Advertisement

JUST IN: ಲಕ್ನೋ ಸೂಪರ್‌ಜೈಂಟ್ಸ್ ಗೆ ಹೊಸ ಮುಖ್ಯ ಕೋಚ್ ನೇಮಕ

09:24 PM Jul 14, 2023 | Team Udayavani |

ಮುಂಬಯಿ: ಫ್ರಾಂಚೈಸಿಯೊಂದಿಗೆ ಎರಡು ಸೀಸನ್‌ಗಳ ಆಟದ ನಂತರ ಆಂಡಿ ಫ್ಲವರ್ ನಿರ್ಗಮಿಸಿದ್ದು, ಅವರ ಸ್ಥಾನಕ್ಕೆ ಲಕ್ನೋ ಸೂಪರ್‌ಜೈಂಟ್ಸ್ ಶುಕ್ರವಾರ ಜಸ್ಟಿನ್ ಲ್ಯಾಂಗರ್ ಅವರನ್ನು ತಮ್ಮ ಹೊಸ ಮುಖ್ಯ ತರಬೇತುದಾರರನ್ನಾಗಿ ನೇಮಿಸಿದೆ.

Advertisement

ಲ್ಯಾಂಗರ್ ಅವರ ಕೋಚಿಂಗ್ ವೃತ್ತಿ ನವೆಂಬರ್ 2009 ರಲ್ಲಿ ಆಸ್ಟ್ರೇಲಿಯಾದ ರಾಷ್ಟ್ರೀಯ ಕ್ರಿಕೆಟ್ ತಂಡದ ಬ್ಯಾಟಿಂಗ್ ಮತ್ತು ಹಿರಿಯ ಸಹಾಯಕ ಕೋಚ್ ಆಗಿ ನೇಮಕಗೊಂಡಾಗ ಪ್ರಾರಂಭವಾಗಿ ನವೆಂಬರ್ 2012 ರವರೆಗೆ ಮುನ್ನೆಡೆಸಿದ್ದರು. ನಂತರ ಅವರು ಪರ್ತ್ ಸ್ಕಾರ್ಚರ್ಸ್ ಮತ್ತು ವೆಸ್ಟರ್ನ್ ಆಸ್ಟ್ರೇಲಿಯಾದ ಹಿರಿಯ ತರಬೇತುದಾರನ ಸ್ಥಾನ ಪಡೆದಿದ್ದರು.

2018 ಮೇ ತಿಂಗಳಿನಲ್ಲಿ, ಬಾಲ್ ಟ್ಯಾಂಪರಿಂಗ್ ಹಗರಣದ ನಂತರ ರಾಜೀನಾಮೆ ನೀಡಿದ ಡ್ಯಾರೆನ್ ಲೆಹ್ಮನ್ ಅವರ ಉತ್ತರಾಧಿಕಾರಿಯಾಗಿ ಲ್ಯಾಂಗರ್ ಅವರನ್ನು ಆಸ್ಟ್ರೇಲಿಯಾದ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿತ್ತು.

ಲ್ಯಾಂಗರ್ ನಾಯಕತ್ವದಲ್ಲಿ, ಆಸ್ಟ್ರೇಲಿಯಾ ನವೆಂಬರ್ 2021 ರಲ್ಲಿ ಮೊದಲ ಬಾರಿಗೆ ಟಿ 20 ವಿಶ್ವಕಪ್ ಗೆದ್ದಿತ್ತು. ಆಸ್ಟ್ರೇಲಿಯಾ ತಂಡದೊಂದಿಗೆ ಲ್ಯಾಂಗರ್ ಅವರ ಕೋಚಿಂಗ್ ವೃತ್ತಿಜೀವನ ಫೆಬ್ರವರಿ 2022 ರಲ್ಲಿ ಕೊನೆಗೊಂಡಿತ್ತು.

Advertisement

ಲ್ಯಾಂಗರ್ ಅವರು ಆಸ್ಟ್ರೇಲಿಯಾದ ಪಂದ್ಯಗಳಿಗೆ ವೀಕ್ಷಕ ವಿವರಣೆಗಾರರಾಗಿ ಕೆಲಸ ಮಾಡುತ್ತಿದ್ದರು. ಈಗ ಲ್ಯಾಂಗರ್ ಅವರ ನೇಮಕಾತಿಯನ್ನು ದೃಢೀಕರಿಸುವ ಅಧಿಕೃತ ಹೇಳಿಕೆಯನ್ನು ಲಕ್ನೋ ಸೂಪರ್‌ಜೈಂಟ್ಸ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next