ಕೋಲ್ಕತಾ : ಈಡನ್ ಗಾರ್ಡನ್ಸ್ ನಲ್ಲಿ ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದೇ ಒಂದು ರನ್ ನಿಂದ ಸೋಲು ಅನುಭವಿಸಿದ್ದು ತಂಡದ ದುರಾದೃಷ್ಟಕ್ಕೆ ಸಾಕ್ಷಿಯಾಯಿತು.
ಬ್ಯಾಟಿಂಗ್ ಗೆ ಇಳಿಸಲ್ ಪಟ್ಟ ಕೆಕೆಆರ್ ಪರ ಓಪನರ್ ಫಿಲ್ ಸಾಲ್ಟ್ ಅವರ ಆಕ್ರಮಣಕಾರಿ 48 ರನ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಆರ್ ಸಿಬಿ ಆರಂಭಿಕ ಆಘಾತ ಅನುಭವಿಸಿತು. 7 ರನ್ ಗಳಿಸಿ ನಾಯಕ ಫ್ಲೆಸಿಸ್ ಔಟಾದರೆ, ಕೊಹ್ಲಿ 18 ರನ್ ಗಳಿಸಿದ್ದ ವೇಳೆ ನಿರ್ಗಮಿಸಿದರು. ಆ ಬಳಿಕ ಭರವಸೆಯ ನಿರ್ಣಾಯಕ ಆಟವಾಡಿದ ವಿಲ್ ಜ್ಯಾಕ್ಸ್ 55(32 ಎಸೆತ) ರನ್ ಗಳಿಸಿ ಔಟಾದರು. ಅವರಿಗೆ ಸಾಥ್ ನೀಡಿದ ರಜತ್ ಪಾಟಿದಾರ್ 52 (23 ಎಸೆತ) ರನ್ ಗಳಿಸಿ ಔಟಾದರು. ವಿಫಲರಾದ ಕ್ಯಾಮರಾನ್ ಗ್ರೀನ್ 6 ರನ್ ಗೆ ಔಟಾದರು. ಸುಯಶ್ ಪ್ರಭುದೇಸಾಯಿ 24 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಗೆಲುವಿಗಾಗಿ ಹೋರಾಡಿದ ದಿನೇಶ್ ಕಾರ್ತಿಕ್ 25 ರನ್ ಗಳಿಸಿ ಔಟಾದರು. ಮಹಿಪಾಲ್ ಲೊಮ್ರೋರ್ 4 ರನ್ ಗಳಿಸಿ ಔಟಾದರು.
ಆ ಬಳಿಕ ಕರ್ಣ್ ಶರ್ಮ ಮೂರು ಸಿಕ್ಸರ್ ಸಿಡಿಸಿ ಪಂದ್ಯದ ದಿಕ್ಕು ಬದಲಿಸುವ ಸೂಚನೆ ನೀಡಿದರು. ಸ್ಟಾರ್ಕ್ ಎಸೆದ ಕೊನೆಯ ಓವರ್ ನಲ್ಲಿ ಗೆಲ್ಲಲು 20 ರನ್ ಅಗತ್ಯವಿತ್ತು. ಕರ್ಣ್ ಮೂರು ಸಿಕ್ಸರ್ ಸಿಡಿಸಿದರು. ಆದರೆ ಐದನೇ ಎಸೆತದಲ್ಲಿ ಸ್ಟಾರ್ಕ್ ತಂತ್ರ ಹೂಡಿ ಅದ್ಬುತ ಕ್ಯಾಚ್ ಪಡೆದು ಕರ್ಣ್ ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು. ಕೊನೆಯ ಎಸೆತದಲ್ಲಿ ಮೂರು ರನ್ ಅಗತ್ಯವಿತ್ತು. ಫರ್ಗುಸನ್ ಒಂದು ರನ್ ಓಡಿ ಇನ್ನೊಂದು ಓದಲು ಪ್ರಯತ್ನಿಸುವ ವೇಳೆ ರನ್ ಔಟ್ ಆದರು. 221 ಕ್ಕೆ ಆಲೌಟಾಗುವ ಮೂಲಕ ಎಷ್ಟು ಹೋರಾಟ ಮಾಡಿದರೂ ಗೆಲುವು ನಮ್ಮ ಬಳಿ ಇಲ್ಲ ಎನ್ನುವ ನೋವು ಮತ್ತೆ ಮತ್ತೆ ತಂಡಕ್ಕೆ ಮತ್ತು ಅಭಿಮಾನಿಗಳಿಗೆ ಕಾಡಿತು. ಸೋಲಿನಲ್ಲಿ ಆರಂಭಿಕ ಆಘಾತ ಮತ್ತು ಬೌಲಿಂಗ್ ಸಾಮರ್ಥ್ಯವಿಲ್ಲದಿರುವುದು ಎದ್ದು ಕಂಡಿತು.
ಬಿಗಿ ದಾಳಿ ನಡೆಸಿದ ರಸೆಲ್ 3 ವಿಕೆಟ್ ಪಡೆದರು. ನರೇನ್ 2, ಹರ್ಷಿತ್ ರಾಣಾ 2, ಸ್ಟಾರ್ಕ್ ದುಬಾರಿ ಎನಿಸಿಕೊಂಡರೂ 1 ವಿಕೆಟ್ ಪಡೆದರು. ಮಿಥುನ್ ಚಕ್ರವರ್ತಿ 1 ವಿಕೆಟ್ ಪಡೆದರು.
ಆರ್ ಸಿಬಿ ಆಡಿದ 8 ನೇ ಪಂದ್ಯದಲ್ಲಿ 7 ನೇ ಸೋಲಿನ ಆಘಾತ ಅನುಭವಿಸಿದ್ದು, ಕೆಕೆಆರ್ 7ನೇ ಪಂದ್ಯದಲ್ಲಿ5 ನೇ ಗೆಲುವು ತನ್ನದಾಗಿಸಿಕೊಂಡು ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಸಾಲ್ಟ್ ಸ್ಫೋಟಕ ಆರಂಭ
ಸುನಿಲ್ ನರೈನ್ 10(15 ಎಸೆತ) ವಿಫಲವಾದರು. ವಿಶ್ವದ ನಂ. 2 ಟಿ 20 ಬ್ಯಾಟ್ಸ್ ಮ್ಯಾನ್ ಸಾಲ್ಟ್, ಕೆಕೆಆರ್‌ಗೆ ಸ್ಫೋಟಕ ಆರಂಭ ನೀಡಿದರು. ಮೂರು ಸಿಕ್ಸರ್‌ಗಳು ಮತ್ತು ಏಳು ಬೌಂಡರಿಗಳನ್ನು ಸಿಡಿಸಿದರು. 14 ಎಸೆತಗಳಲ್ಲಿ 48 ರನ್ ಗಳಿಸಿ ಔಟಾದರು.
ಆಂಡ್ರೆ ರಸೆಲ್ ಔಟಾಗದೆ 27, ಮಣದೀಪ್ ಸಿಂಗ್ ಔಟಾಗದೆ 24, ಆತಿಥೇಯ ತಂಡ ದೊಡ್ಡ ಮೊತ್ತ ಗಳಿಸಲು ನೆರವಾದರು. ವೆಂಕಟೇಶ್ ಅಯ್ಯರ್ (16) ಮತ್ತು ರಿಂಕು ಸಿಂಗ್ (24)
ಅಯ್ಯರ್ ತಮ್ಮ 20ನೇ ಐಪಿಎಲ್ ಅರ್ಧಶತಕ, ಈ ಋತುವಿನ ಮೊದಲ ಅರ್ಧಶತಕ ದಾಖಲಿಸಿದರು. 35 ಎಸೆತಗಳಲ್ಲಿ 50 ರನ್ ಗಳಿಸಿದ ಅವರು ಮುಂದಿನ ಎಸೆತದಲ್ಲಿ ಔಟಾದರು.
ಮೊಹಮ್ಮದ್ ಸಿರಾಜ್ ಅವರು ತಮ್ಮ ಯಾರ್ಕರ್‌ಗಳು ಮತ್ತು ವೈಡ್ ಯಾರ್ಕರ್‌ಗಳೊಂದಿಗೆ ತಮ್ಮ 1 ವಿಕೆಟ್ ಪಡೆದರು. ಕ್ಯಾಮರೂನ್ ಗ್ರೀನ್ 2 ವಿಕೆಟ್ ಪಡೆದರು. ಯಶ್ ದಯಾಲ್ 2 ವಿಕೆಟ್ ಪಡೆದರು ಆದರೆ 56 ರನ್ ನೀಡಿದರು.