ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಅವರನ್ನು ಒಂದು ಪಂದ್ಯದಿಂದ ಅಮಾನತು ಮಾಡಲಾಗಿದೆ.
ಇತ್ತೀಚೆಗೆ (ಮೇ 7 ರಂದು) ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಗಾಗಿ ಪಂತ್ ಅವರನ್ನು ಒಂದು ಪಂದ್ಯಕ್ಕೆ ನಿಷೇಧ ಹಾಗೂ 30 ಲಕ್ಷ ರೂಪಾಯಿಯ ದಂಡವನ್ನು ವಿಧಿಸಲಾಗಿದೆ.
ಇನ್ನಿಂಗ್ಸ್ ನ ಕೊನೆಯ ಓವರ್ ಆರಂಭದ ವೇಳೆ ಡೆಲ್ಲಿ 10 ನಿಮಿಷ ಹಿಂದೆ ಇತ್ತು ಎನ್ನಲಾಗಿದೆ. ಈ ಸೀಸನ್ ನಲ್ಲಿ ಡೆಲ್ಲಿ ಮೂರನೇ ಬಾರಿ ನಿಧಾನಗತಿಯ ಓವರ್ ರೇಟ್ ಕಾರಣಕ್ಕಾಗಿ ದಂಡ ವಿಧಿಸಿಕೊಂಡಿದೆ.
ತಂಡದ ಉಳಿದ ಆಟಗಾರರಿಗೆ ಆಟಗಾರರು, ಇಂಪ್ಯಾಕ್ಟ್ ಪ್ಲೇಯರ್ಸ್ ಅವರಿಗೆ 12 ಲಕ್ಷ ಅಥವಾ ಅವರ ಪಂದ್ಯ ಶುಲ್ಕದ 50% ರಷ್ಟು ದಂಡ ವಿಧಿಸಲಾಗಿದೆ.
ಮ್ಯಾಚ್ ರೆಫರಿಯ ಈ ತೀರ್ಪನ್ನು ಪ್ರಶ್ನಿಸಿ ಡಿಸಿ ಮೇಲ್ಮನವಿ ಸಲ್ಲಿಸಿದ್ದು, ಅದನ್ನು ಪರಿಶೀಲನೆಗಾಗಿ ಬಿಸಿಸಿಐ ಒಂಬುಡ್ಸ್‌ಮನ್‌ಗೆ ಹೇಳಲಾಗಿತ್ತು. ಓಂಬುಡ್ಸ್‌ಮನ್ ವರ್ಚುವಲ್ ವಿಚಾರಣೆಯನ್ನು ನಡೆಸಿ ಇರದಲ್ಲಿ ಮ್ಯಾಚ್ ರೆಫರಿಯ ನಿರ್ಧಾರವು ಅಂತಿಮ ಎಂದು ಹೇಳಿದೆ.
ಒಂದು ಪಂದ್ಯದ ನಿಷೇಧದ ಹಿನ್ನೆಲೆಯಲ್ಲಿ ರಿಷಭ್ ಪಂತ್ ಅವರು, ಭಾನುವಾರ(ಮೇ 12 ರಂದು) ಬೆಂಗಳೂರು ವಿರುದ್ಧದ ಪಂದ್ಯಕ್ಕೆ ಪಂತ್ ಅಲಭ್ಯರಾಗಲಿದ್ದಾರೆ. ಪ್ಲೇ ಆಫ್ ಸನಿಹದ ಮಹತ್ವದ ಪಂದ್ಯದಲ್ಲಿ ಈ ರೀತಿ ಆಗಿರುವುದು ಡೆಲ್ಲಿಗೆ ಆಘಾತವಾಗಿದೆ.