Advertisement
ಮೊದಲ ಕೆಲವು ಪಂದ್ಯಗಳಲ್ಲಿ ಕೆ.ಎಲ್. ರಾಹುಲ್ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದಾರೆ, ಕೀಪಿಂಗ್ ನಡೆಸುವುದಿಲ್ಲ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ. ಇವರ ಬದಲು ಕ್ವಿಂಟನ್ ಡಿ ಕಾಕ್ ಅಥವಾ ನಿಕೋಲಸ್ ಪೂರಣ್ ವಿಕೆಟ್ ಕೀಪಿಂಗ್ ನಡೆಸಲಿದ್ದಾರೆ. ಪೂರಣ್ ಲಕ್ನೋ ತಂಡದ ಉಪನಾಯಕರೂ ಆಗಿದ್ದಾರೆ.
Related Articles
“ಸದ್ಯ ಕೆ.ಎಲ್. ರಾಹುಲ್ ಟಿ20 ವಿಶ್ವಕಪ್ ತಂಡದ ನೆಚ್ಚಿನ ಆಟಗಾರರ ಯಾದಿಯಲ್ಲಿಲ್ಲ. ಹೀಗಾಗಿ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದುದು ಅನಿವಾರ್ಯ. ರಿಷಭ್ ಪಂತ್ ಕೂಡ ರೇಸ್ನಲ್ಲಿರುವುದರಿಂದ ಬ್ಯಾಟಿಂಗ್ ಜತೆಗೆ ಕೀಪಿಂಗ್ ಕೂಡ ಮಾಡಬೇಕಾಗುತ್ತದೆ. ಕೇವಲ ಬ್ಯಾಟಿಂಗ್ ಮಾಡುವುದಾದರೆ ಈ ಸ್ಥಾನಕ್ಕೆ ರಾಹುಲ್ಗಿಂತ ರಿಂಕು ಸಿಂಗ್ ಉತ್ತಮ ಆಯ್ಕೆ ಆಗಬಲ್ಲರು’ ಎಂಬುದಾಗಿ ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.
Advertisement