Advertisement

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

12:45 AM Apr 30, 2024 | Team Udayavani |

ಅಹ್ಮದಾಬಾದ್‌: ಆರ್‌ಸಿಬಿ ಪಾಳೆಯದಲ್ಲಿ ಡ್ಯಾಶಿಂಗ್‌ ಬ್ಯಾಟರ್‌ ವಿಲ್‌ ಜಾಕ್ಸ್‌ ಭಾರೀ ಸಂಚಲನ ಮೂಡಿಸಿದ್ದಾರೆ. ಗುಜರಾತ್‌ ಎದುರಿನ ಪಂದ್ಯದಲ್ಲಿ ಕೇವಲ 41 ಎಸೆತಗಳಿಂದ ಸೆಂಚುರಿ ಬಾರಿಸಿದ ಹಿರಿಮೆ ಇವರದು. ಈ ಆರ್ಭಟದ ವೇಳೆ, 50ರಿಂದ 100 ರನ್‌ ತಲುಪಲು ಜಾಕ್ಸ್‌ ಎದುರಿಸಿದ್ದು ಕೇವಲ 10 ಎಸೆತ. ಕೊನೆಯ ಅರ್ಧ ಶತಕವನ್ನು ಕೇವಲ 6 ನಿಮಿಷಗಳಲ್ಲಿ ಬಾರಿಸಿದರು! ಇದು ಸಮಯದ ಲೆಕ್ಕಾಚಾರದಲ್ಲಿ ಟಿ20 ಇತಿಹಾಸದ ಶರವೇಗದ ಅರ್ಧಶತಕ. ಸಂಜೆ 6 ಗಂಟೆ 41 ನಿಮಿಷಕ್ಕೆ ಜಾಕ್ಸ್‌ ಅವರ ಅರ್ಧ ಶತಕ ಪೂರ್ತಿಗೊಂಡಿತ್ತು. ಶತಕ ದಾಖಲಾಗುವ ವೇಳೆ 6 ಗಂಟೆ 47 ನಿಮಿಷ ಆಗಿತ್ತು!

Advertisement
Advertisement

Udayavani is now on Telegram. Click here to join our channel and stay updated with the latest news.

Next