ರದೇಶದಿಂದ ಯಾವುದೇ ರಾಷ್ಟ್ರಕ್ಕೆ ಕಚ್ಚಾ ತೈಲ ರಫ್ತಾಗದಂತೆ ಮಾಡುತ್ತೇವೆ’ ಎಂದು ತೀಕ್ಷ್ಣ  ಎಚ್ಚರಿಕೆ ನೀಡಿದ್ದಾರೆ. ದೇಶದ ಅರ್ಥ ವ್ಯವಸ್ಥೆಯನ್ನು ಪತನ ಮಾಡುವ ಅಮೆರಿಕದ ಪ್ರಯತ್ನ ನಡೆಯದು ಎಂದೂ ಅವರು ಹೇಳಿದ್ದಾರೆ. ಜುಲೈಯಲ್ಲಿ ಕೂಡ ಇದೇ ರೀತಿಯ ಎಚ್ಚರಿಕೆ ನೀಡಿದ್ದ ರೊಹಾನಿ, ಅಮೆರಿಕ ಸಿಂಹದ ಬಾಲ ತುಳಿಯುವ ಪ್ರಯತ್ನ ಮಾಡಬಾರದು ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next