Advertisement
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ, ಖಜಾಂಚಿ ಅರುಣ್ ಧುಮಾಲ್ ಹಾಗೂ ಐಪಿಎಲ್ ಅಧ್ಯಕ್ಷ ಬೃಜೇಶ್ ಪಟೇಲ್ ಅವರೊಂದಿಗೆ ನಡೆದ ವೀಡಿಯೋ ಕಾನ್ಫರೆನ್ಸ್ ಬಳಿಕ ಐಪಿಎಲ್ ಸಿಇಒ ಹೇಮಾಂಗ್ ಅಮೀನ್ ಅವರು ಫ್ರಾಂಚೈಸಿಗಳಿಗೆ ಬಿಸಿಸಿಐಯ ಈ ನಿರ್ಧಾರವನ್ನು ತಿಳಿಸಿದ್ದಾರೆ.
Related Articles
ವೈರಸ್ ನಿಯಂತ್ರಣಕ್ಕೆ ಬರುವ ಜತೆಗೆ ವೈಮಾನಿಕ ಪ್ರಯಾಣಕ್ಕೂ ಅವಕಾಶ ಸಿಗಬೇಕು. ಪ್ರೇಕ್ಷಕರಿದ್ದು ಅಥವಾ ಇಲ್ಲದೆ ಹಾಗೂ ಕೇಂದ್ರ ಸರಕಾರ ಕೂಡ ಕ್ರೀಡಾಕೂಟ ನಡೆಸುವ ಅವಕಾಶ ಒದಗಿಸಬೇಕು. ಆಗ ಮಾತ್ರ ಬಿಸಿಸಿಐ, ಐಸಿಸಿ ಹಾಗೂ ಇತರ ಸದಸ್ಯ ರಾಷ್ಟ್ರಗಳೊಂದಿಗೆ ಚರ್ಚಿಸಿ ಐಪಿಎಲ್ ವೇಳಾಪಟ್ಟಿ ಸಿದ್ಧಪಡಿಸುವುದು ಸಾಧ್ಯ.
Advertisement
ಸನ್‌ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ವಿವಿಎಸ್ ಲಕ್ಷ್ಮಣ್ ಅವರು ಸೆಪ್ಟಂಬರ್ ನವೆಂಬರ್ ಅವಧಿಯಲ್ಲಿ ಐಪಿಎಲ್ ನಡೆಸಲು ಅವಕಾಶ ಸಿಕ್ಕರೆ ವಿಶ್ವಕಪ್ ಟಿ20ಗೂ ಮುನ್ನ ಆಟಗಾರರು ಕ್ರೀಡೆಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಈ ಅವಧಿಯಲ್ಲಿ ಐಪಿಎಲ್ ಆಯೋಜಿಸಿದರೆ ಏಷ್ಯಾ ಕಪ್ ಸಹಿತ ಹಲವು ಕೂಟಗಳನ್ನು ರದ್ದು ಮಾಡಬೇಕಾಗುತ್ತದೆ ಎಂದು ಹೇಳಲಾಗಿದೆ. ಆದರೆ, ಇದು ಭಾರತ ಪಾಕಿಸ್ಥಾನ ಕ್ರಿಕೆಟ್ ಮಂಡಳಿಗಳ ನಡುವಿನ ನಿರ್ಧಾರವಾಗುವುದಿಲ್ಲ. ಬೇರೆ ದೇಶಗಳೂ ಸಮ್ಮತಿಸಬೇಕಾಗುತ್ತದೆ ಎಂದು ಪಾಕಿಸ್ಥಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಎಹಸಾನ್ ಮಣಿ ಹೇಳಿದ್ದಾರೆ.
ಹಲವು ಸವಾಲುಆಸ್ಟ್ರೇಲಿಯದಲ್ಲಿ ಟಿ20 ವಿಶ್ವಕಪ್ ನಡೆಯುವುದು ಸಾಧ್ಯವಾಗದಿದ್ದರೆ ನವೆಂಬರ್‌ನಲ್ಲಿ ಐಪಿಎಲ್ ಹಮ್ಮಿಕೊಳ್ಳಲೂ ಬಿಸಿಸಿಐ ಮುಂದಾಗುವ ನಿರೀಕ್ಷೆಯಿದೆ. ಆಸ್ಟ್ರೇಲಿಯವು ವಾಯುಯಾನ ಸಂಚಾರದ ಮೇಲೆ ಆರು ತಿಂಗಳ ಕಾಲ (ಸೆ. 19ರ ವರೆಗೆ) ನಿಷೇಧ ಹೇರಿದ್ದರಿಂದ ನಿಗದಿಯಂತೆ ಕ್ರೀಡಾಕೂಟಗಳು ನಡೆಯುವುದು ಅನುಮಾನ. ಸ್ಟಾರ್ ಇಂಡಿಯಾ ಟಿ20 ವಿಶ್ವಕಪ್, ಐಪಿಎಲ್ ಹಾಗೂ ಏಷ್ಯಾ ಕಪ್ ಈ ಮೂರು ಪಂದ್ಯಾವಳಿಗಳ ಪ್ರಸಾರ ಹಕ್ಕನ್ನೂ ಹೊಂದಿದ್ದು, ಪಂದ್ಯಾವಳಿ ಆಯೋಜನೆ ವಿಚಾರದಲ್ಲಿ ಈ ಸಂಸ್ಥೆಯ ಅಭಿಪ್ರಾಯವೂ ಪ್ರಾಮುಖ್ಯ ಪಡೆಯುತ್ತದೆ.