Advertisement

ಐಪಿಎಲ್‌: ಕೆಕೆಆರ್‌ ತಂಡದಿಂದ ನಾಗರ್‌ಕೋಟಿ, ಶಿವಂ ಮಾವಿ ಔಟ್‌

12:50 AM Mar 15, 2019 | |

ಕೋಲ್ಕತಾ: ಈ ಬಾರಿಯ ಐಪಿಎಲ್‌ ಆರಂಭಕ್ಕೂ ಮುನ್ನವೇ ಕೋಲ್ಕತಾ ನೈಟ್‌ರೈಡರ್ ತಂಡ ಭಾರೀ ಆಘಾತ ಅನುಭವಿಸಿದೆ. ತಂಡ ಪ್ರಮುಖ ವೇಗಿಗಳು ಗಾಯಾಳುಗಳಾಗಿದ್ದು, ಐಪಿಎಲ್‌ನಿಂದಲೇ ಹೊರಹೋಗಿದ್ದಾರೆ. ಇವರೆಂದರೆ ಕಮಲೇಶ್‌ ನಾಗರ್‌ಕೋಟಿ ಮತ್ತು ಶಿವಂ ಮಾವಿ.

Advertisement

ಇಬ್ಬರೂ ಗಾಯದಿಂದ ಬಳಲುತ್ತಿದ್ದು, ಚೇತರಿಸಿಕೊಳ್ಳು ಹೆಚ್ಚಿನ ಸಮಯ ಬೇಕಾಗಿರುವ ಕಾರಣ ಐಪಿಎಲ್‌ ಕೂಟದಿಂದ ಹೊರಗುಳಿಯುವ ಸಂಕಟಕ್ಕೆ ಸಿಲುಕಿದ್ದಾರೆ.  ಐಪಿಎಲ್‌ ಹರಾಜಿನಲ್ಲಿ  ಕಮಲೇಶ್‌ ನಾಗರ್‌ಕೋಟಿ ಅವರನ್ನು 3.2 ಕೋಟಿ ರೂ.ಗಳಿಗೆ ಕೆಕೆಆರ್‌ ಖರೀದಿಸಿತ್ತು. ಅಂಡರ್‌-19 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಕೆಕೆಆರ್‌ ತಂಡಕ್ಕೆ ಮಾರಾಟವಾದ ಕಮಲೇಶ್‌ ಮೊದಲ ಐಪಿಎಲ್‌ ಪಂದ್ಯ ಆಡುವುದಕ್ಕಿಂತ ಮೊದಲೇ ಗಾಯಗೊಂಡಿದ್ದಾರೆ.

ಕೆಕೆಆರ್‌ ಪರ ಕಳೆದ ವರ್ಷ 9 ಪಂದ್ಯಗಳನ್ನಾಡಿರುವ ಶಿವಂ ಮಾವಿ ಕೂಡ ಗಾಯಾಳಾಗಿದ್ದು, 6 ತಿಂಗಳ ವಿಶ್ರಾಂತಿ ಅಗತ್ಯವಿರುವುದರಿಂದ ಟೂರ್ನಿಯಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಕಮಲೇಶ್‌ ಬದಲು ಸಂದೀಪ್‌ ವಾರಿಯರ್‌ ಅವರನ್ನು ಸೇರಿಸಿಕೊಳ್ಳಲಾಗಿದೆ. ರಣಜಿ ಟ್ರೋಫಿಯಲ್ಲಿ ಸಂದೀಪ್‌ ಕೇರಳ ಪರ ಅತೀ ಹೆಚ್ಚು ವಿಕೆಟ್‌ ಕಿತ್ತ ಬೌಲರ್‌ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next