Advertisement
ಪಂಜಾಬ್ ವಿರುದ್ಧದ ಕಳೆದ ಪಂದ್ಯವನ್ನು ವೀರಾವೇಶದಿಂದ ಗೆದ್ದಿದ್ದ ರಾಜಸ್ಥಾನ ರಾಯಲ್ಸ್ ಬ್ಯಾಟ್ಸ್ ಮನ್ ಗಳು ಇಂದು ಮಾತ್ರ ಬ್ಯಾಟಿಂಗ್ ಮರೆತವರಂತೆ ಆಡಿದರು.
Related Articles
ಪ್ರಾರಂಭದಿಂದಲೇ ರಾಯಲ್ಸ್ ದಾಂಢಿಗರನ್ನು ಕಟ್ಟಿಹಾಕುವಲ್ಲಿ ಸಫಲರಾದ ಕೊಲ್ಕೊತ್ತಾ ಬೌಲರ್ ಗಳು ನಿಯಮಿತವಾಗಿ ವಿಕೆಟ್ ಉರುಳಿಸುತ್ತಾ ಹೋದರು. ಇದರಿಂದ ಒತ್ತಡಕ್ಕೆ ಸಿಲುಕಿದ ರಾಯಲ್ಸ್ 88 ರನ್ ಆಗುವಷ್ಟರಲ್ಲಿ 8 ವಿಕೆಟ್ ಗಳನ್ನು ಕಳೆದುಕೊಂಡು ಒಂದು ಹಂತದಲ್ಲಿ 100 ರನ್ನಿನೊಳಗೆ ಆಲೌಟಾಗುವ ಭೀತಿಗೆ ಸಿಲುಕಿತ್ತು.
Advertisement
ಇದನ್ನೂ ಓದಿ: ಕೆಕೆಆರ್ ಎಚ್ಚರಿಕೆ ಆಟ; ರಾಯಲ್ಸ್‌ಗೆ 175 ರನ್ ಗುರಿ
ಬಾಲಂಗೋಚಿಗಳ ನೆರವಿನಿಂದ ತಂಡದ ಮೊತ್ತವನ್ನು ಶತಕದ ಗಡಿ ದಾಟಿಸುವಲ್ಲಿ ಟಾಮ್ ಕರನ್ ಯಶಸ್ವಿಯಾದರು. ಕರನ್ ಅರ್ಧಶತಕ ಬಾರಿಸಿ ಔಟಾಗದೇ ಉಳಿದರು.
ಅಂತಿಮವಾಗಿ ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್ ಗಳಿಸಲಷ್ಟೇ ಶಕ್ತವಾಯಿತು.
ರಾಜಸ್ಥಾನ ಪರ ಟಾಮ್ ಕರನ್ ಅವರದ್ದೇ ಟಾಪ್ ಸ್ಕೋರ್ 36 ಎಸೆತಗಳಲ್ಲಿ 54 ರನ್ ಬಾರಿಸಿದ ಕರನ್ 3 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿ ಅಜೇಯರಾಗಿ ಉಳಿದರು.
ಕೊಲ್ಕತ್ತಾ ಪರ ಶಿವಂ ಮಾವಿ, ಕಮಲೇಶ್ ನಾಗರಕೋಟಿ, ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದರು. ಸುನಿಲ್ ನರೈನ್, ಪ್ಯಾಟ್ ಕಮಿನ್ಸ್ ಹಾಗೂ ಕುಲದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.