Advertisement
ಚೆನ್ನೈ ಮುಂದಿನ ಸುತ್ತಿನ ರೇಸ್‌ನಲ್ಲಿ ಉಳಿಯಬೇಕಾದರೆ ಇನ್ನು ಮುಂದೆ ಪ್ರತೀ ಪಂದ್ಯವನ್ನೂ ದೊಡ್ಡ ಅಂತರದಲ್ಲಿ ಗೆಲ್ಲುತ್ತ ಹೋಗಬೇಕು. ಎರಡು ದಿನಗಳ ಹಿಂದೆ ಮುಂಬೈಯನ್ನು ಅಂತಿಮ ಎಸೆತದಲ್ಲಿ ಮಣಿಸಿದ್ದನ್ನು ಕಂಡಾಗ ಜಡೇಜ ಪಡೆಗೆ ಅದೃಷ್ಟ ಒಲಿದಿರುವ ಸೂಚನೆಯೊಂದು ಸಿಕ್ಕಿದೆ. ಇದೇ ಜೋಶ್‌ನಲ್ಲಿ ಮುಂದುವರಿದರೆ ಚೆನ್ನೈ ಮೇಲೆ ನಿರೀಕ್ಷೆ ಇರಿಸಿಕೊಳ್ಳಲಡ್ಡಿಯಿಲ್ಲ.
Related Articles
ಪಂಜಾಬ್ ತಂಡವನ್ನು ಎದುರಿಸುವ ವೇಳೆ ಚೆನ್ನೈ ಗಮನದಲ್ಲಿರುವುದು ಸೇಡು. ಎ. 3ರಂದು “ಬ್ರೆಬೋರ್ನ್ ಸ್ಟೇಡಿಯಂ’ನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ 54 ರನ್ನುಗಳಿಂದ ಚೆನ್ನೈಯನ್ನು ಕೆಡವಿತ್ತು. ಪಂಜಾಬ್ 8 ವಿಕೆಟಿಗೆ 180 ರನ್ ಬಾರಿಸಿದರೆ, ಚೆನ್ನೈ 18 ಓವರ್‌ಗಳಲ್ಲಿ 126ಕ್ಕೆ ಕುಸಿದಿತ್ತು. ಶಿವಂ ದುಬೆ ಹೊರತುಪಡಿಸಿ ಚೇಸಿಂಗ್ ವೇಳೆ ಯಾರೂ ಕ್ಲಿಕ್ ಆಗಿರಲಿಲ್ಲ. ಪಂಜಾಬ್ ಸಾಂಘಿಕ ಬೌಲಿಂಗ್ ಮೂಲಕ ಯಶಸ್ಸು ಸಾಧಿಸಿತ್ತು. ದಾಳಿಗಿಳಿದ ಆರೂ ಮಂದಿ ವಿಕೆಟ್ ಹಂಚಿಕೊಂಡಿದ್ದರು. ಇವರಲ್ಲಿ ರಾಹುಲ್ ಚಹರ್ (25ಕ್ಕೆ 3) ಹೆಚ್ಚಿನ ಯಶಸ್ಸು ಸಾಧಿಸಿದ್ದರು. ಲಿಯಮ್ ಲಿವಿಂಗ್‌ಸ್ಟೋನ್ ಆಲ್‌ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದಿ ದ್ದರು. 60 ರನ್ ಬಾರಿಸುವ ಜತೆಗೆ 2 ವಿಕೆಟ್ ಕೂಡ ಉರುಳಿಸಿದ್ದರು.
Advertisement
ಗಾಯಕ್ವಾಡ್, ಉತ್ತಪ್ಪ, ರಾಯುಡು, ಮೊಯಿನ್ ಅಲಿ, ದುಬೆ ಅವರನ್ನೊಳಗೊಂಡ ಚೆನ್ನೈ ಬ್ಯಾಟಿಂಗ್ ಲೈನ್‌ಅಪ್ ಮೇಲ್ನೋಟಕ್ಕೆ ಬಲಿಷ್ಠವಾಗಿಯೇ ಇದೆ. ಆದರೆ ಯಾರೂ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡು ತ್ತಿಲ್ಲ, ಸ್ಥಿರವಾದ ಆಟವನ್ನೂ ಆಡು ತ್ತಿಲ್ಲ. ಮುಂಬೈ ವಿರುದ್ಧದ ಪಂದ್ಯವನ್ನು ಫಿನಿಶ್ ಮಾಡಲು ಸೀನಿಯರ್ ಮೋಸ್ಟ್ ಕ್ರಿಕೆಟಿರ್ ಧೋನಿಯೇ ಬರಬೇಕಾದುದು ವಿಪರ್ಯಾಸ!
ಹಳೆ ಹುಲಿ ಡ್ವೇನ್ ಬ್ರಾವೊ ಚಾರ್ಮ್ ಕಳೆದುಕೊಂಡಿರುವುದು, ಪ್ರಧಾನ ವೇಗಿ ದೀಪಕ್ ಚಹರ್ ಹೊರಬಿದ್ದಿರುವುದು ಜಡೇಜ ಬಳಗಕ್ಕೆ ಎದುರಾಗಿರುವ ದೊಡ್ಡ ಹೊಡೆತ. ಆದರೆ ಕಳೆದ ಪಂದ್ಯದಲ್ಲಿ ಮುಕೇಶ್ ಚೌಧರಿ ಬೌಲಿಂಗ್ ಜಾದೂ ಮಾಡಿರುವುದನ್ನು ಮರೆಯುವಂತಿಲ್ಲ. ಅವರು ಒಂದೇ ಓವರ್‌ನಲ್ಲಿ ಮುಂಬೈ ಆರಂಭಿಕರಾದ ರೋಹಿತ್ ಶರ್ಮ ಮತ್ತು ಇಶಾನ್ ಕಿಶನ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ಹೀಗಾಗಿ ಚೌಧರಿ ಮೇಲೆ ಚೆನ್ನೈ ಭಾರೀ ನಂಬಿಕೆ ಇರಿಸಿದೆ.
ಪಂಜಾಬ್ ಅಸ್ಥಿರ ಪ್ರದರ್ಶನಪಂಜಾಬ್ ಕಿಂಗ್ಸ್ ಬಿಗ್ ಹಿಟ್ಟರ್‌ಗಳನ್ನು ಹೊಂದಿರುವ ತಂಡ. ಧವನ್, ಅಗರ್ವಾಲ್, ಲಿವಿಂಗ್‌ಸ್ಟೋನ್, ಶಾರೂಖ್ ಖಾನ್ ಇಲ್ಲಿನ ಪ್ರಮುಖರು. ಇವರಲ್ಲಿ ಲಿವಿಂಗ್‌ಸ್ಟೋನ್ ಹೊರತು ಪಡಿಸಿ ಉಳಿದವರಿನ್ನೂ ನೈಜ ಆಟಕ್ಕೆ ಕುದುರಿಕೊಂಡಿಲ್ಲ. ಜಾನಿ ಬೇರ್‌ಸ್ಟೊ ಸತತ 4 ಪಂದ್ಯಗಳಲ್ಲಿ ಫೇಲ್ ಆಗಿರುವುದು ತಂಡದ ಪಾಲಿನ ಚಿಂತೆಯ ಸಂಗತಿ. ಇವರ ಬದಲು ಶ್ರೀಲಂಕಾದ ಭನುಕ ರಾಜಪಕ್ಸ ಆಡುವ ಸಾಧ್ಯತೆ ಇದೆ. ಹಾಗೆಯೇ ರಿಷಿ ಧವನ್, ಸಂದೀಪ್ ಶರ್ಮ ಮೊದಲಾದವರು ಕೂಡ ಕಾಯಿತ್ತಿದ್ದಾರೆ. ಪೇಸ್ ಬೌಲಿಂಗ್ ಆಲ್‌ರೌಂಡರ್ ಒಡೀನ್ ಸ್ಮಿತ್, ಪ್ರಧಾನ ವೇಗಿ ಕಾಗಿಸೊ ರಬಾಡ, ಆರ್ಷದೀಪ್ ಸಿಂಗ್, ವೈಭವ್ ಅರೋರ ಅವರೆಲ್ಲ ಸಿಡಿದು ನಿಂತರೆ ಪಂಜಾಬ್ ಮತ್ತೆ ಗೆಲುವಿನ ಹಳಿ ಏರೀತು.