Advertisement

ಇರಾನ್‌ನಲ್ಲಿ ನೈತಿಕ ಪೊಲೀಸ್‌ಗಿರಿ ಅಂತ್ಯ

07:54 PM Dec 04, 2022 | Team Udayavani |

ತೆಹ್ರಾನ್‌: ಹಿಜಾಬ್‌ ವಿರುದ್ಧ ಸತತ ಎರಡು ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆಯ ಫ‌ಲವಾಗಿ ಕೊನೆಗೂ ನೈತಿಕ ಪೊಲೀಸ್‌ಗಿರಿಗೆ ಇರಾನ್‌ ಸರ್ಕಾರ ಅಂತ್ಯಹಾಡಿದೆ.

Advertisement

ಹಿಜಾಬ್‌ ಸರಿಯಾಗಿ ಧರಿಸಲಿಲ್ಲ ಎಂಬ ಕಾರಣಕ್ಕೆ ಸೆ.16ರಂದು ಮಹ್ಸಾ ಅಮಿನಿ(22) ಅವರನ್ನು ಇರಾನ್‌ನ ನೈತಿಕ ಪೊಲೀಸ್‌ ಪಡೆ ಬಂಧಿಸಿತ್ತು. ನಂತರ ಆಕೆ ಪೊಲೀಸರ ವಶದಲ್ಲಿರುವಂತೆಯೇ ಮೃತಪಟ್ಟಿದ್ದಳು.

ಈ ಹಿನ್ನೆಲೆಯಲ್ಲಿ ಪೊಲೀಸರ ನೈತಿಕಗಿರಿ ಖಂಡಿಸಿ ದೇಶಾದ್ಯಂತ ಮಹಿಳೆಯರು ಪ್ರತಿಭಟನೆ ಆರಂಭಿಸಿದರು. ಪ್ರತಿಭಟನೆ ವೇಳೆ ಹಲವರು ಮೃತಪಟ್ಟು, ಅನೇಕರು ಗಾಯಗೊಂಡರು. ನೂರಾರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಹಿಜಾಬ್‌ ವಿರುದ್ಧದ ಪ್ರತಿಭಟನೆ ಇತರೆ ದೇಶಗಳಿಗೂ ವಿಸ್ತರಿಸಿತು. ಅಂತಿಮವಾಗಿ, “ನೈತಿಕ ಪೊಲೀಸ್‌ಗಿರಿಗೆ ಕಾನೂನಿನ ಬೆಂಬಲ ಇಲ್ಲ. ಹೀಗಾಗಿ ಅದನ್ನು ವಿಸರ್ಜಿಸಲಾಗಿದೆ,’ ಎಂದು ಇರಾನ್‌ ಸರ್ಕಾರದ ಪರ ಅಟಾರ್ನಿ ಜನರಲ್‌ ಮೊಹಮ್ಮದ್‌ ಜಾಫ‌ರ್‌ ಮೊಂಟಜೇರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next