Advertisement

ರಂಗಿನ ಐಪಿಎಲ್ : ದಾಖಲೆಗಳ ಥ್ರಿಲ್ 

04:39 AM Mar 22, 2019 | Team Udayavani |

ಗರಿಷ್ಠ ರನ್‌ ದಾಖಲೆಗೆ ಪೈಪೋಟಿ
ಐಪಿಎಲ್‌ನಲ್ಲಿ ಗರಿಷ್ಠ ರನ್‌ ಗಳಿಸಿದ ದಾಖಲೆಯನ್ನು  ತಮ್ಮ ಹೆಸರಿಗೆ ಮಾಡಿಕೊಳ್ಳಲು ಭಾರತ ಕ್ರಿಕೆಟ್‌ನ ದಿಗ್ಗಜರಾದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ, ಸುರೇಶ್‌ ರೈನಾ ನಡುವೆ ಪೈಪೋಟಿ ನಡೆಯುತ್ತಿದೆ. ಸದ್ಯ ರೈನಾ ಅಗ್ರಸ್ಥಾನದಲ್ಲಿದ್ದಾರೆ. ಇನ್ನು 37 ರನ್‌ ಗಳಿಸಿದರೆ ಕೊಹ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ. ಈ ಇಬ್ಬರನ್ನು ರೋಹಿತ್‌ ಹಿಂಬಾಲಿಸುತ್ತಿದ್ದಾರೆ.

Advertisement

ಸುರೇಶ್‌ ರೈನಾ
172 ಪಂದ್ಯ 4985 ರನ್ 
ವಿರಾಟ್ ಕೊಹ್ಲಿ
163 ಪಂದ್ಯ 4948 ರನ್
ರೋಹಿತ್ ಶರ್ಮ
173 ಪಂದ್ಯ 4493 ರನ್ 
ಗೌತಮ್ ಗಂಭೀರ್
154 ಪಂದ್ಯ 4217 ರನ್ 
ರಾಬಿನ್ ಉತ್ತಪ್ಪ
165 ಪಂದ್ಯ 4129 ರನ್ 

ಕ್ರಿಸ್‌ ಗೇಲ್‌ 175 ರನ್‌ ಈಗಲೂ ಗರಿಷ್ಠ


ಬೃಹತ್‌ ಇನಿಂಗ್ಸ್‌ ಆಡುವುದರಲ್ಲಿ ವೆಸ್ಟ್‌ ಇಂಡೀಸ್‌ ದೈತ್ಯ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ನಿಸ್ಸೀಮರು. 2013ರ ಐಪಿಎಲ್‌ನಲ್ಲಿ ಅವರು ಬಾರಿಸಿದ 175 ರನ್‌, ಪ್ರಥಮದರ್ಜೆ ಟಿ20 ಪಂದ್ಯಗಳಲ್ಲಿ (ಅಂತಾರಾಷ್ಟ್ರೀಯ ಪಂದ್ಯವೂ ಸೇರಿ) ವಿಶ್ವದಾಖಲೆ. ಇವರ ನಂತರದ ಸ್ಥಾನದಲ್ಲಿ ನ್ಯೂಜಿಲೆಂಡ್‌ನ‌ ಬ್ರೆಂಡನ್‌ ಮೆಕಲಂ ಇದ್ದಾರೆ. ಅವರು 2008ರ ಉದ್ಘಾಟನಾ ಐಪಿಎಲ್‌ನಲ್ಲಿ ಕೆಕೆಆರ್‌ ಪರ, ಆರ್‌ಸಿಬಿ ವಿರುದ್ಧ ಈ ಇನಿಂಗ್ಸ್‌ ಆಡಿದ್ದರು.

30 ಎಸೆತಕ್ಕೆ ಶತಕ: ಗೇಲ್‌ ವಿಶ್ವದಾಖಲೆ

Advertisement


ಬರೀ ಬೃಹತ್‌ ಮೊತ್ತವನ್ನು ಬಾರಿಸುವುದು ಮಾತ್ರವಲ್ಲ, ಶರವೇಗದ ಇನಿಂಗ್ಸ್‌ ಆಡುವುದರಲ್ಲೂ ಕ್ರಿಸ್‌ಗೆàಲ್‌ ಎತ್ತಿದ ಕೈಯ. ಟಿ20 ಇತಿಹಾಸದಲ್ಲಿ, ಗೇಲ್‌ 30 ಎಸೆತಕ್ಕೆ ಬಾರಿಸಿದ ಶತಕ, ಅತಿವೇಗದ ಶತಕ ಎಂಬ ಖ್ಯಾತಿ ವಿಶ್ವದಾಖಲೆ ಯಾಗಿದೆ. ಆ ಪಂದ್ಯದಲ್ಲಿ ಅವರು ಒಟ್ಟಾರೆ 175 ರನ್‌ ಬಾರಿಸಿದ್ದರು.

ಸಿಕ್ಸರ್‌ನಲ್ಲೂ ಗೇಲ್‌ಗಿಲ್ಲ ಸರಿಸಮ
ಐಪಿಎಲ್‌ ಇತಿಹಾಸದಲ್ಲಿ ಗರಿಷ್ಠ ಬಾರಿಸಿರುವುದು ಕ್ರಿಸ್‌ ಗೇಲ್‌. ಕೇವಲ 112 ಪಂದ್ಯದಲ್ಲಿ ಅವರು ಅತಿಹೆಚ್ಚು 292 ಸಿಕ್ಸರ್‌ ಬಾರಿಸಿದ್ದಾರೆ. 2ನೇ ಸ್ಥಾನದಲ್ಲಿರುವ ಡಿವಿಲಿಯರ್ಸ್‌ 187 ಸಿಕ್ಸರ್‌ ಬಾರಿಸಿದ್ದರೂ, ಅದಕ್ಕಾಗಿ 142 ಪಂದ್ಯಗಳನ್ನು ಬಳಸಿಕೊಂಡಿದ್ದಾರೆ. 2ನೇ ಸ್ಥಾನಕ್ಕಾಗಿ ಈಗ ಧೋನಿ, ರೈನಾ, ರೋಹಿತ್‌, ಡಿವಿಲಿಯರ್ಸ್‌ ನಡುವೆ ಪೈಪೋಟಿಯಿದೆ.

ಕ್ರಿಸ್ ಗೇಲ್
112 ಪಂದ್ಯ  292 ಸಿಕ್ಸರ್
ಎ ಬಿ ಡಿವಿಲಿಯರ್ಸ್
142 ಪಂದ್ಯ 187 ಸಿಕ್ಸರ್ 
ಎಂ ಎಸ್ ಧೋನಿ
175 ಪಂದ್ಯ 186 ಸಿಕ್ಸರ್ 
ಸುರೇಶ್ ರೈನಾ
176 ಪಂದ್ಯ 185 ಸಿಕ್ಸರ್ 
ರೋಹಿತ್ ಶರ್ಮ
173 ಪಂದ್ಯ 184 ಸಿಕ್ಸರ್ 

Advertisement

Udayavani is now on Telegram. Click here to join our channel and stay updated with the latest news.

Next