Advertisement
ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ತಂಡ ಈ ಬಾರಿ ಉತ್ತಮ ಲಯದಲ್ಲಿದ್ದು ಇದುವರೆಗೆ ಆಡಿದ 12 ಪಂದ್ಯದಲ್ಲಿ 7 ರಲ್ಲಿ ಜಯಗಳಿಸಿದ್ದು, 5 ಪಂದ್ಯದಲ್ಲಿ ಮುಗ್ಗರಿಸಿದೆ. ಸದ್ಯ ಅಂಕಪಟ್ಟಿಯಲ್ಲಿ ಡೆಲ್ಲಿ 14 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ಕೂಡ ಆರ್‌ಸಿಬಿಯಂತೆ 2 ಅಂಕಗಳ ಹುಡುಕಾಟದಲ್ಲಿದೆ. ಆದರೆ ಆರಂಭಿಕ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಅಯ್ಯರ್ ಬಳಗವೀಗ ಸತತವಾಗಿ ಎಡವುತ್ತಿರುವುದು ವಿಪರ್ಯಾಸವೇ ಸರಿ. ಮುಂಬೈ ಸವಾಲು ಖಂಡಿತವಾಗಿಯೂ ಸುಲಭದ್ದಲ್ಲ. ಮುಂಬೈ ಸೇಫ್ ಝೋನ್ : ಸದ್ಯ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಹಂತಕ್ಕೆ ದಾಪುಗಾಲಿಟ್ಟ ಮೊದಲ ತಂಡವಾಗಿದ್ದು. ಮೊದಲ ಸುತ್ತಿನಲ್ಲಿ ಉಳಿದ ಪಂದ್ಯದಲ್ಲಿ ಸೋತರು ಅದು, ಮುಂದಿನ ಸುತ್ತಿನ ಲೆಕ್ಕಚಾರಕ್ಕೆ ಅಡ್ಡಿಯಾಗದು. ಮುಂಬೈ ಇದುವರೆಗೆ ಆಡಿದ 12 ಪಂದ್ಯದಲ್ಲಿ 8 ರಲ್ಲಿ ಮೇಲುಗೈ ಸಾಧಿಸಿ, 4 ರಲ್ಲಿ ಸೋತು ಅಂಕ ಪಟ್ಟಿಯಲ್ಲಿ 16 ಅಂಕದೊಂದಿಗೆ ಅಗ್ರಸ್ಥಾನಿಯಾಗಿ ನೆಲೆಯೂರಿದೆ. ರೋಹಿತ್ ಗೈರಲ್ಲೂ ಅದು ಗೆಲ್ಲುತ್ತ ಬಂದಿದೆ. ಬ್ಯಾಟಿಂಗ್ ಲೈನ್‌ಅಪ್ ಸೂಪರ್ಬ್. ಬೌಲಿಂಗ್ ಡಿಪಾರ್ಟ್ ಮೆಂಟ್ ಬಗ್ಗೆ ಎರಡು ಮಾತಿಲ್ಲ. ಇದನ್ನೆಲ್ಲ ಗಮನಿಸುವಾಗ ಮುಂಬೈ ತನ್ನ ಅಂಕವನ್ನು 18ಕ್ಕೆ ಏರಿಸಿಕೊಂಡರೂ ಅಚ್ಚರಿ ಇಲ್ಲ ಎನಿಸುತ್ತದೆ.
Related Articles
Advertisement
ದೆಹಲಿ ರಾಜಧಾನಿಗಳು (ಪ್ಲೇಯಿಂಗ್ ಇಲೆವೆನ್): ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್ (ಕೀಪರ್), ಶಿಮ್ರಾನ್ ಹೆಟ್ಮಿಯರ್, ಮಾರ್ಕಸ್ ಸ್ಟೊಯಿನಿಸ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರವಿಚಂದ್ರನ್ ಅಶ್ವಿನ್, ಪ್ರವೀಣ್ ದುಬೆ, ಅನ್ರಿಚ್ ನಾರ್ಟ್ಜೆ