Advertisement

ಐಪಿಎಲ್‌ ಟೈ ಮ್ಯಾಚ್‌-06: ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಪಂಜಾಬ್‌ ಪರಾಕ್ರಮ

01:14 AM May 15, 2022 | Team Udayavani |

2015ರ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ನಡುವಿನ ದೊಡ್ಡ ಮೊತ್ತದ ಪಂದ್ಯವೊಂದು ರೋಚಕವಾಗಿ ಸಾಗಿ ಕೊನೆಗೆ “ಟೈ’ಯಲ್ಲಿ ಅಂತ್ಯ ಕಂಡಿತು. ಅಹ್ಮದಾಬಾದ್‌ನಲ್ಲಿ ನಡೆದ ಈ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌ 6 ವಿಕೆಟಿಗೆ 191 ರನ್‌ ಪೇರಿಸಿದರೆ, ಪಂಜಾಬ್‌ ಕೂಡ 6 ವಿಕೆಟ್‌ ಕಳೆದುಕೊಂಡು ಇಷ್ಟೇ ರನ್‌ ಬಾರಿಸಿತು. ಸೂಪರ್‌ ಓವರ್‌ನಲ್ಲಿ ಪಂಜಾಬ್‌ ಗೆಲುವಿನ ಬಾವುಟ ಹಾರಿಸಿತು.

Advertisement

ಕ್ರಿಸ್‌ ಮಾರಿಸ್‌ ಎಸೆದ ಸೂಪರ್‌ ಓವರ್‌ನ ಮೊದಲ ಎಸೆತದಲ್ಲೇ ಪಂಜಾಬ್‌ ಡೇವಿಡ್‌ ಮಿಲ್ಲರ್‌ ವಿಕೆಟ್‌ ಕಳೆದುಕೊಂಡಿತು. ಆದರೆ ಆಸ್ಟ್ರೇಲಿಯದ ಗ್ಲೆನ್‌ ಮ್ಯಾಕ್ಸ್‌ವೆಲ್‌-ಶಾನ್‌ ಮಾರ್ಷ್‌ 15 ರನ್‌ ಒಟ್ಟುಗೂಡಿಸುವಲ್ಲಿ ಯಶಸ್ವಿಯಾದರು. ಅಂತಿಮ ಎಸೆತದಲ್ಲಿ ಶಾನ್‌ ಮಾರ್ಷ್‌ ರನೌಟ್‌ ಆದರು. ಹೀಗಾಗಿ ನಾಲ್ಕೇ ಎಸೆತಗಳಲ್ಲಿ 15 ರನ್‌ ಬಂದಂತಾಯಿತು. ಇದರಲ್ಲಿ ಫ‌ುಲ್‌ಟಾಸ್‌ ಎಸೆತವೊಂದು ನೋಬಾಲ್‌ ಆಗಿ ಬೌಂಡರಿ ದಾಟಿತ್ತು. ಹೀಗಾಗಿ 5 ರನ್‌ ಬೋನಸ್‌ ರೂಪದಲ್ಲಿ ಸಿಕ್ಕಿತು.

ಗೆಲುವಿಗೆ 16 ರನ್‌ ಗಳಿಸಬೇಕಾದ ರಾಜಸ್ಥಾನ್‌ ರಾಯಲ್ಸ್‌ ಕೂಡ ಮೊದಲ ಎಸೆತದಲ್ಲೇ ವಿಕೆಟ್‌ ಉದುರಿಸಿಕೊಂಡಿತು. ಮಿಚೆಲ್‌ ಜಾನ್ಸನ್‌ ಎಸೆತಕ್ಕೆ ಅವರದೇ ನಾಡಿದ ಶೇನ್‌ ವಾಟ್ಸನ್‌ ಬೌಲ್ಡ್‌ ಆದರು. 3ನೇ ಎಸೆತಕ್ಕೆ ಜೇಮ್ಸ್‌ ಫಾಕ್ನರ್‌ ರನೌಟಾದರು. ಅಲ್ಲಿಗೆ ರಾಜಸ್ಥಾನ್‌ ಕತೆ ಮುಗಿಯಿತು. ಅದು ಎರಡೂ ವಿಕೆಟ್‌ ಕಳೆದುಕೊಂಡು ಕೇವಲ 6 ರನ್‌ ಗಳಿಸಿತು. ಈ ಆರರಲ್ಲಿ 5 ರನ್‌ ನೋಬಾಲ್‌ ರೂಪದಲ್ಲಿ ಬಂದಿತ್ತು!

ಪಂಜಾಬ್‌ ಪಂಚ್‌
192 ರನ್‌ ಚೇಸಿಂಗ್‌ ವೇಳೆ ಪಂಜಾಬ್‌ಗ ಗೆಲುವಿನ ಅವಕಾಶ ಕಡಿಮೆ ಇತ್ತು. ಕೊನೆಯ 2 ಓವರ್‌ಗಳಲ್ಲಿ 4 ವಿಕೆಟ್‌ ನೆರವಿನಿಂದ 25 ರನ್‌ ಗಳಿಸಬೇಕಾದ ತೀವ್ರ ಒತ್ತಡವಿತ್ತು. ಸ್ಪೆಷಲಿಸ್ಟ್‌ ಬ್ಯಾಟ್ಸ್‌ಮನ್‌ಗಳೂ ಕ್ರೀಸ್‌ನಲ್ಲಿರಲಿಲ್ಲ. ಅಕ್ಷರ್‌ ಪಟೇಲ್‌ ಮತ್ತು ಮಿಚೆಲ್‌ ಜಾನ್ಸನ್‌ ಮೇಲೆ ಯಾರೂ ನಿರೀಕ್ಷೆ ಇರಿಸಿರಲಿಲ್ಲ. ಆದರೆ ಕ್ರಿಸ್‌ ಮಾರಿಸ್‌ ಎಸೆದ 19ನೇ ಓವರ್‌ನಲ್ಲಿ ಇವರಿಬ್ಬರು ಸೇರಿಕೊಂಡು 11 ರನ್‌ ಹೊಡೆದರು. ಅಂತಿಮ ಓವರ್‌ನಲ್ಲಿ 14 ರನ್‌ ಗುರಿ ಎದುರಾಯಿತು.
ಬೌಲರ್‌ ಜೇಮ್ಸ್‌ ಫಾಕ್ನರ್‌. ಮೊದಲ 3 ಎಸೆತಗಳಲ್ಲಿ ಜಾನ್ಸನ್‌ 5 ರನ್‌ ಗಳಿಸಿದರು (2, 2, 1). ಮುಂದಿನೆರಡು ಎಸೆತಗಳಲ್ಲಿ ಅಕ್ಷರ್‌ ಪಟೇಲ್‌ 4 ರನ್‌ ಹೊಡೆದರು (2, 2). ಅಂತಿಮ ಎಸೆತದಲ್ಲಿ ಸಿಕ್ಸರ್‌ ಸಿಡಿಯಬೇಕಿತ್ತು. ಆದರೆ ಅಕ್ಷರ್‌ ಬೌಂಡರಿ ಬಾರಿಸುವಲ್ಲಿ ಯಶಸ್ವಿಯಾದರು. ಗೆಲುವಿನ ನಿರೀಕ್ಷೆಯಲ್ಲಿದ್ದ ರಾಜಸ್ಥಾನಕ್ಕೆ ಅದೃಷ್ಟ ಕೈಕೊಟ್ಟಿತು. ಸೂಪರ್‌ ಓವರ್‌ನಲ್ಲೂ ಲಕ್‌ ಕೈಹಿಡಿಯಲಿಲ್ಲ.

ಸ್ಕೋರ್‌ ಪಟ್ಟಿ
ರಾಜಸ್ಥಾನ್‌ ರಾಯಲ್ಸ್‌
ಅಜಿಂಕ್ಯ ರಹಾನೆ ಸಿ ಸಾಹಾ ಬಿ ಜಾನ್ಸನ್‌ 74
ಶೇನ್‌ ವಾಟ್ಸನ್‌ ಸ್ಟಂಪ್ಡ್ ಸಾಹಾ ಬಿ ಪಟೇಲ್‌ 45
ದೀಪಕ್‌ ಹೂಡಾ ಬಿ ಶಿವಂ 19
ಸ್ಟೀವನ್‌ ಸ್ಮಿತ್‌ ಸಿ ಮ್ಯಾಕ್ಸ್‌ವೆಲ್‌ ಬಿ ಪಟೇಲ್‌ 0
ಕರುಣ್‌ ನಾಯರ್‌ ಸಿ ಪಟೇಲ್‌ ಬಿ ಅನುರೀತ್‌ 25
ಜೇಮ್ಸ್‌ ಫಾಕ್ನರ್‌ ಸಿ ಮ್ಯಾಕ್ಸ್‌ವೆಲ್‌ ಬಿ ಸಂದೀಪ್‌ 1
ಸ್ಟುವರ್ಟ್‌ ಬಿನ್ನಿ ಔಟಾಗದೆ 12
ಸಂಜು ಸ್ಯಾಮ್ಸನ್‌ ಔಟಾಗದೆ 5
ಇತರ 10
ಒಟ್ಟು (6 ವಿಕೆಟಿಗೆ) 191
ವಿಕೆಟ್‌ ಪತನ: 1-95, 2-136, 3-137, 4-162, 5-166, 6-175.
ಬೌಲಿಂಗ್‌:
ಸಂದೀಪ್‌ ಶರ್ಮ 4-0-25-1
ಅನುರೀತ್‌ ಸಿಂಗ್‌ 4-0-41-1
ಮಿಚೆಲ್‌ ಜಾನ್ಸನ್‌ 4-0-33-1
ಅಕ್ಷರ್‌ ಪಟೇಲ್‌ 4-0-30-2
ಶಿವಂ ಶರ್ಮ 3-0-44-1
ಗ್ಲೆನ್‌ ಮ್ಯಾಕ್ಸ್‌ವೆಲ್‌ 1-0-15-0

Advertisement

ಕಿಂಗ್ಸ್‌ ಇಲೆವೆನ್‌ ಪಂಜಾಬ್‌
ಮುರಳಿ ವಿಜಯ್‌ ರನೌಟ್‌ 21
ವೀರೇಂದ್ರ ಸೆಹವಾಗ್‌ ರನೌಟ್‌ 1
ಶಾನ್‌ ಮಾರ್ಷ್‌ ಸಿ ರಹಾನೆ ಬಿ ತಾಂಬೆ 65
ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿ ಸ್ಮಿತ್‌ ಬಿ ತೆವಾಟಿಯ 1
ಡೇವಿಡ್‌ ಮಿಲ್ಲರ್‌ ಸಿ ಬಿನ್ನಿ ಬಿ ಹೂಡಾ 19
ಅಕ್ಷರ್‌ ಪಟೇಲ್‌ ಔಟಾಗದೆ 12
ಮಿಚೆಲ್‌ ಜಾನ್ಸನ್‌ ಔಟಾಗದೆ 13
ಇತರ 5
ಒಟ್ಟು (6 ವಿಕೆಟಿಗೆ) 191
ವಿಕೆಟ್‌ ಪತನ: 1-3, 2-42, 3-59, 4-117, 5-152, 6-166.
ಬೌಲಿಂಗ್‌:
ಕ್ರಿಸ್‌ ಮಾರಿಸ್‌ 4-0-34-1
ಸ್ಟುವರ್ಟ್‌ ಬಿನ್ನಿ 2-0-13-0
ಜೇಮ್ಸ್‌ ಫಾಕ್ನರ್‌ 4-0-41-0
ಪ್ರವೀಣ್‌ ತಾಂಬೆ 3-0-20-1
ರಾಹುಲ್‌ ತೆವಾಟಿಯ 3-0-31-1
ದೀಪಕ್‌ ಹೂಡಾ 3-0-35-1
ಶೇನ್‌ ವಾಟ್ಸನ್‌ 1-0-13-0
ಪಂದ್ಯಶ್ರೇಷ್ಠ: ಶಾನ್‌ ಮಾರ್ಷ್‌

Advertisement

Udayavani is now on Telegram. Click here to join our channel and stay updated with the latest news.

Next