Advertisement
ಒಂದು ಗರುಡ ಪಡೆ, 4 ಕೆಎಸ್‌ಆರ್‌ಪಿ ತುಕಡಿ, ಸಿಎಆರ್, ಬಾಂಬ್ ನಿಷ್ಕ್ರಿàಯ ದಳ, ಶ್ವಾನ ದಳ ಭದ್ರತೆ ಉಸ್ತುವಾರಿಗಾಗಿ ನಿಯೋಜಿಸಲಾಗಿದ್ದು, ಪಂದ್ಯ ವೀಕ್ಷಿಸಲು ಬರುವ ಕ್ರೀಡಾಭಿಮಾನಿಗಳ ಚಲನಧಿವಲನಗಳ ಮೇಲೆ ನಿಗಾವಹಿಸಲು ಕಮಾಂಡೋ, ವಜ್ರ ವಾಹನಗಳು ಹಾಗೂ ಕ್ರೀಡಾಂಗಣದ ಒಳ ಹಾಗೂ ಹೊರಭಾಗಗಳಲ್ಲಿ ಸುಮಾರು 130ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳು ಅಳವಡಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ತಿಳಿಸಿದ್ದಾರೆ.
ನಗರದಲ್ಲಿ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿರುವ ದಿನಗಳಂದು ಪ್ರಯಾಣಿಕರ ಅನುಕೂಲಕ್ಕಾಗಿ “ನಮ್ಮ ಮೆಟ್ರೋ’ ಹೆಚ್ಚುವರಿ ಸೇವೆ ಕಲ್ಪಿಸಲಾಗಿದೆ. ಏಪ್ರಿಲ್ 8, 16, 25, 27 ಹಾಗೂ ಮೇ 5, 7, 17 ಮತ್ತು 19ರಂದು ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ರಾತ್ರಿ 10 ರಿಂದ ಮಧ್ಯರಾತ್ರಿ 12.30 ರವರೆಗೆ ಪ್ರತಿ 20 ನಿಮಿಷಗಳಿಗೊಂದು ಮೆಟ್ರೋ ರೈಲು ಸೇವೆ ಕಲ್ಪಿಸಲಾಗಿದೆ. ಸಾಮಾನ್ಯವಾಗಿ ಮೆಟ್ರೋ ಸಂಚಾರ ಸೇವೆ ರಾತ್ರಿ 10 ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಕ್ರಿಕೆಟ್ ವೀಕ್ಷಣೆಗೆ ಆಗಮಿಸುವವರಿಗಾಗಿ ಹೆಚ್ಚುವರಿ ಸೇವೆ ಒದಗಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ಪ್ರಕಟಣೆ ತಿಳಿಸಿದೆ.
Related Articles
ಕ್ರಿಕೆಟ್ ವೀಕ್ಷಣೆಗೆ ಬರುವವರ ವಾಹನಗಳ ನಿಲುಗಡೆಗೆ ಸೆಂಟ್ ಮಾರ್ಕ್ಸ್ ಕೆಥೋಡ್ರೆಲ್ ಚರ್ಚ್ ಹಾಗೂ ಸೆಂಟ್ ಜೋಸೆಫ್ ಹೈಸ್ಕೂಲ್‌ನಲ್ಲಿ ಸ್ಥಳ ನಿಗದಿ ಮಾಡಲಾಗಿದೆ. ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಿದರೆ ದಂಡ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಪಂದ್ಯಾವಳಿ ವೀಕ್ಷಣೆಗೆ ಬರುವವರು ಸ್ವಂತ ವಾಹನಗಳ ಬದಲು ಬಿಎಂಟಿಸಿ ಬಸ್, ಮೆಟ್ರೋದಲ್ಲಿ ಸಂಚಾರ ಮಾಡುವಂತೆ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.
Advertisement