ಐಕ್ಯೂ ನಿಯೋ 6(iQoo Neo 6) ಸ್ಮಾರ್ಟ್‌ಫೋನ್ ಭಾರತದಲ್ಲಿ ಮಂಗಳವಾರ ಬಿಡುಗಡೆಯಾಗಿದೆ.
Advertisement
ಸ್ನ್ಯಾಪ್‌ಡ್ರ್ಯಾಗನ್ 870 ಎಸ್‌ಒಸಿ ಇದರಲ್ಲಿದೆ. 6.62 ಇಂಚಿನ ಡಿಸ್‌ಪ್ಲೇ ಇರುವ ಫೋನಿನಲ್ಲಿ ಲಿಕ್ವಿಡ್ ಕೂಲಿಂಗ್ ವೇಪರ್ ಚೇಂಬರ್ ಇದೆ.
ತ್ರಿಬಲ್ ರೇರ್ ಕ್ಯಾಮರಾ ಇದ್ದು, 64ಎಂಪಿ ಫ್ರಂಟ್ ಕ್ಯಾಮರಾ ಹಾಗೂ 16ಎಂಪಿ ಸೆಲ್ಫಿ ಕ್ಯಾಮರಾವಿದೆ. 4,700ಎಂಎಎಚ್ ಬ್ಯಾಟರಿ ಸಾಮರ್ಥ್ಯದ ಜತೆ 80 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ.
8GB RAM ಜತೆ 128ಜಿಬಿ ಇಂಟರ್‌ನಲ್ ಸ್ಟೋರೇಜ್ ಇರುವ ಫೋನಿನ ಬೆಲೆ 29,999 ರೂ. ಇದ್ದರೆ, 12GB RAM ಜತೆ 256ಜಿಬಿ ಇಂಟರ್‌ನಲ್ ಸ್ಟೋರೇಜ್ ಇರುವ ಫೋನಿನ ಬೆಲೆ 33,999 ರೂ. ಆಗಿದೆ.