Advertisement

ಐಪಿಎಲ್‌ ಆತಿಥ್ಯ ಕೇವಲ ವದಂತಿ: ನ್ಯೂಜಿಲ್ಯಾಂಡ್‌

01:20 AM Jul 10, 2020 | Sriram |

ವೆಲ್ಲಿಂಗ್ಟನ್‌: ಮುಂದೂಡಲ್ಪಟ್ಟ 2020ರ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ಆಯೋಜಿಸಲು ನ್ಯೂಜಿಲ್ಯಾಂಡ್‌ ಮುಂದೆ ಬಂದಿದೆ ಎಂಬುದು ಕೇವಲ ವದಂತಿ ಎಂಬುದಾಗಿ ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ಮಂಡಳಿ ಸ್ಪಷ್ಟಪಡಿಸಿದೆ. ಇದರಿಂದ ಐಪಿಎಲ್‌ ಏಶ್ಯದ ಗಡಿ ದಾಟದು ಎಂಬುದು ಖಾತ್ರಿಯಾಗಿದೆ.

Advertisement

“ಇದು ಕೇವಲ ಊಹಾಪೋಹ. ನಾವು ಐಪಿಎಲ್‌ ನಡೆಸುವುದಾಗಿ ಹೇಳಲೂ ಇಲ್ಲ, ಇದಕ್ಕಾಗಿ ಪ್ರಯತ್ನಿಸಲೂ ಇಲ್ಲ’ ಎಂಬುದಾಗಿ ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ಮಂಡಳಿಯ ವಕ್ತಾರ ರಿಚರ್ಡ್‌ ಬ್ರೂಕ್‌ ಹೇಳಿದ್ದಾರೆ.

ಯುಎಇ ಮತ್ತು ಶ್ರೀಲಂಕಾ ಜತೆಗೆ ನ್ಯೂಜಿಲ್ಯಾಂಡ್‌ ಕೂಡ ಐಪಿಎಲ್‌ ನಡೆಸಲು ಮುಂದೆ ಬಂದಿದೆ ಎಂದು ಕೆಲವು ದಿನಗಳ ಹಿಂದೆ ಬಿಸಿಸಿಐ ಹೇಳಿಕೆ ನೀಡಿತ್ತು. ಇದಕ್ಕೆ ಗುರುವಾರ ನ್ಯೂಜಿಲ್ಯಾಂಡ್‌ ಕಡೆಯಿಂದ ಪ್ರತಿಕ್ರಿಯೆ ಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next