Advertisement
ಗುಜರಾತ್ ಟೈಟಾನ್ಸ್‌ಗೆ ಸೋಲುಣಿಸುವ ಮೂಲಕ ಆರ್‌ಸಿಬಿ 4ನೇ ಸ್ಥಾನಕ್ಕೆ ನೆಗೆದಿದ್ದು, 16 ಅಂಕಗಳೊಂದಿಗೆ ಪ್ಲೇ ಆಫ್ನತ್ತ ಮುಖ ಮಾಡಿದೆ. ಡೆಲ್ಲಿ 14 ಅಂಕ ಹೊಂದಿದ್ದು, ಮುಂಬೈಯನ್ನು ಸಣ್ಣ ಅಂತರದಿಂದ ಮಣಿಸಿದರೂ ಮುಂದಿನ ಸುತ್ತು ಪ್ರವೇಶಿಸಲಿದೆ.
Related Articles
Advertisement
ಡೆಲ್ಲಿಗೆ ಗೆಲುವು ಅನಿವಾರ್ಯಸದ್ಯ 5ನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಈ ಸೀಸನ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. 13 ಪಂದ್ಯಗಳಲ್ಲಿ ಏಳನ್ನಷ್ಟೇ ಜಯಿಸಿದೆ. ಇನ್ನೇನು ಹೊರ ಬೀಳಲಿದೆ ಎಂಬ ಹಂತದಲ್ಲಿ ಮೊದಲ ಸಲ ಸತತ 2 ಪಂದ್ಯಗಳನ್ನು ಗೆದ್ದಿದೆ. ಹಿಂದಿನೆರಡು ಪಂದ್ಯಗಳಲ್ಲಿ ರಾಜಸ್ಥಾನ್ ಮತ್ತು ಪಂಜಾಬ್ ವಿರುದ್ಧ 8 ವಿಕೆಟ್ ಹಾಗೂ 17 ರನ್ನುಗಳಿಂದ ಗೆದ್ದು ಪ್ಲೇ ಆಫ್ಗೆ ಹತ್ತಿರವಾಗಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಬೇಕಾದರೆ ಅದು ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡಬೇಕಾಗುತ್ತದೆ. ಡೆಲ್ಲಿ ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದ ಪ್ರಮುಖನೆಂದರೆ ಆರಂಭ ಕಾರ ಡೇವಿಡ್ ವಾರ್ನರ್. ಅವರು 427 ರನ್ ಹೊಡೆದಿದ್ದಾರೆ. ಆದರೆ ಹಿಂದಿನ ಪಂದ್ಯದಲ್ಲಿ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದ್ದಾರೆ. ಇವರ ಜತೆಗಾರ ಯಾರು ಎಂಬ ಪ್ರಶ್ನೆ ಇದೆ. ಪೃಥ್ವಿ ಶಾ ಅನಾರೋಗ್ಯದಿಂದ ಚೇತರಿಸಿಕೊಂಡರೂ ಇನ್ನೂ ಆಡ ಲಿಳಿದಿಲ್ಲ. ಈ ನಡುವೆ ಇನ್ನಿಂಗ್ಸ್ ಆರಂಭಿಸಿದ ಶ್ರೀಕರ್ ಭರತ್, ಮನ್‌ದೀಪ್ ಸಿಂಗ್ ವಿಫಲರಾಗಿದ್ದಾರೆ. ಕಳೆದ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಿದ ಸಫìರಾಜ್ ಖಾನ್ 32 ರನ್ ಮಾಡಿದರೂ ವಾರ್ನರ್ ಸೊನ್ನೆ ಸುತ್ತಿದರು. ಆಸ್ಟ್ರೇಲಿಯದ ಮತ್ತೋರ್ವ ಆಟಗಾರ ಮಿಚೆಲ್ ಮಾರ್ಷ್ ಕೂಡ ಉತ್ತಮ ಲಯದಲ್ಲಿದ್ದಾರೆ (257 ರನ್). ವಿಕೆಟ್ ಕೂಡ ಕೀಳಬಲ್ಲರು. ನಾಯಕ ರಿಷಭ್ ಪಂತ್ (301 ರನ್), ರೋವ¾ನ್ ಪೊವೆಲ್ (207 ರನ್) ನಿರ್ಣಾಯಕ ಪಂದ್ಯದಲ್ಲಿ ಸಿಡಿದು ನಿಲ್ಲಬೇಕಿದೆ. ಬೌಲಿಂಗ್ ಹೀರೋಗಳೆಂದರೆ ಕುಲದೀಪ್ ಯಾದವ್ (20 ವಿಕೆಟ್), ಖಲೀಲ್ ಅಹ್ಮದ್ (16 ವಿಕೆಟ್) ಮತ್ತು ಶಾರ್ದೂಲ್ ಠಾಕೂರ್ (13 ವಿಕೆಟ್). ಮುಸ್ತಫಿಜುರ್, ಅಕ್ಷರ್ ಪಟೇಲ್, ಲಲಿತ್ ಯಾದವ್ ವಿಕೆಟ್ ಬೇಟೆಯಲ್ಲಿ ಅಷ್ಟೇನೂ ಕ್ಲಿಕ್ ಆಗಿಲ್ಲ. ಆದರೆ ಎದು ರಾಳಿ ಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಮುಂಬೈಗೆ ಒತ್ತಡವೇನಿಲ್ಲ…
5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಬಾರಿ ಗೆಲುವಿನ ಖಾತೆ ತೆರೆದದ್ದೇ 9ನೇ ಪಂದ್ಯದಲ್ಲಿ. ಹರಾಜು ವೇಳೆ ಮಾಡಿಕೊಂಡ ಕೆಲವು ಎಡವಟ್ಟಿನಿಂದಾಗಿ ರೋಹಿತ್ ಪಡೆಗೆ ಈ ಸ್ಥಿತಿ ಎದುರಾಗಿದೆ ಎಂಬುದು ರಹಸ್ಯವೇನಲ್ಲ. ಅದೇನೇ ಇದ್ದರೂ ಮುಂಬೈ ಯಾವುದೇ ಒತ್ತಡವಿಲ್ಲದೆ ಡೆಲ್ಲಿಯನ್ನು ಎದುರಿಸಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಡೆಲ್ಲಿಗೆ ಇಲ್ಲಿ ಗೆಲ್ಲಲೇಬೇಕಾದ ಒತ್ತಡವಿದೆ. ಹೀಗಾಗಿ ಪಂತ್ ಪಡೆ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡಬೇಕಾದುದು ಅನಿವಾರ್ಯ.