Advertisement

ಐಪಿಎಲ್‌: ಡೆಲ್ಲಿ ತಂಡಕ್ಕೆ ಗಂಗೂಲಿ ಸಲಹೆಗಾರ

12:30 AM Mar 15, 2019 | Team Udayavani |

ಹೊಸದಿಲ್ಲಿ: ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಮುಂಬರುವ ಐಪಿಎಲ್‌ನಲ್ಲಿ “ಡೆಲ್ಲಿ  ಕ್ಯಾಪಿಟಲ್‌’ ತಂಡದ ಸಲಹೆಗಾರನಾಗಿ ಆಯ್ಕೆಯಾಗಿದ್ದಾರೆ. ಅವರು ಡೆಲ್ಲಿ ತಂಡ ಮುಖ್ಯ ಕೋಚ್‌ ರಿಕಿ ಪಾಂಟಿಂಗ್‌ ಜತೆ ಕಾರ್ಯ ನಿರ್ವಹಿಸಲಿದ್ದಾರೆ.

Advertisement

“ಗಂಗೂಲಿಯವರ ಅನುಭವ, ಮಾರ್ಗದರ್ಶನ ಹಾಗೂ ಸಲಹೆಯಿಂದ ತಂಡಕ್ಕೆ ಪ್ರಯೋಜನವಾಗಲಿದೆ. ಗಂಗೂಲಿ ನಮ್ಮ ಪಾಲಿಗೆ ಕುಟುಂಬದ ಸದಸ್ಯನಂತೆ. ಅವರನ್ನು ಸಲಹೆಗಾರನಾಗಿರುವುದು ಸಂತಸದ ಸಂಗತಿ’  ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಅಧ್ಯಕ್ಷ ಪಾರ್ಥ್ ಜಿಂದಾಲ್‌ ಹೇಳಿದ್ದಾರೆ.”ಡೆಲ್ಲಿ ಪರ ಕೆಲಸ ಮಾಡುವುದು ಖುಷಿಯ ಸಂಗತಿ.ತಂಡದ ಎಲ್ಲ ಆಟಗಾರರಿಗೆ, ಫ್ರಾಂಚೈಸಿಯ ಸದಸ್ಯರಿಗೆ ಸರ್ವರೀತಿಯ ಸಹಕಾರ ನೀಡುತ್ತೇನೆ. ಡೆಲ್ಲಿ ತಂಡ ಈ ಬಾರಿ ಚಾಂಪಿಯನ್‌ ಆಗುವಲ್ಲಿ ಶ್ರಮಿಸುತ್ತೇನೆ’ ಎಂದು ಗಂಗೂಲಿ ಹೇಳಿದ್ದಾರೆ.

ಗಂಗೂಲಿ ಇದಕ್ಕೂ ಮೊದಲು ಕೋಲ್ಕತಾ ನೈಟ್‌ರೈಡರ್ ಪರ ಆಡಿದ್ದರು.ಕೆಕೆಆರ್‌ ಸಲಹೆಗಾರನಾಗಿಯೂ ಕೆಲಸ ನಿರ್ವಹಿಸಿದ್ದರು.

ಶ್ರೇಯಸ್‌ ಅಯ್ಯರ್‌ ನಾಯಕತ್ವದ ಡೆಲ್ಲಿ ತಂಡ ಮಾರ್ಚ್‌ 24ರಿಂದ ತನ್ನ ಐಪಿಎಲ್‌ ಪಯಣ ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್‌ ತಂಡವನ್ನು, ಮಾ. 26ರ ತವರಿನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next