Advertisement

ಹೆಟ್‌ಮೈರ್‌ ಉತ್ತಮ ಬ್ಯಾಟಿಂಗ್‌: ರಾಜಸ್ಥಾನ್‌ಗೆ 3 ವಿಕೆಟ್‌ಗಳ ಜಯ

01:02 AM Apr 17, 2023 | Team Udayavani |

ಅಹ್ಮದಾಬಾದ್‌: ಸಂಜು ಸ್ಯಾಮ್ಸನ್‌ ಮತ್ತು ಶಿಮ್ರನ್‌ ಹೆಟ್‌ಮೈರ್‌ ಅವರ ಉತ್ತಮ ಬ್ಯಾಟಿಂಗ್‌ನೊಂದಿಗೆ ರಾಜಸ್ಥಾನ್‌ ರಾಯಲ್ಸ್‌ ರವಿವಾರ ರಾತ್ರಿಯ ಐಪಿಎಲ್‌ ಪಂದ್ಯದಲ್ಲಿ ಆತಿಥೇಯ ಗುಜರಾತ್‌ ಟೈಟಾನ್ಸ್‌ ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿದೆ.

Advertisement

ಗುಜರಾತ್‌ 7 ವಿಕೆಟಿಗೆ 177 ರನ್‌ ಗಳಿಸಿದರೆ, ರಾಜಸ್ಥಾನ್‌ ತಂಡವು 19.2 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 179 ರನ್‌ ಗಳಿಸುವ ಮೂಲಕ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಮೂರು ವಿಕೆಟ್‌ಗಳ ಜಯ ದಾಖಲಿಸಿತು.

ಇದು ಗುಜರಾತ್‌ ವಿರುದ್ಧ ರಾಜಸ್ಥಾನ್‌ ಸಾಧಿಸಿದ ಮೊದಲ ಗೆಲುವು. ಕಳೆದ ವರ್ಷದ ಮೂರೂ ಪಂದ್ಯಗಳಲ್ಲಿ ರಾಜಸ್ಥಾನ್‌ ತಂಡವು ಗುಜರಾತ್‌ ವಿರುದ್ಧ ಸೋಲು ಅನುಭವಿಸಿತ್ತು. ಇದರಲ್ಲಿ ಫೈನಲ್‌ ಕೂಡ ಸೇರಿತ್ತು.

ಚೇಸಿಂಗ್‌ ವೇಳೆ ಯಶಸ್ವಿ ಜೈಸ್ವಾಲ್‌ (1) ಮತ್ತು ಜಾಸ್‌ ಬಟ್ಲರ್‌ (0) ಅವರನ್ನು ರಾಜಸ್ಥಾನ್‌ ಅಗ್ಗಕ್ಕೆ ಕಳೆದುಕೊಂಡಿತು. ಅರ್ಧ ಹಾದಿ ಕ್ರಮಿಸುವಾಗ 3 ವಿಕೆಟಿಗೆ ಕೇವಲ 53 ರನ್‌ ಒಟ್ಟುಗೂಡಿತ್ತು. ಆದರೆ ನಾಯಕ ಸಂಜು ಸ್ಯಾಮ್ಸನ್‌ ಸಿಡಿದು ನಿಂತರು. ರಶೀದ್‌ ಖಾನ್‌ಗೆ ಹ್ಯಾಟ್ರಿಕ್‌ ಸಿಕ್ಸರ್‌ ರುಚಿ ತೋರಿಸಿದರು. 32 ಎಸೆತಗಳಿಂದ 60 ರನ್‌ ಬಾರಿಸಿ ಅಬ್ಬರಿಸಿದರು (3 ಬೌಂಡರಿ, 6 ಸಿಕ್ಸರ್‌). ಶಿಮ್ರನ್‌ ಹೆಟ್‌ಮೈರ್‌ ಕೂಡ ಸಿಡಿದು ನಿಂತರು. ಅಜೇಯವಾಗಿದ್ದು, ವಿಜಯೋತ್ಸವ ಆಚರಿಸಿದ ಹೆಟ್‌ಮೈರ್‌ ಅವರು 26 ಎಸೆತಗಳಲ್ಲಿ 56 ರನ್‌ ದೋಚಿದರು. ಅವರ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್‌ಗಳು ಒಳಗೊಂಡಿದ್ದವು.

ಗುಜರಾತ್‌ನ ಮೊಹಮ್ಮದ್‌ ಶಮಿ 3 ವಿಕೆಟ್‌ ಉರುಳಿಸಿದರೆ, ರಶೀದ್‌ ಖಾನ್‌ 2 ವಿಕೆಟ್‌ ಪಡೆದರು.

Advertisement

ಗುಜರಾತ್‌ ನಿಧಾನ ಆರಂಭ
ಆರಂಭಕಾರ ವೃದ್ಧಿಮಾನ್‌ ಸಾಹಾ (4) ಅವರನ್ನು ಗುಜರಾತ್‌ ಬೇಗನೇ ಕಳೆದುಕೊಂಡಿತು. ಶುಭಮನ್‌ ಗಿಲ್‌ 16ನೇ ಓವರ್‌ ತನಕ ಬ್ಯಾಟಿಂಗ್‌ ವಿಸ್ತರಿಸಿದರೂ ಅವರ ಬ್ಯಾಟಿಂಗ್‌ ಬಿರುಸಿನಿಂದ ಕೂಡಿರಲಿಲ್ಲ. 45 ರನ್ನಿಗೆ 34 ಎಸೆತ ತೆಗೆದುಕೊಂಡರು (4 ಬೌಂಡರಿ, 1 ಸಿಕ್ಸರ್‌). ಕಳೆದ ಕೆಲವು ಪಂದ್ಯಗಳಲ್ಲಿ ಮುನ್ನುಗ್ಗಿ ಬಾರಿಸಿದ್ದ ಸಾಯಿ ಸುದರ್ಶನ್‌ ಅವರಿಗೂ ಬಿರುಸಿನ ಆಟ ಸಾಧ್ಯವಾಗಲಿಲ್ಲ. 20 ರನ್‌ 19 ಎಸೆತಗಳಲ್ಲಿ ಬಂತು.

ಹಾರ್ದಿಕ್‌ ಪಾಂಡ್ಯ ಬ್ಯಾಟಿಂಗ್‌ನಲ್ಲಿ ಒಂದಿಷ್ಟು ಸುಧಾರಣೆ ಕಂಡುಬಂತು. 19 ಎಸೆತಗಳಿಂದ 28 ರನ್‌ ಮಾಡಿದರು (3 ಬೌಂಡರಿ, 1 ಸಿಕ್ಸರ್‌). 16ನೇ ಓವರ್‌ ವೇಳೆ ಗುಜರಾತ್‌ 4ಕ್ಕೆ 121 ರನ್‌ ಗಳಿಸಿ ಕುಂಟುತ್ತಿತ್ತು. ಆದರೆ ಡೇವಿಡ್‌ ಮಿಲ್ಲರ್‌ ಮತ್ತು ಅಭಿನವ್‌ ಮನೋಹರ್‌ ಡೆತ್‌ ಓವರ್‌ನಲ್ಲಿ ಮುನ್ನುಗ್ಗಿ ಬೀಸತೊಡಗಿದ್ದರಿಂದ ಗುಜರಾತ್‌ ಸವಾಲಿನ ಮೊತ್ತ ಪೇರಿಸುವಂತಾಯಿತು. ಇವರಿಬ್ಬರು ಕೇವಲ 22 ಎಸೆತಗಳಿಂದ 45 ರನ್‌ ಸೂರೆಗೈದರು.

ದಕ್ಷಿಣ ಆಫ್ರಿಕಾದ ಎಡಗೈ ಬ್ಯಾಟರ್‌ ಡೇವಿಡ್‌ ಮಿಲ್ಲರ್‌ 30 ಎಸೆತಗಳಿಂದ 46 ರನ್‌ ಬಾರಿಸಿದರು. ಇದು ಗುಜರಾತ್‌ ಸರದಿಯ ಸರ್ವಾಧಿಕ ಗಳಿಕೆ ಆಗಿತ್ತು.

ಗುಜರಾತ್‌ ಟೈಟಾನ್ಸ್‌
ವೃದ್ಧಿಮಾನ್‌ ಸಾಹಾ ಸಿ ಮತ್ತು ಬಿ ಬೌಲ್ಟ್ 4
ಶುಭಮನ್‌ ಗಿಲ್‌ ಸಿ ಬಟ್ಲರ್‌ ಬಿ ಸಂದೀಪ್‌ 45
ಸಾಯಿ ಸುದರ್ಶನ್‌ ರನೌಟ್‌ 20
ಹಾರ್ದಿಕ್‌ ಪಾಂಡ್ಯ ಸಿ ಜೈಸ್ವಾಲ್‌ ಬಿ ಚಹಲ್‌ 28
ಡೇವಿಡ್‌ ಮಿಲ್ಲರ್‌ ಸಿ ಹೆಟ್‌ಮೈರ್‌ ಬಿ ಸಂದೀಪ್‌ 46
ಅಭಿನವ್‌ ಮನೋಹರ್‌ ಸಿ ಪಡಿಕ್ಕಲ್‌ ಬಿ ಝಂಪ 27
ರಾಹುಲ್‌ ತೆವಾಟಿಯಾ ಔಟಾಗದೆ 1
ರಶೀದ್‌ ಖಾನ್‌ ರನೌಟ್‌ 1
ಅಲ್ಜಾರಿ ಜೋಸೆಫ್ ಔಟಾಗದೆ 0
ಇತರ 5
ಒಟ್ಟು (20 ಓವರ್‌ಗಳಲ್ಲಿ 7 ವಿಕೆಟಿಗೆ) 177
ವಿಕೆಟ್‌ ಪತನ: 1-5, 2-32, 3-91, 4-121, 5-166, 6-175, 7-178.
ಬೌಲಿಂಗ್‌: ಟ್ರೆಂಟ್‌ ಬೌಲ್ಟ್ 4-0-46-1
ಸಂದೀಪ್‌ ಶರ್ಮ 4-0-25-2
ಆ್ಯಡಂ ಝಂಪ 4-0-32-1
ಆರ್‌. ಅಶ್ವಿ‌ನ್‌ 4-0-37-0
ಯಜುವೇಂದ್ರ ಚಹಲ್‌ 4-0-36-1

ರಾಜಸ್ಥಾನ್‌ ರಾಯಲ್ಸ್‌
ಯಶಸ್ವಿ ಜೈಸ್ವಾಲ್‌ ಸಿ ಗಿಲ್‌ ಬಿ ಪಾಂಡ್ಯ 1
ಜಾಸ್‌ ಬಟ್ಲರ್‌ ಬಿ ಶಮಿ 0
ದೇವದತ್ತ ಪಡಿಕ್ಕಲ್‌ ಸಿ ಮೋಹಿತ್‌ ಬಿ ರಶೀದ್‌ 26
ಸಂಜು ಸ್ಯಾಮ್ಸನ್‌ ಸಿ ಮಿಲ್ಲರ್‌ ಬಿ ಅಹ್ಮದ್‌ 60
ರಿಯಾನ್‌ ಪರಾಗ್‌ ಸಿ ಮಿಲ್ಲರ್‌ ಬಿ ರಶೀದ್‌ 5
ಶಿಮ್ರನ್‌ ಹೆಟ್‌ಮೈರ್‌ ಔಟಾಗದೆ 56
ಧ್ರುವ ಜುರೆಲ್‌ ಸಿ ಶರ್ಮಾ ಬಿ ಶಮಿ 18
ರವಿಚಂದ್ರನ್‌ ಅಶ್ವಿ‌ನ್‌ ಸಿ ತೆವಾಟಿಯಾ ಬಿ ಶಮಿ 10
ಟ್ರೆಂಟ್‌ ಬೌಲ್ಟ್ ಔಟಾಗದೆ 0
ಇತರ 03
ಒಟ್ಟು (19.2 ಓವರ್‌ಗಳಲ್ಲಿ 7 ವಿಕೆಟ್‌ಗೆ) 179
ವಿಕೆಟ್‌ ಪತನ: 1-2, 2-4, 3-47, 4-55, 5-114, 6-161, 7-171
ಬೌಲಿಂಗ್‌: ಮೊಹಮ್ಮದ್‌ ಶಮಿ 4-1-25-3
ಹಾರ್ದಿಕ್‌ ಪಾಂಡ್ಯ 4-0-24-1
ಅಲ್ಜಾರಿ ಜೋಸೆಫ್ 3-0-47-0
ರಶೀದ್‌ ಖಾನ್‌ 4-0-46-2
ಮೋಹಿತ್‌ ಶರ್ಮಾ 2-0-7-0
ನೂರ್‌ ಅಹ್ಮದ್‌ 2.2-0-29-1

Advertisement

Udayavani is now on Telegram. Click here to join our channel and stay updated with the latest news.

Next