ದುಬೈ : ಡೆಲ್ಲಿ ಹಾಗೂ ರಾಜಸ್ಥಾನ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ.
ಈ ಆವೃತ್ತಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಎಲ್ಲವೂ ಸರಿ ದಾರಿಯಲ್ಲೇ ಸಾಗುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ಇದುವರೆಗೆ 7 ಪಂದ್ಯವನ್ನು ಆಡಿದ್ದು, ಅದರಲ್ಲಿ 5 ರಲ್ಲಿ ಗೆಲವು ಸಾಧಿಸಿ 2 ಪಂದ್ಯದಲ್ಲಿ ಸೋತು, ಸದ್ಯ ಅಂಕಪಟ್ಟಿಯಲ್ಲಿ 10 ಅಂಕದೊಂದಿಗೆ ಎರಡನೇ ಸ್ಥಾನದೊಂದಿಗೆ ಬಲಿಷ್ಠವಾಗಿ ನೆಲೆ ನಿಂತಿದೆ. ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಶ್ರೇಯಸ್ ಪಡೆ ಗೆಲುವಿನ ನಿರೀಕ್ಷೆಯಲ್ಲಿದೆ.
ಇತ್ತ ಸ್ಟೀವನ್ ಸ್ಮಿತ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಗೆಲುವಿನ ಹಾದಿಗೆ ಮರಳಲು ಹರ ಸಾಹಸ ಪಡುತ್ತಿದೆ. ಇದುವರಗೆ ಆಡಿದ 7 ಪಂದ್ಯದಲ್ಲಿ 4 ರಲ್ಲಿ ಸೋತಿದ್ದು, 3 ಪಂದ್ಯದಲ್ಲಿ ಗೆಲುವು ಸಾಧಿಸಿ 6 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದೆ. ಸ್ಟೋಕ್ಸ್ ಆಗಮನ ತಂಡಕ್ಕೆ ಬಲ ಬಂದಂತೆ ಭಾಸವಾದರೂ, ಗೆಲುವಿನ ಹಾದಿಯಲ್ಲಿ ನಿರಂತರ ಓಟ ರಾಜಸ್ಥಾನ್ ತಂಡಕ್ಕೆ ಅನಿವಾರ್ಯವಾಗಿದೆ.
ಡೆಲ್ಲಿ ತಂಡ ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋಲೊಪ್ಪಿಕೊಂಡಿದ್ದು, ಗೆಲುವಿನ ಟ್ರ್ಯಾಕ್ ಗೆ ಮರಳುವ ಪ್ರಯತ್ನದಲ್ಲಿದೆ. ರಾಜಸ್ಥಾನ್ ತಂಡ ಕಳೆದ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಮಣಿಸಿದ ಉತ್ಸಾಹದಲ್ಲಿದೆ. ಸೋಲು ಗೆಲುವಿನ ಆಟದಲ್ಲಿ ಎರಡು ತಂಡಗಳ ಹೋರಾಟಕ್ಕೆ ದುಬೈ ಮೈದಾನ ಸಾಕ್ಷಿಯಾಗಲಿದೆ.
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ ಇಲೆವೆನ್): ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ಕೀಪರ್), ಸ್ಟೀವನ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಜೋಫ್ರಾ ಆರ್ಚರ್, ಶ್ರೇಯಾಸ್ ಗೋಪಾಲ್, ಜಯದೇವ್ ಉನಾದ್ಕಟ್, ಕಾರ್ತಿಕ್ ತ್ಯಾಗಿ
ದೆಹಲಿ ಕ್ಯಾಪಿಟಲ್ಸ್ (ಇಲೆವೆನ್ ಪ್ಲೇಯಿಂಗ್): ಪೃಥ್ವಿ ಶಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ಮಾರ್ಕಸ್ ಸ್ಟೋನಿಸ್, ಅಲೆಕ್ಸ್ ಕ್ಯಾರಿ (ಕೀಪರ್), ಆಕ್ಸಾರ್ ಪಟೇಲ್, ರವಿಚಂದ್ರನ್ ಅಶ್ವಿನ್, ತುಷಾರ್ ದೇಶಪಾಂಡೆ, ಕಗಿಸೊ ರಬಡಾ, ಅನ್ರಿಚ್ ನಾರ್ಟ್ಜೆ