Advertisement
ಸುಮ್ಮನಿರಲ್ಲ ಎಂದ ಉಗ್ರರುಕೊಲೆಗಡುಕರಿಗೆ ತಕ್ಕ ಶಿಕ್ಷೆ ನೀಡುವುದು ಎಲ್ಲಾ ಬಂಡುಕೋರರ ಜವಾಬ್ದಾರಿಯಾಗಿದೆ. ಯುದ್ಧದಲ್ಲಿ ನಾವು ಪತಾಕೆಗಳನ್ನು ಹಾರಿಸುತ್ತೇವೆ. ಸುಲೇಮಾನಿಯ ರಕ್ತತರ್ಪಣದಿಂದ ನಮ್ಮ ಗೆಲುವಿಗೆ ಶಕ್ತಿದೊರೆತಿದೆ ಎಂದು ಹಿಜ್ಬುಲ್ ಉಗ್ರರ ಸಂಘಟನೆ ಮುಖ್ಯಸ್ಥ ಹಸನ್ ನಸ್ರುಲ್ಲಾ ಘೋಷಿಸಿಕೊಂಡಿದ್ದಾನೆ. ಇಸ್ರೇಲ್ ವಿರುದ್ಧ ಹೋರಾಟ ನಡೆಸುತ್ತಿರುವ ಹಿಜ್ಬುಲ್ ಉಗ್ರ ಸಂಘಟನೆಗೆ ಇರಾನ್ ಮೊದಲಿನಿಂದಲೂ ಬೆಂಬಲ ನೀಡುತ್ತಾ ಬಂದಿದೆ. ಸುಲೇಮಾನಿ ಅವರು ಈ ಉಗ್ರರಿಗೆ ನೆರವು ನೀಡುತ್ತಾ ಬಂದಿದ್ದರು. ಹೀಗಾಗಿ ನಾಯಕನನ್ನು ಕಳೆದುಕೊಂಡ ಈ ಉಗ್ರರು ಪ್ರತೀಕಾರದ ಬೆದರಿಕೆಯೊಡ್ಡಿದೆ.
ಉಗ್ರರ ಬೆದರಿಕೆ ಕಕೇಳಿಬಂದ ಬಳಿಕ ಲೆಬನಾನ್ ಗಡಿಯಲ್ಲಿ ಇಸ್ರೇಲ್ ತನ್ನ ಸೇನೆಯನ್ನು ನಿಯೋಜಿಸಿದೆ. ನೂರಾರು ಯುದ್ಧ ಟ್ಯಾಂಕರ್‌ಗಳನ್ನು ಸಜ್ಜುಗೊಳಿಸಲಾಗಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಗ್ರೀಸ್ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ. ಇರಾಕ್‌ಗೂ ತಟ್ಟಿದ ಬಿಸಿ
ಅಮೆರಿಕದ ದಾಳಿಯಲ್ಲಿ ಇರಾಕ್ ಸೇನೆಯ ಕಮಾಂಡರ್ ಸಹ ಹತ್ಯೆಯಾಗಿದ್ದಾರೆ. ಅಧಿಕೃತ ಹುದ್ದೆಯಲ್ಲಿದ್ದ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಇರಾಕ್ ಈ ಸನ್ನಿವೇಶ ಯುದ್ಧಕ್ಕೆ ನಾಂದಿಯಾಗಲಿದೆ ಎಂದಿದೆ. ಇರಾಕ್‌ನಲ್ಲಿ ನೆಲೆಸಿರುವ ಅಮೆರಿಕನ್ನರು ಈ ಕೂಡಲೆ ಹಿಂತಿರುಗಬೇಕು ಎಂದು ಸರಕಾರ ಸೂಚಿಸಿದೆ.
ಇರಾಕ್ ಪ್ರತಿಕಾರ ತೀರಿಸುವ ಭಯದಿಂದ ಅಮೆರಿಕವು ಈ ಆದೇಶ ಹೊರಡಿಸಿದೆ. ಅವರಿಗಾಗಿ ವಿಶೇಷ ವಿಮಾನಗಳ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಎಂದರೆ ಉಗ್ರರ ಧಮನಕ್ಕೆ ಅಮೆರಿಕ ಇರಾಕ್‌ನ ಸಹಾಯ ಪಡೆದುಕೊಂಡಿತ್ತು. ಆದರೆ ಈಗ ಅವರೇ ಶತ್ರುವಾಗಿದ್ದಾರೆ.
Related Articles
ಅಮೆರಿಕ ಮತ್ತು ಇರಾನ್ ಸಂಘರ್ಷದಿಂದಾಗಿ ಭಾರತ ಭಾರೀ ಸಮಸ್ಯೆಯನ್ನು ಎದುರಿಸಲಿದೆ. ಈಗಾಗಲೇ ಬ್ರೆಂಟ್ ಕಚ್ಚಾ ತೈಲದ ಬೆಲೆ ಡಾಲರ್‌ಗೆ ಶೇ 4.5ರಷ್ಟು ಏರಿಕೆಯಾಗಿ, 68.23 ಡಾಲರ್‌ಗೆ (4,895 ರೂ.) ತಲುಪಿದೆ. ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಹೆಚ್ಚಳವಾಗಿ, ಅವುಗಳ ಬೆಲೆಯೂ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇದು ಸಂಚಾರ ವೆಚ್ಚದ ಮೇಲೆ ಪರಿಣಾಮ ಬೀರಲಿದೆ. ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಲಿದೆ.
Advertisement
ಕೊಲ್ಲಿಯಲ್ಲಿ ಸಂಘರ್ಷ ಶಮನವಾಗದೇ ಇದ್ದರೆ ಎರಡನೇ ಹಂತದ ಪರಿಣಾಮಗಳನ್ನು ಎದುರಿಸಲು ಭಾರತ ಸಜ್ಜಾಗಬೇಕಾಗುತ್ತದೆ. ತೈಲ ಆಮದಿನ ಮೇಲೆ ದೇಶವು ಮಾಡಬೇಕಾದ ವೆಚ್ಚ ದುಪ್ಪಟ್ಟಾಗಲಿದೆ. ಅಗತ್ಯ ಇರುವ ತೈಲದ ಶೇ. 80ಕ್ಕಿಂತ ಹೆಚ್ಚು ಭಾಗವನ್ನು ಭಾರತವು ಆಮದು ಮಾಡಿಕೊಳ್ಳುತ್ತಿರುವುದರಿಂದ ಭಾರತ ಸಮಸ್ಯೆಯನ್ನು ಎದುರಿಸಲಿದೆ.
ಮುಂಗಡ ಪತ್ರಕ್ಕೆ ಹಿನ್ನಡೆಕೇಂದ್ರ ಸರಕಾರ ತನ್ನ ವಾರ್ಷಿಕ ಮುಂಗಡ ಪತ್ರವನ್ನು ತಯಾರಿಸುವ ಸಂದರ್ಭದಲ್ಲಿಯೇ ಈ ಬಿಕ್ಕಟ್ಟು ಸೃಷ್ಠಿಯಾಗಿದೆ. ಹಾಗಾಗಿ, ದೊಡ್ಡ ಮಟ್ಟದ ತೆರಿಗೆ ವಿನಾಯಿತಿ, ಅರ್ಥ ವ್ಯವಸ್ಥೆಯ ಚೇತರಿಕೆಗೆ ಕೈಗೊಳ್ಳಬಹುದಾದ ಕ್ರಮಗಳನ್ನು ನಾವು ನಿರೀಕ್ಷೆ ಮಾಡುವಂತಿಲ್ಲ ಎಂದು ಹೇಳಲಾಗುತ್ತಿದೆ. ಆಕರ್ಷಕ ವಿನಾಯಿತಿಗಳು ಈ ಬಜೆಟ್‌ನಲ್ಲಿ ಕಂಡುಬರುವುದು ಕಷ್ಟ ಎಂದು ಹೇಳಲಾಗುತ್ತಿದೆ. ಇನ್ನು ಈಗಾಗಲೇ ಹೇಳಲಾಗುತ್ತಿರುವ ಆದಾಯ ತೆರಿಗೆಯಲ್ಲಿ ಕಡಿತ ಈ ವರ್ಷ ಬಜೆಟ್‌ನಲ್ಲೂ ಮಂಡನೆಯಾಗುವುದು ಕಷ್ಟ ಎನ್ನಲಾಗುತ್ತಿದೆ. ತೈಲದ ಮೇಲೆ ಮಾಡುತ್ತಿರುವ ವೆಚ್ಚ ಹೆಚ್ಚುತ್ತಿರುವುದರ ಬಗ್ಗೆ ಆರ್‌ಬಿಐ ಈಗಾಗಲೇ ಕಳವಳ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಭಾರತದ ಶಾಂತಿ ಜಪ
ಮಧ್ಯಪ್ರಾಚ್ಯದಲ್ಲಿ ರಾಷ್ಟ್ರದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳುವಂತೆ ಭಾರತ ಕರೆ ಕೊಟ್ಟಿದೆ. ಸಂಘರ್ಷ ಮುಂದುವರಿದರೆ ಇರಾನ್‌ನಿಂದ ತೈಲ ಪೂರೈಕೆಗೆ ತೊಡಕಾಗಬಹುದು. ಅಮೆರಿಕದಿಂದ ಭಾರತಕ್ಕೆ ಜಲ ಮಾರ್ಗದ ಮೂಲಕ ಆಗುವ ತೈಲ ಪೊರೈಕೆಯನ್ನು ಇರಾನ್ ಗುರಿ ಮಾಡಿಕೊಳ್ಳುವ ಅಪಾಯವೂ ಇದೆ. ಈಗಾಗಲೇ ಅಮೆರಿಕ ಇರಾನ್‌ನಿಂದ ತೈಲ ಖರೀದಿ ಮಾಡಬಾರದು ಎಂದು ಭಾರತದ ಮೇಲೆ ಒತ್ತಡ ಹೇರುತ್ತಲೇ ಬಂದಿದೆ. ಇರಾನ್ ನಡೆ ಕುತೂಹಲ
ಈ ಹತ್ಯೆ ನಡೆದ ಬಳಿಕ ಬ್ಯಾರೆಲ್ ಕಚ್ಚಾ ತೈಲದ ಬೆಲೆ ಶೇ. 4ರಷ್ಟು ಏರಿಕೆ ಆಗಿದೆ. ಅಮೆರಿಕಕ್ಕೆ ಪ್ರತೀಕಾರ ತೀರಿಸಬೇಕು ಎನ್ನುತ್ತಿರುವ ಇರಾನ್ ಮೇಲೆ ಕೆಲವು ಆಯ್ಕೆಗಳಿವೆ. ಅವುಗಳಲ್ಲಿ ಮುಖ್ಯವಾದದ್ದು ಹರ್ಮಜ್ ಜಲಸಂಧಿಯನ್ನು ಮುಚ್ಚುವುದು. ಪರ್ಷಿಯನ್ ರಾಷ್ಟ್ರಗಳಿಂದ ತೈಲ ಬರುವುದಕ್ಕೆ ಇರುವ ಏಕೈಕ ಸಮುದ್ರ ಮಾರ್ಗ ಇದು. ಎರಡು ವರ್ಷಗಳ ಹಿಂದೆ ಅಮೆರಿಕವು ಇರಾನ್ ಮೇಲೆ ಆರ್ಥಿಕ ದಿಗ್ಬಂಧನ ಹಾಕಿದಾಗ ಹೀಗೇ ಮಾಡಲಾಗಿತ್ತು. ಟ್ರಂಪ್‌ಗೆ ಪ್ಲಸ್!
ಈಗಾಗಲೇ ಇಂಪೀಚ್‌ಮೆಂಟ್ ಅನ್ನು ಎದುರಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇದು ಪ್ಲಸ್ ಆಗಲಿದೆ ಎನ್ನಲಾಗುತ್ತಿದೆ. ಇದೇ ವರ್ಷಾಂತ್ಯದಲ್ಲಿ ಅಮೆರಿಕ ಚುನಾವಣೆ ನಡೆಯಲಿದ್ದು, ಅಂತಾರಾಷ್ಟ್ರೀಯವಾಗಿ ಮತ್ತೂಮ್ಮೆ ಅಮೆರಿಕದ ಶಕ್ತಿ ಪ್ರದರ್ಶನಕ್ಕೆ ವೇದಿಕೆ ನಿರ್ಮಿಸಲಾಗುತ್ತಿದೆ ಎಂಬ ಮಾತುಗಳೂ ಅಂತಾರಾಷ್ಟ್ರೀಯ ವಲಯದಲ್ಲಿ ಕೇಳಿಬಂದಿದೆ. ನೆರೆಯ ರಾಷ್ಟ್ರದ ಮೇಲೆ ದಾಳಿ ಸಾಧ್ಯತೆ
ಪರ್ಷಿಯನ್ ಗಲ್ಫ್ ಮತ್ತು ಮಧ್ಯಪ್ರಾಚ್ಯದ ಮೇಲೆ ಇರಾನ್ ದಾಳಿ ನಡೆಸಬಹುದು ಎಂಬ ಮಾತು ಕೇಳಿಬರುತ್ತಿದೆ. ಕಳೆದ ವರ್ಷ ಸೌದಿ ಅರೇಬಿಯಾದ ತೈಲ ಘಟಕಗಳ ಮೇಲೆ ದಾಳಿ ಆಗಿ, ಉತ್ಪಾದನೆ ಮೇಲೆ ಪರಿಣಾಮ ಆಗಿತ್ತು. ಅದೇ ರೀತಿಯದು ಅಥವಾ ಅದಕ್ಕಿಂತ ದೊಡ್ಡ ಮಟ್ಟದಲ್ಲಿ ದಾಳಿ ನಡೆದರೆ ತೈಲ ಸರಬರಾಜಿನಲ್ಲಿ ಕೊರತೆಯಾಗಲಿದೆ. ಇದರಿಂದ ಪರೋಕ್ಷವಾಗಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಲಿದೆ. ಸದ್ಯಕ್ಕೆ ಇಂಧನ ಬೆಲೆ ಪ್ರತಿದಿನವೂ ಪರಿಷ್ಕರಣೆಯಾಗುತ್ತಿದ್ದು, ಅಂತಾರಾಷ್ಟ್ರೀಯ ದರ ಮತ್ತು ವಿದೇಶಿ ವಿನಿಮಯ ದರದ ಆಧಾರದಲ್ಲಿ ಬೆಲೆ ನಿರ್ಧರಿಸಲಾಗುತ್ತದೆ. ದರ ಏರಿಕೆಯ ಬಿಸಿ
ಭಾರತಕ್ಕೆ ತೈಲ ಪೂರೈಸುವ ಪ್ರಮುಖ ದೇಶಗಳಲ್ಲಿ ಇರಾನ್ ಕೂಡ ಒಂದು. 2018-19ರಲ್ಲಿ ಇರಾನ್‌ನಿಂದ 2.3 ಕೋಟಿ ಟನ್ ತೈಲ ಆಮದಾಗಿದೆ. ಇದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 5ರಷ್ಟು ಹೆಚ್ಚು ಎಂಬುದು ಗಮನಾರ್ಹ. ಭಾರತಕ್ಕೆ ಇರಾಕ್ ಮತ್ತು ಸೌದಿ ಅರೇಬಿಯಾದ ಅತಿ ಹೆಚ್ಚು ತೈಲ ಪೂರೈಸುವ ದೇಶವಾಗಿದ್ದು, ಬಳಿಕದ ಸ್ಥಾನದಲ್ಲಿ ಇರಾನ್ ಇದೆ. ಡಿಸೆಂಬರ್ 2ರ ಬಳಿಕ ಕಚ್ಚಾ ತೈಲದ ಬೆಲೆ ಶೇ. 14ರಷ್ಟು ಏರಿಕೆಯಾಗಿದೆ. ಹಾಗಾಗಿ, ಈಗಿನ ಪರಿಸ್ಥಿತಿಯೇ ಭಾರತದ ಬಜೆಟ್ ಲೆಕ್ಕಾಚಾರವನ್ನು ಏರುಪೇರಾಗಿಸಬಹುದು. ಸೌದಿಯ ಅರಾಮ್ಕೊ ಕಂಪೆನಿಯ ಮೇಲೆ ಕಳೆದ ಸೆಪ್ಟೆಂಬರ್‌ನಲ್ಲಿ ಡ್ರೋನ್ ದಾಳಿಯಾದಾಗ ಕಚ್ಚಾ ತೈಲ ಬೆಲೆ ಬ್ಯಾರಲ್ ಒಂದಕ್ಕೆ 71.95 ಡಾಲರ್ ಏರಿಕೆಯಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.