Advertisement

ಐಪಿಎಲ್‌ ನೆರವಾಯಿತು: ಕುಲದೀಪ್‌

06:40 AM Nov 06, 2018 | |

ಕೋಲ್ಕತಾ: ಕೋಲ್ಕತಾ ಟಿ20 ಪಂದ್ಯದಲ್ಲಿ ಬೌಲಿಂಗ್‌ ಯಶಸ್ಸು ಕಾಣಲು ಐಪಿಎಲ್‌ ಅನುಭವ ನೆರವಿಗೆ ಬಂತು ಎಂಬುದಾಗಿ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

“ನಾನು 5 ವರ್ಷದಿಂದ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ. ಹೀಗಾಗಿ ಈಡನ್‌ ಅಂಗಳ ನನಗೆ ಹೆಚ್ಚು ಪರಿಚಿತ. ಇಲ್ಲಿನ ಪಿಚ್‌ ಎಸೆತಗಳಿಗೆ ತಿರುವು ನೀಡುವುದು ಅಪರೂಪ. ಆದರೆ ಪ್ರತಿಯೊಂದು ಕೋನದಲ್ಲೂ ಔಟ್‌ಫೀಲ್ಡ್‌ನ ವೇಗವನ್ನು ನಾನು ಬಲ್ಲೆ. ಇದು ನನ್ನಲ್ಲಿ ವಿಶ್ವಾಸ ತುಂಬಿತು’ ಎಂದು ರವಿವಾರದ ಮುಖಾಮುಖೀಯಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಕುಲದೀಪ್‌ ಯಾದವ್‌ ಹೇಳಿದರು. ಈ ಪಂದ್ಯದಲ್ಲಿ ಕುಲದೀಪ್‌ ಕೇವಲ 13 ರನ್‌ ವೆಚ್ಚದಲ್ಲಿ 3 ವಿಕೆಟ್‌ ಉಡಾಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next