Advertisement

ಎಪ್ರಿಲ್ 20ಕ್ಕೂ ಆರಂಭವಾಗದಿದ್ದರೆ ಈ ವರ್ಷ ನಡೆಯದು ಐಪಿಎಲ್!

10:05 AM Mar 15, 2020 | keerthan |

ಮುಂಬೈ: ದೇಶದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ವರ್ಣರಂಜಿತ ಕ್ರೀಡಾಕೂಟ ಐಪಿಎಲ್ ಅನ್ನು ಎಪ್ರಿಲ್ 15ರವರೆಗೆ ಮುಂದೂಡಲಾಗಿದೆ. ಒಂದು ವೇಳೆ ಎ.20ರವರೆಗೂ ಆರಂಭವಾಗದೇ ಇದ್ದಲ್ಲಿ ಕೂಟವನ್ನೇ ರದ್ದುಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Advertisement

ಕೊರೊನಾ ವೈರಸ್ ಕಾರಣದಿಂದ ಕೂಟವನ್ನು ಎಪ್ರಿಲ್ 15ರವರೆಗೆ ಮುಂದೂಡಲಾಗಿದೆ. ಒಂದು ವೇಳೆ ಕೊರೊನಾ ಭೀತಿ ಕಡಿಮೆಯಾಗದೇ ಕೂಟ ಎಪ್ರಿಲ್ 20ರವರೆಗೂ ಆರಂಭವಾಗದೇ ಇದ್ದಲ್ಲಿ ಈ ವರ್ಷದ ಕೂಟವನ್ನೇ ರದ್ದುಗೊಳಿಸಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಎಪ್ರಿಲ್ 21ರಿಂದ ಮೇ 31ರವರೆಗೆ ಐಪಿಎಲ್ ನಡೆಸುವ ಅವಕಾಶವಿದೆ. ಆರು ವಾರಗಳಲ್ಲಿ 60 ಪಂದ್ಯದಗಳನ್ನು ನಡೆಸಬಹುದು. ಎಪ್ರಿಲ್ ಮೊದಲ ವಾರದಲ್ಲಿ ಪರಿಸ್ಥಿತಿ ನೋಡಿ ಇದನ್ನು ತೀರ್ಮಾನಿಸಲಾಗುದು ಎಂದು ವರದಿಯಾಗಿದೆ. ಒಂದು ವೇಳೆ 20ರ ನಂತರ ಆರಂಭವಾಗದಿದ್ದಲ್ಲಿ ರದ್ದಾಗುವುದು ಬಹುತೇಕ ಖಚಿತ.

ಒಂದು ವೇಳೆ ಐಪಿಎಲ್ ನಡೆಯದೇ ಇದ್ದಲ್ಲಿ ಬಿಸಿಸಿಐ ಹತ್ತು ಸಾವಿರ ಕೋಟಿ ರೂ. ಗೂ ಹೆಚ್ಚಿನ ನಷ್ಟ ಅನುಭವಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next