Advertisement
ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರ್ ಸಿಬಿ 219 ರನ್ ಗಳ ಭರ್ಜರಿ ಗುರಿ ಮುಂದಿಟ್ಟಿತು. ಗುರಿ ಬೆನ್ನಟ್ಟಿದ ಚೆನ್ನೈ ರಚಿನ್ ರವೀಂದ್ರ, ರಹಾನೆ, ಧೋನಿ, ಜಡೇಜ ಅವರ ಹೋರಾಟದ ನಡುವೆಯೂ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಲಷ್ಟೇ ಶಕ್ತವಾಗಿ ಹೊರ ಬಿದ್ದಿತು.
Related Articles
Advertisement
ಬೌಂಡರಿ ಲೈನ್ ನಲ್ಲಿ ಡೇರಿಲ್ ಮಿಚೆಲ್ ಎರಡು ಅದ್ಭುತ ಕ್ಯಾಚ್ ಪಡೆದರು. ಒಂದು ಕ್ಯಾಚನ್ನು ಕೈಚೆಲ್ಲಿದರು. ಕೊಹ್ಲಿ ಅವರ ಕ್ಯಾಚ್ ಮೊದಲನೆಯದಾಗಿದ್ದರೆ, ಅದೇ ರೀತಿ ಪಾಟೀದಾರ್ ಅವರ ಕ್ಯಾಚ್ ಕೂಡ ಪಡೆದರು. ಕ್ಯಾಮರೂನ್ ಗ್ರೀನ್ ಅವರ ಸುಲಭ ಕ್ಯಾಚ್ ಕೈಚೆಲ್ಲಿದರು.
ಗುರಿ ಬೆನ್ನಟ್ಟಿದ ಚೆನ್ನೈ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿತು. ನಾಯಕ ರುತುರಾಜ್ ಅವರು ಮ್ಯಾಕ್ಸ್ ವೆಲ್ ಎಸೆದ ಚೆಂಡನ್ನು ಯಶ್ ದಯಾಳ್ ಕೈಗಿತ್ತು ನಿರ್ಗಮಿಸಿದರು. ಆ ಬಳಿಕ ಡೇರಿಲ್ ಮಿಚೆಲ್ ಕೂಡ 4 ರನ್ ಗಳಿಸಿ ನಿರ್ಗಮಿಸಿದರು.
ರಚಿನ್ ರವೀಂದ್ರ ಮತ್ತು ಅಜಿಂಕ್ಯ ರಹಾನೆ ಉತ್ತಮ ಜತೆಯಾಟವಾಡಿದರು. ರೆಹಾನೆ 33(22 ಎಸೆತ) ಗಳಿಸಿ ನಿರ್ಗಮಿಸಿದರು. ರಚಿನ್ ರವೀಂದ್ರ ರನ್ ಔಟ್ ಅನಗತ್ಯ ರನ್ ಔಟ್ ಆದರು. 37 ಎಸೆತಗಳಲ್ಲಿ 61 ರನ್ ಗಳಿಸಿದ್ದರು. ಶಿವಂ ದುಬೆ 7 ರನ್ ಗೆ ನಿರ್ಗಮಿಸಿದರು. ಜಡೇಜ ಔಟಾಗದೆ 42 ರನ್ ಗಳಿಸಲಿದರು. ಧೋನಿ 25 ರನ್ ಗಳಿಸಿ ಔಟಾದರು.
ಫ್ಲೆಸಿಸ್ ಪಂದ್ಯಶ್ರೇಷ್ಠ
ನಾಯಕನ ಜವಾಬ್ದಾರಿ ಮೆರೆದ ಫ್ಲೆಸಿಸ್ ಪಂದ್ಯಶ್ರೇಷ್ಠ ಎನಿಸಿ ಕೊಂಡರು. ಸಾಮರ್ಥ್ಯ ಮೆರೆದ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ನಿಜವಾಗಿಯೂ ಪಂದ್ಯದ ನಾಯಕ ಎನಿಸಿಕೊಂಡರು. 54 ರನ್ ಗಳಿಸಿದ್ದು ಮಾತ್ರವಲ್ಲದೆ ಅನುಭವಿ ಕೊಹ್ಲಿ ಸೇರಿ ಎಲ್ಲ ಆಟಗರೊಂದಿಗೆ ರಣತಂತ್ರ ಹೂಡಿ ಚೆನ್ನೈ ಗೆ ಲಗಾಮು ಹಾಕಿದುದರಲ್ಲಿ ದೊಡ್ಡ ಪಾತ್ರ ಫ್ಲೆಸಿಸ್ ಅವರದ್ದಾಗಿತ್ತು. ರೆಹಾನ್ ಅವರ ಕ್ಯಾಚ್ ಮಾತ್ರ ಅದ್ಭುತವಾಗಿತ್ತು. ಗಾಳಿಯಲ್ಲಿ ಹಾರಿ ಒಂದೇ ಕೈಯಲ್ಲಿ ಹಿಡಿದ ಕ್ಯಾಚ್ ಎಲ್ಲರನ್ನೂ ಬೆರಗು ಮೂಡಿಸಿತು.
ಗೆಲುವಿನ ಕೇಕೆರೋಚಕ ಪಂದ್ಯವನ್ನು ಕಣ್ ತುಂಬಿಕೊಂಡ ಆರ್ ಸಿಬಿ ಅಭಿಮಾನಿಗಳು ಗೆಲುವಿನ ಕೇಕೆ ಹಾಕುತ್ತಾ ಕ್ರೀಡಾಂಗಣದಿಂದ ಹೊರ ಬಂದ ದೃಶ್ಯ ಕಂಡು ಬಂದಿತು. ‘ಈ ಸಲ ಕಪ್ ನಮ್ದೇ’ ಎಂಬ ಘೋಷಣೆಗಳು ಮೊಳಗಿದವು. ಸಾಮಾಜಿಕ ತಾಣದಲ್ಲೂ ಆರ್ ಸಿಬಿ ಆಟಕ್ಕೆ ಮನಸೋತ ಅಭಿಮಾನಿಗಳು ಪ್ರಶಂಸೆಯ ಸುರಿ ಮಳೆ ಸುರಿಸಿದ್ದಾರೆ. ಸೋತು ಸುಣ್ಣವಾಗಿದ್ದ ಆರ್ ಸಿಬಿ ಯ ಮೇಲೆ ನಿರಾಶೆ ವ್ಯಕ್ತವಾಗಿತ್ತು.ಈಗ ಮತ್ತೆ ಹೊಸ ಉತ್ಸಾಹ ಚಿಗುರಿದೆ. ಅನೇಕ ಅಭಿಮಾನಿಗಳು ವರುಣ ದೇವ ವಿರಾಮ ನೀಡಿ ಆರ್ ಸಿಬಿ ಪಂದ್ಯ ಗೆಲ್ಲಬೇಕು ಎಂದು ಪೂಜೆ ಪ್ರಾರ್ಥನೆಯನ್ನೂ ಸಲ್ಲಿಸಿದ್ದರು. ಚಿನ್ನಸ್ವಾಮಿಯಲ್ಲಿ ಕೊಹ್ಲಿ 3,000 ರನ್
ವಿರಾಟ್ ಕೊಹ್ಲಿ ಎಂ. ಚಿನ್ನಸ್ವಾಮಿ ಮೈದಾನದಲ್ಲಿ 3000 ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆ ಪಾತ್ರರಾದರು. ಇದರೊಂದಿಗೆ ಒಂದೇ ತಾಣದಲ್ಲಿ ಈ ಸಾಧನೆಗೈದ ಮೊದಲಿಗನೆನಿಸಿದರು.