ದುಬೈ: ಟೆಹ್ರಾನ್ ಸಮೀಪದ ಪರಮಾಣು ವ್ಯವಸ್ಥೆ ಮೇಲಿನ ದಾಳಿಯಿಂದಾಗಿ ಕ್ರುದ್ಧವಾಗಿರುವ ಇರಾನ್, ಇಸ್ರೇಲ್‌ಗೆ ಮತ್ತೂಂದು ಎಚ್ಚರಿಕೆ ರವಾನಿಸಿದೆ.
ದೇಶದಲ್ಲಿ ಯುರೇನಿಯಂ ಅಭಿವೃದ್ಧಿಯನ್ನು ಶೇ.60ರಷ್ಟು ಹೆಚ್ಚಿಸುವುದಾಗಿ ಇರಾನ್ ಅಧ್ಯಕ್ಷ ಹಸ್ಸನ್ ರೌಹಾನಿ ಸಂಸತ್‌ನಲ್ಲಿ ಘೋಷಿಸಿದ್ದಾರೆ.
“ನಿಮ್ಮ ದುಷ್ಟತನಕ್ಕೆ ಇದುವೇ ಉತ್ತರ’ ಎಂದೂ ಎಚ್ಚರಿಸಿದ್ದಾರೆ. “ವಿಯೆನ್ನಾ ಮಾತುಕತೆ ವೇಳೆ ನಮ್ಮ ಕೈಗಳನ್ನು ಖಾಲಿ ಆಗಿಸುವ ಮಾತುಗಳನ್ನಾಡಿದ್ದೀರಿ. ಆದರೆ, ನಮ್ಮ ಕೈಗಳು ಅಣ್ವಸ್ತ್ರಗಳಿಂದ ಭರ್ತಿಯಾಗಿವೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ :ಸುಶಾಂತ್ ಸಾವು ಪ್ರಕರಣ : ಫ್ಲ್ಯಾಕೊ ಬಂಧನಕ್ಕೆ ಎನ್‌ಸಿಬಿ ತಯಾರಿ
ಇರಾನ್ ಅಣ್ವಸ್ತ್ರ ವ್ಯವಸ್ಥೆ ಮೇಲಿನ ದಾಳಿಯನ್ನು ತಾನೇ ನಡೆಸಿದ್ದು ಎಂದು ಇಸ್ರೇಲ್ ಇದುವರೆಗೂ ಬಹಿರಂಗಪಡಿಸಿಲ್ಲ. ಆದರೂ, ಇರಾನ್ ಈ ದಾಳಿ ಇಸ್ರೇಲ್- ಅಮೆರಿಕದ ಪಿತೂರಿ ಅಂತಲೇ ವ್ಯಾಖ್ಯಾನಿಸಿದೆ.