Advertisement
ಅಬುಧಾಬಿಯಲ್ಲಿ ನಡೆಯುವ ದಿನದ ಮೊದಲ ಪಂದ್ಯದಲ್ಲಿ ಚೆನ್ನೈಮತ್ತು ಕೋಲ್ಕತಾ ನೈಟ್‌ರೈಡರ್ ಎದುರಾಗಲಿವೆ. ಈ ತಂಡಗಳು ಯುಎಇ ಆವೃತ್ತಿಯ ಎರಡೂ ಪಂದ್ಯಗಳನ್ನು ಗೆದ್ದಿವೆ. ಹೀಗಾಗಿ ಒಂದು ತಂಡಕ್ಕೆ ಮೊದಲ ಸೋಲು ಎದುರಾಗಲಿದ್ದು, ಇನ್ನೊಂದು ಟೀಮ್ ಗೆಲುವಿನ ಹ್ಯಾಟ್ರಿಕ್ ಸಾಧಿಸಲಿದೆ.
2021ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಮುಂಬೈ-ಆರ್‌ಸಿಬಿ ಎದುರಾಗಿದ್ದವು. ಚೆನ್ನೈಯಲ್ಲಿ ನಡೆದ ಈ ಮೇಲಾಟದಲ್ಲಿ ಕೊಹ್ಲಿ ಪಡೆ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿತ್ತು. ಮುಂಬೈ 9 ವಿಕೆಟಿಗೆ 159 ರನ್ ಬಾರಿಸಿದರೆ, ಬೆಂಗಳೂರು 8 ವಿಕೆಟ್ ನಷ್ಟಕ್ಕೆ 160 ರನ್ ಹೊಡೆಯಿತು. ಅಂತಿಮ ಎಸೆತದಲ್ಲಿ ಹರ್ಷಲ್ ಸಿಂಗಲ್ ತೆಗೆದು ತಂಡವನ್ನು ಗೆಲ್ಲಿಸಿದ್ದರು. ಬೌಲಿಂಗ್‌ನಲ್ಲೂ ಮಿಂಚಿದ ಪಟೇಲ್ 27ಕ್ಕೆ 5 ವಿಕೆಟ್ ಹಾರಿಸಿ ಪಂದ್ಯಶ್ರೇಷ್ಠರಾಗಿ ಮೂಡಿಬಂದರು. ಆರ್‌ಸಿಬಿ ಕೂಟದ ಉದ್ಘಾಟನಾ ಪಂದ್ಯವನ್ನು ಗೆದ್ದ ಮೊದಲ ನಿದರ್ಶನ ಇದಾಗಿತ್ತು. ಯುಎಇಗೆ ಆಗಮಿಸಿದ ಬಳಿಕ ಆರ್‌ಸಿಬಿ ಮತ್ತು ಮುಂಬೈ ಏಕರೀತಿಯ ಪ್ರದರ್ಶನ ನೀಡುತ್ತಿವೆ. ಎರಡೂ ತಂಡಗಳ ಬ್ಯಾಟಿಂಗ್ ಘೋರ ವೈಫಲ್ಯ ಕಂಡಿದೆ. ದೊಡ್ಡ ಮೊತ್ತ ದಾಖಲಾಗುತ್ತಿಲ್ಲ. ಹೀಗಾಗಿ ಬೌಲರ್ ಮೇಲೆ ಒತ್ತಡ ಬೀಳುತ್ತಿದೆ. ರವಿವಾರ ಪರಿಸ್ಥಿತಿ ಬದಲಾದೀತೇ ಎಂಬುದನ್ನು ಕಾದು ನೋಡಬೇಕು.
Related Articles
ಯುಎಇಗೆ ಬಂದ ಬಳಿಕ ಕೆಕೆಆರ್ ನಸೀಬು ಬದಲಾದಂತಿದೆ. ಆಡಿದ ಎರಡೂ ಪಂದ್ಯಗಳನ್ನು ಅದು ಗೆದ್ದಿದೆ. ಮೊದಲು ಆರ್‌ಸಿಬಿ, ಬಳಿಕ ಮುಂಬೈಗೆ ಬಲೆ ಬೀಸುವಲ್ಲಿ ಯಶಸ್ವಿಯಾಗಿದೆ. ಎಡಗೈ ಆರಂಭಕಾರ ವೆಂಕಟೇಶ್ ಅಯ್ಯರ್ ಪ್ರಚಂಡ ಪ್ರದರ್ಶನ ನೀಡುತ್ತಿರುವುದು ಮಾರ್ಗನ್ ಪಡೆಗೆ ಬಂಪರ್ ಆಗಿ ಪರಿಣಮಿಸಿದೆ.
Advertisement
ಮುಂಬಯಿಯಲ್ಲಿ ನಡೆದ ಮೊದಲ ಸುತ್ತಿನ ದೊಡ್ಡ ಮೊತ್ತದ ಮೇಲಾಟದಲ್ಲಿ ಚೆನ್ನೈ 18 ರನ್ನುಗಳಿಂದ ಗೆದ್ದು ಬಂದಿತ್ತು. ಧೋನಿ ಪಡೆಯ 3ಕ್ಕೆ 220 ರನ್ನಿಗೆ ಜವಾಬಿತ್ತ ಕೆಕೆಆರ್ 19.1 ಓವರ್‌ಗಳಲ್ಲಿ 202ರ ತನಕ ಬಂದಿತ್ತು. ಅಂದಿನ ಸೋಲಿಗೆ ಮಾರ್ಗನ್ ಪಡೆ ಸೇಡು ತೀರಿಸುವ ತವಕದಲ್ಲಿದೆ.