Advertisement
ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಜಯಭೇರಿ ಬಾರಿಸಿರುವ ಮುಂಬೈ ತಂಡವು ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ ಸಾಧನೆ ಮಾಡಿದೆ. ಕಳಪೆ ಆಟದೊಂದಿಗೆ ಈ ಋತು ಆರಂಭಿಸಿದ್ದ ಮುಂಬೈ ಇದೀಗ ಚೇತರಿಸಿಕೊಂಡಿದ್ದು ಉತ್ತಮ ಹೋರಾಟ ಸಂಘಟಿಸುತ್ತಿದೆ. ಬೌಲಿಂಗ್ ಪಾಳಯದ ಸಮಸ್ಯೆಯನ್ನು ಬಗೆಹರಿಸಿದರೆ ಮುಂಬೈ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಇದೇ ವೇಳೆ ಪ್ರಚಂಡ ಫಾರ್ಮ್ನಲ್ಲಿರುವ ರಾಜಸ್ಥಾನ ತಂಡವು ಆಡಿದ 7 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
Related Articles
ರಾಜಸ್ಥಾನ ಬ್ಯಾಟಿಂಗ್, ಬೌಲಿಂಗ್ನಲ್ಲಿ ಬಲಿಷ್ಠವಾಗಿದೆ. ಮೊದಲ ಸುತ್ತಿನಲ್ಲಿ ಟ್ರೆಂಟ್ ಬೌಲ್ಟ್, ಆವೇಶ್ ಅವರ ಉತ್ತಮ ನಿರ್ವಹಣೆಯಿಂದ ರಾಜಸ್ಥಾನ ತಂಡವು ಮುಂಬೈ ವಿರುದ್ಧ ಆರು ವಿಕೆಟ್ಗಳ ಗೆಲುವು ದಾಖಲಿಸಿತ್ತು.
Advertisement
ಪಿಚ್ ವರದಿಇಲ್ಲಿನ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್ಗೆ ಉತ್ತಮವಾಗಿದೆ. ಈ ಋತುವಿನಲ್ಲಿ ಇಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ತಂಡಗಳು 180ಕ್ಕಿಂತ ಹೆಚ್ಚಿನ ರನ್ ಗಳಿಸಿವೆ. ಬಿಸಿಲಿನ ವಾತಾವರಣ ಇದ್ದು ಸಂಜೆಯ ವೇಳೆ 28 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಮಳೆ ಬರುವ ಸಾಧ್ಯತೆಯಿಲ್ಲ.