Advertisement

ಗೆಲುವಿನ ಅಂತರ ಒಂದೇ ರನ್‌! ಜಲಕ್‌ ಇದ್ದರಷ್ಟೇ ಕಪ್‌ ಎಂಬುದನ್ನು ಸಾಬೀತುಪಡಿಸಿದ ಮುಂಬೈ

11:04 PM Apr 20, 2022 | Team Udayavani |

ಕಪ್‌ ಗೆಲ್ಲಬೇಕಾದರೆ ಲಕ್‌ ಬೇಕು ಎಂಬುದನ್ನು ಸಾಬೀತುಪಡಿಸಿದ ತಂಡ ಮುಂಬೈ ಇಂಡಿಯನ್ಸ್‌. “ಲಕ್‌ ಇಲ್ಲ’ ಎಂಬುದನ್ನು ಆರ್‌ಸಿಬಿ ಬಹಳಷ್ಟು ಸಲ ಸಾಬೀತುಪಡಿಸಿತ್ತಾದರೂ ಸಾಧನೆಯೊಂದಿಗೆ ಅದೃಷ್ಟವೂ ಇರಬೇಕು ಎಂಬುದನ್ನು ರೋಹಿತ್‌ ಪಡೆ 2017ರ ಫೈನಲ್‌ನಲ್ಲಿ ರುಜುವಾತುಪಡಿಸಿತು. ಇಲ್ಲಿ ಮುಂಬೈ 3ನೇ ಸಲ ಚಾಂಪಿಯನ್‌ ಆಗಿ ಮೂಡಿಬಂದಿತ್ತು. ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ ತಂಡದೆದುರಿನ ಈ ಪ್ರಶಸ್ತಿ ಕಾಳಗದಲ್ಲಿ ರೋಹಿತ್‌ ಪಡೆಯ ಗೆಲುವಿನ ಅಂತರ ಕೇವಲ ಒಂದು ರನ್‌!

Advertisement

ಇದು ಹೈದರಾಬಾದ್‌ನಲ್ಲಿ ನಡೆದ ಮೊದಲ ಐಪಿಎಲ್‌ ಫೈನಲ್‌ ಆಗಿತ್ತು. ಇಲ್ಲಿನ ಲೋ ಸ್ಕೋರ್‌ ಮ್ಯಾಚ್‌ ಕ್ರಿಕೆಟ್‌ ಅಭಿಮಾನಿಗಳಿಗೆ ಬೋರ್‌ ಹೊಡೆಸಿತಾದರೂ ಅಷ್ಟೇ ರೋಚಕವಾಗಿ ಸಾಗಿ ಇದೇ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದ್ದು ಸುಳ್ಳಲ್ಲ.

ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈಗೆ ಗಳಿಸಲು ಸಾಧ್ಯವಾದದ್ದು 8 ವಿಕೆಟಿಗೆ 129 ರನ್‌ ಮಾತ್ರ. ಇದನ್ನು ಪುಣೆ ಸುಲಭವಾಗಿ ಗೆಲ್ಲಬಹುದಿತ್ತು. ಆದರೆ ಕೊನೆಯಲ್ಲಿ ಏನೇನೋ ನಾಟಕೀಯ ವಿದ್ಯಮಾನಗಳು ಘಟಿಸಿದವು. ಬ್ಯಾಟ್ಸ್‌ಮನ್‌ಗಳ ಕೈಯನ್ನು ಕಟ್ಟಿಹಾಕುವಲ್ಲಿ ಮುಂಬೈ ಯಶಸ್ವಿಯಾಯಿತು. ಅಂತಿಮವಾಗಿ ಪುಣೆ 4 ವಿಕೆಟ್‌ಗಳನ್ನು ಕೈಲಿರಿಸಿಕೊಂಡೂ 128 ರನ್‌ ಗಳಿಸಿ ಒಂದು ರನ್ನಿನ ಸೋಲಿಗೆ ತುತ್ತಾಯಿತು!
ಮಂಕು ಬಡಿಯಿತು…

ಅಜಿಂಕ್ಯ ರಹಾನೆ (44) ಮತ್ತು ನಾಯಕ ಸ್ಟೀವನ್‌ ಸ್ಮಿತ್‌ (51) ಸಾಹಸದಿಂದ ಪುಣೆ ಎದುರಾಳಿ ಬೌಲರ್ ಮೇಲೆ ಸವಾರಿ ಮಾಡಿತ್ತು. ಒಂದಕ್ಕೆ 72 ರನ್‌, 2ಕ್ಕೆ 98 ರನ್‌ ಗಳಿಸಿ ಗೆಲುವಿನ ಹಾದಿಯಲ್ಲಿತ್ತು. ಆದರೆ ಕೊನೆಕೊನೆಗೆ ಪುಣೆ ಆಟಗಾರರಿಗೆ ಮಂಕು ಬಡಿದಂತಾಯಿತು. ರನ್‌ ಬರಗಾಲ ತೀವ್ರಗೊಂಡಿತು. ವಿಕೆಟ್‌ ಕೈಲಿದ್ದರೂ ರನ್‌ ಬರುತ್ತಿರಲಿಲ್ಲ. ಹೀಗಾಗಿ ಅಂತಿಮ ಓವರ್‌ನಲ್ಲಿ 11 ರನ್‌ ತೆಗೆಯುವ ಒತ್ತಡಕ್ಕೆ ಸಿಲುಕಿತು.

ಬೌಲರ್‌ ಮಿಚೆಲಲ್‌ ಜಾನ್ಸನ್‌. ಸ್ಟ್ರೈಕರ್‌ ಮನೋಜ್‌ ತಿವಾರಿ. ಮೊದಲ ಎಸೆತಕ್ಕೆ ಬೌಂಡರಿ, ದ್ವಿತೀಯ ಎಸೆತಕ್ಕೆ ಔಟ್‌. ಮುಂದಿನ ಎಸೆತದಲ್ಲಿ ನಾಯಕ ಸ್ಮಿತ್‌ ಕೂಡ ತಮ್ಮದೇ ದೇಶದ ವೇಗಿಯ ಮೋಡಿಗೆ ಸಿಲುಕಿದರು. ಜಾನ್ಸನ್‌ ಅವರ ಹ್ಯಾಟ್ರಿಕ್‌ ಎಸೆತದಲ್ಲಿ ಒಂದು ಬೈ ಲಭಿಸಿತು. ಬಳಿಕ ಕ್ರಿಸ್ಟಿಯನ್‌ 2 ರನ್‌ ತೆಗೆದರು. ಅಂತಿಮ ಎಸೆತದಲ್ಲಿ ಪುಣೆ ಜಯಕ್ಕೆ ಬೌಂಡರಿಯೇ ಬೇಕಿತ್ತು. ಇಲ್ಲಿ 3ನೇ ರನ್‌ ತೆಗೆಯುವ ಧಾವಂತದಲ್ಲಿ ಕ್ರಿಸ್ಟಿಯನ್‌ ರನೌಟಾದರು. ನೂತನ ಪುಣೆ ತಂಡದ ಐತಿಹಾಸಿಕ ಕನಸೊಂದು ಹೀಗೆ ಛಿದ್ರಗೊಂಡಿತು.

Advertisement

ಐಪಿಎಲ್‌ ಫೈನಲ್‌ನಲ್ಲಿ ಅತೀ ಕಡಿಮೆ ಮೊತ್ತವನ್ನು ಯಶಸ್ವಿಯಾಗಿ ಉಳಿಸಿಕೊಂಡ ಹೆಗ್ಗಳಿಕೆ ಮುಂಬೈ ಇಂಡಿಯನ್ಸ್‌ ತಂಡದ್ದಾಯಿತು. ಇದರೊಂದಿಗೆ ಸೌರಭ್‌ ತಿವಾರಿ, ಜಹೀರ್‌ ಖಾನ್‌, ಎಲ್‌. ಬಾಲಾಜಿ ಮತ್ತು ಎಂ.ಎಸ್‌. ಧೋನಿ 2 ತಂಡಗಳ ಜತೆ ಫೈನಲ್‌ ಸೋಲಿನ ನಂಟನ್ನು ಹೊಂದಿದಂತಾಯಿತು.

ಮುಂಬೈಗೆ ಜೈದೇವ್‌ ಉನಾದ್ಕತ್‌, ವಾಷಿಂಗ್ಟನ್‌ ಸುಂದರ್‌ ಸೇರಿಕೊಂಡು ಬಲವಾದ ಬ್ರೇಕ್‌ ಹಾಕಿದರು. ಕಾಂಗರೂ ನಾಡಿನ ಬೌಲರ್‌ಗಳಾದ ಝಂಪ, ಕ್ರಿಸ್ಟಿಯನ್‌ ಕೂಡ ಘಾತಕವಾಗಿ ಕಂಡುಬಂದರು. 100 ರನ್‌ ಪೂರ್ತಿಗೊಳ್ಳಲು 18 ಓವರ್‌ ಬೇಕಾಯಿತು. ಅಬ್ಬರಿಸಿದ್ದು ಕೃಣಾಲ್‌ ಪಾಂಡ್ಯ ಒಬ್ಬರೇ.

ಸ್ಕೋರ್‌ ಪಟ್ಟಿ
ಮುಂಬೈ ಇಂಡಿಯನ್ಸ್‌
ಲೆಂಡ್ಲ್ ಸಿಮನ್ಸ್‌ ಸಿ ಮತ್ತು ಬಿ ಉನಾದ್ಕತ್‌ 3
ಪಾರ್ಥಿವ್‌ ಪಟೇಲ್‌ ಸಿ ಠಾಕೂರ್‌ ಬಿ ಉನಾದ್ಕತ್‌ 4
ಅಂಬಾಟಿ ರಾಯುಡು ರನೌಟ್‌ 12
ರೋಹಿತ್‌ ಶರ್ಮ ಸಿ ಠಾಕೂರ್‌ ಬಿ ಝಂಪ 24
ಕೃಣಾಲ್‌ ಪಾಂಡ್ಯ ಸಿ ರಹಾನೆ ಬಿ ಕ್ರಿಸ್ಟಿಯನ್‌ 47
ಕೈರನ್‌ ಪೊಲಾರ್ಡ್‌ ಸಿ ತಿವಾರಿ ಬಿ ಝಂಪ 7
ಹಾರ್ದಿಕ್‌ ಪಾಂಡ್ಯ ಎಲ್‌ಬಿಡಬ್ಲ್ಯು ಕ್ರಿಸ್ಟಿಯನ್‌ 10
ಕಣ್‌ì ಶರ್ಮ ರನೌಟ್‌ 1
ಮಿಚೆಲ್‌ ಜಾನ್ಸನ್‌ ಔಟಾಗದೆ 13
ಇತರ 8
ಒಟ್ಟು (8 ವಿಕೆಟಿಗೆ) 129
ವಿಕೆಟ್‌ ಪತನ: 1-7, 2-8, 3-41, 4-56, 5-65, 6-78, 7-79, 8-129.
ಬೌಲಿಂಗ್‌: ಜೈದೇವ್‌ ಉನಾದ್ಕತ್‌ 4-0-19-2
ವಾಷಿಂಗ್ಟನ್‌ ಸುಂದರ್‌ 4-0-13-0
ಶಾದೂìಲ್‌ ಠಾಕೂರ್‌ 2-0-7-0
ಲಾಕಿ ಫ‌ರ್ಗ್ಯುಸನ್‌ 2-0-21-0
ಆ್ಯಡಂ ಝಂಪ 4-0-32-2
ಡೇನಿಯಲ್‌ ಕ್ರಿಸ್ಟಿಯನ್‌ 4-0-34-2

ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌
ಅಜಿಂಕ್ಯ ರಹಾನೆ ಸಿ ಪೊಲಾರ್ಡ್‌ ಬಿ ಜಾನ್ಸನ್‌ 44
ರಾಹುಲ್‌ ತ್ರಿಪಾಠಿ ಎಲ್‌ಬಿಡಬ್ಲ್ಯು ಬುಮ್ರಾ 3
ಸ್ಟೀವನ್‌ ಸ್ಮಿತ್‌ ಸಿ ರಾಯುಡು ಬಿ ಜಾನ್ಸನ್‌ 51
ಎಂ.ಎಸ್‌. ಧೋನಿ ಸಿ ಪಾರ್ಥಿವ್‌ ಬಿ ಬುಮ್ರಾ 10
ಮನೋಜ್‌ ತಿವಾರಿ ಸಿ ಪೊಲಾರ್ಡ್‌ ಬಿ ಜಾನ್ಸನ್‌ 7
ಡೇನಿಯಲ್‌ ಕ್ರಿಸ್ಟಿಯನ್‌ ರನೌಟ್‌ 4
ವಾಷಿಂಗ್ಟನ್‌ ಸುಂದರ್‌ ಔಟಾಗದೆ 0
ಇತರ 9
ಒಟ್ಟು (6 ವಿಕೆಟಿಗೆ) 128
ವಿಕೆಟ್‌ ಪತನ: 1-17, 2-71, 3-98, 4-123, 5-123, 6-128.
ಬೌಲಿಂಗ್‌: ಕೃಣಾಲ್‌ ಪಾಂಡ್ಯ 4-0-31-0
ಮಿಚೆಲ್‌ ಜಾನ್ಸನ್‌ 4-0-26-3
ಜಸ್‌ಪ್ರೀತ್‌ ಬುಮ್ರಾ 4-0-26-2
ಲಸಿತ ಮಾಲಿಂಗ 4-0-21-0
ಕಣ್‌ì ಶರ್ಮ 4-0-18-0

ಪಂದ್ಯಶ್ರೇಷ್ಠ: ಕೃಣಾಲ್‌ ಪಾಂಡ್ಯ
ಸರಣಿಶ್ರೇಷ್ಠ: ಬೆನ್‌ ಸ್ಟೋಕ್ಸ್‌

 

Advertisement

Udayavani is now on Telegram. Click here to join our channel and stay updated with the latest news.

Next