ಅಬುಧಾಬಿ : ಐಪಿಎಲ್ ನ 39 ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಗಿಳಿದ ಮಾರ್ಗನ್ ಪಡೆ ಆರ್ ಸಿಬಿ ಬೌಲಿಂಗ್ ದಾಳಿಗೆ ನಾಟಕೀಯ ಕುಸಿತ ಕಂಡಿದೆ. ನಿಗದಿತ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 84 ರ ಸಾಧಾರಣ ಮೊತ್ತ ಪೇರಿಸಿ 85 ರ ಸುಲಭ ಸಾಧ್ಯತೆಯ ಗುರಿಯನ್ನು ನೀಡಿದೆ.
ಪ್ರಾರಂಭಿಕರಾಗಿ ಅಂಕಣಕ್ಕಿಳಿದ ಶುಭ್ ಮನ್ ಗಿಲ್ ಹಾಗೂ ರಾಹುಲ್ ತ್ರಿಪಾಠಿ ನಿರೀಕ್ಷಿತ ಮಟ್ಟದ ಆರಂಭ ನೀಡುವಲ್ಲಿ ವಿಫಲರಾದರು. ತ್ರಿಪಾಠಿ 1 ರನ್ ಗಳಿಸಿ ಸಿರಾಜ್ ಎಸತೆಕ್ಕೆ ಡಿವಿಲಿಯರ್ಸ್ ಕೈ ಗೆ ಕ್ಯಾಚ್ ಕೊಟ್ಟು ನಿರ್ಗಸಿದರು. ಶುಭ್ ಮನ್ ಗಿಲ್ 1 ರನ್ ಗಳಿಸಿ ಸೈನಿ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ನಿತೇಶ್ ರಾಣಾ ಸಿರಾಜ್ ಎಸೆತಕ್ಕೆ ಬೌಲ್ಡ್ ಔಟ್ ಆದರು. ಟಾಮ್ ಬಾಂಟನ್ ಸಿರಾಜ್ ಎಸೆತಕ್ಕೆ ಕೀಪರ್ ಕ್ಚಾಚ್ ಕೊಟ್ಟು ತಂಡಕ್ಕೆ 10 ರನ್ ಕೊಡುಗೆ ನೀಡಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.
ಪ್ರಾರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ ಕೆಕೆಆರ್ ದಿನೇಶ ಕಾರ್ತಿಕ್ ಹಾಗೂ ಪ್ಯಾಟ್ ಕೆಮ್ಮಿನ್ಸ್ ವಿಕೆಟ್ ಬಳಿಕ ಮತ್ತಷ್ಟು ಒತ್ತಡಕ್ಕೆ ಸಿಲುಕಿತ್ತು. ನಾಯಕ ಮಾರ್ಗನ್ 30 ರನ್ ಗಳಿಸಿ ತಂಡಕ್ಕೆ ಸುಂದರ್ ಎಸೆತದಲ್ಲಿ ಕ್ಯಾಚ್ ಕೊಟ್ಟು ನಿರ್ಗಸಿದರು. ಆರ್ ಸಿಬಿ ಬಿಗು ಬೌಲಿಂಗ್ ದಾಳಿಗೆ ಕೆಕೆಆರ್ 84 ರನ್ ಗಳಿಸಿ 85 ರ ಅಲ್ಪ ಮೊತ್ತದ ಸವಾಲನ್ನು ನೀಡಿದೆ.
ಆರ್ ಸಿಬಿ ಪರ ಮಿಂಚಿದ ಮೊಹಮ್ಮದ್ ಸಿರಾಜ್ 2 ರನ್ ರಹಿತ ಓವರ್ ನೊಂದಿಗೆ 3 ಪ್ರಮುಖ ವಿಕೆಟ್ ಗಳನ್ನು ಪಡೆದರು. ಚಹಲ್ 2 ವಿಕೆಟ್ ಪಡೆದ್ರೆ, ವಾಷಿಂಗ್ಟನ್ ಸುಂದರ್ ಹಾಗೂ ನವದೀಪ್ ಸೈನಿ ತಲಾ 1 ವಿಕೆಟ್ ಪಡೆದರು.