Advertisement
ಮುಖ್ಯವಾಗಿ ಈ ಪಂದ್ಯ ಕೆ.ಎಲ್. ರಾಹುಲ್ ಅವರ ನಾಯಕತ್ವಕ್ಕೆ ಮತ್ತೂಂದು ಸುತ್ತಿನ ಅಗ್ನಿ ಪರೀಕ್ಷೆಯೂ ಹೌದು. ಟಿ20 ವಿಶ್ವಕಪ್ ತಂಡ ದಿಂದ ಬೇರ್ಪಟ್ಟ ಆಘಾತದ ನಡುವೆಯೇ ಹೈದರಾ ಬಾದ್ ವಿರುದ್ಧ ಅನುಭವಿಸಿದ 10 ವಿಕೆಟ್ ಸೋಲು ರಾಹುಲ್ ಪಾಲಿಗೆ ದೊಡ್ಡ ಗಂಡಾಂತರ ತಂದಿದೆ. ಮಾಲಕರು ಬಹಿರಂಗವಾಗಿ ತರಾಟೆಗೆ ತೆಗೆದು ಕೊಂಡಿ ದ್ದಾರೆ ಎನ್ನಲಾದ ಘಟನೆ ರಾಹುಲ್ ಅವರನ್ನು ಬಹಳಷ್ಟು ಕುಗ್ಗಿಸಿದೆ. ಅವರು ನಾಯ ಕತ್ವ ದಿಂದ ಕೆಳಗಿಳಿಯಲಿದ್ದಾರೆ, ಲಕ್ನೋ ತಂಡದಲ್ಲಿ ಮುಂದು ವರಿ ಯುವು ದಿಲ್ಲ ಎಂಬ ಸುದ್ದಿಗಳೂ ಹರಿದಾಡಿದ್ದವು.
Related Articles
ಒಂದು ದಿನದ ಹಿಂದಷ್ಟೇ ಆರ್‌ಸಿಬಿ ಕೈಯಲ್ಲಿ 47 ರನ್ನುಗಳಿಂದ ಆಘಾತ ಅನುಭವಿಸಿದ ಡೆಲ್ಲಿ ಯನ್ನು ಮರಳಿ ರಿಷಭ್ ಪಂತ್ ಮುನ್ನಡೆಸ ಲಿದ್ದಾರೆ. ತವರಿನ ಕೋಟ್ಲಾದಲ್ಲಿ ಮತ್ತೆ ಅದೃಷ್ಟ ಕೈ ಹಿಡಿದೀತೆಂಬ ವಿಶ್ವಾಸ ಡೆಲ್ಲಿ ತಂಡದ್ದು. ಇಲ್ಲಿ ಆಡಲಾದ ಕಳೆದ ಪಂದ್ಯದಲ್ಲಿ ಪಂತ್ ಪಡೆ ರಾಜಸ್ಥಾನವನ್ನು 20 ರನ್ನುಗಳಿಂದ ಕೆಡವಿತ್ತು.
ಇದು ಡೆಲ್ಲಿಯ ಕೊನೆಯ ಲೀಗ್ ಪಂದ್ಯ. 13 ಮುಖಾಮುಖೀಗಳಿಂದ 12 ಅಂಕ ಗಳಿಸಿದೆ. ರನ್‌ರೇಟ್ ಮೈನಸ್‌ನಲ್ಲಿರುವುದು ಹಿನ್ನಡೆಗೆ ಕಾರಣ ವಾಗಲಿದೆ. ಸೋತರೆ ಡೆಲ್ಲಿಯ ಆಟ ಮುಗಿಯಲಿದೆ.
Advertisement