ಜೈಪುರ: ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 20 ರನ್ ಜಯ ಸಾಧಿಸಿದೆ.
ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 4 ವಿಕೆಟ್ ನಷ್ಟಕ್ಕೆ 193 ಗಳಿಸಿತು. ಗುರಿ ಬೆನ್ನಟ್ಟಿದ ಲಕ್ನೋ ಓವರ್ ಗಳಲ್ಲಿ6 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು. 11 ಕ್ಕೆ 3 ವಿಕೆಟ್ ಕಳೆದು ಕೊಂಡು ಆರಂಭಿಕ ಆಘಾತ ಅನುಭವಿಸಿತು. ಆ ಬಳಿಕ ನಾಯಕ ಕೆ ಎಲ್ ರಾಹುಲ್ ತಾಳ್ಮೆಯ ಆಟವಾಡಿ 44 ಎಸೆತಗಳಲ್ಲಿ 58 ರನ್ ಗಳಿಸಿ ಔಟಾದರು. ದೀಪಕ್ ಹೂಡಾ 13 ಎಸೆತಗಳಲ್ಲಿ 26 ರನ್ ಗಳಿಸಿದರು.
ಕೊನೆಯ ಓವರ್ ನಲ್ಲಿ 27 ರನ್ ಅಗತ್ಯವಿತ್ತು. ನಿಕೋಲಸ್ ಪೂರನ್ ಬ್ಯಾಟಿಂಗ್ ಮಾಡುತ್ತಿದ್ದರೂ ಗೆಲುವು ಸಾಧ್ಯವಾಗಲಿಲ್ಲ. 7 ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ಉತ್ತಮ ಆಟವಾಡಿದ ಪೂರನ್ 41 ಎಸೆತಗಳಲ್ಲಿ 64 ರನ್ ಗಳಿಸಿ ಔಟಾಗದೆ ಉಳಿದರು.
ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ 52 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿದರು.ಮೂರು ಬೌಂಡರಿಗಳು ಮತ್ತು ಆರು ಸಿಕ್ಸರ್‌ಗಳನ್ನು ಹೊಡೆದರು. ಯಶಸ್ವಿ ಜೈಸ್ವಾಲ್ 24, ಜೋಸ್ ಬಟ್ಲರ್ 11, ರಿಯಾನ್ ಪರಾಗ್ 43 ಹೆಟ್ಮೆಯರ್ 5 ರನ್ ಗಳಿಸಿ ಔಟಾದರು. ಧ್ರುವ್ ಜುರೆಲ್ ಔಟಾಗದೆ 20 ರನ್ ಗಳಿಸಿದರು.
ರಿಯಾನ್ ಪರಾಗ್ 29 ಎಸೆತಗಳಲ್ಲಿ 43 ರನ್ ಗಳಿಸಿದರು. ನಾಯಕನೊಂದಿಗೆ ಮೂರನೇ ವಿಕೆಟ್‌ಗೆ 93 ರನ್ ಜತೆಯಾಟವಾಡಿದರು.