Advertisement

ಮುಂಬೈ ಇಂಡಿಯನ್ಸ್‌ ಸೋಲಿನ ಆರಂಭದಿಂದ ಚಾಂಪಿಯನ್‌ ಆಗುವ ತನಕ…

02:58 AM May 03, 2022 | Team Udayavani |

2014ರಂತೆ 2015ರ ಐಪಿಎಲ್‌ ಉದ್ಘಾಟನಾ ಪಂದ್ಯದಲ್ಲೂ ಕೋಲ್ಕತಾ ನೈಟ್‌ರೈಡರ್ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳೇ ಎದುರಾದವು. ಅಂಗಳ, ಕೋಲ್ಕತಾದ ಈಡನ್‌ ಗಾರ್ಡನ್ಸ್‌. ಫ‌ಲಿತಾಂಶ ಕೂಡ ಕೆಕೆಆರ್‌ ಪರವಾಗಿಯೇ ಇತ್ತು. ಆದರೆ ಕೊನೆಯಲ್ಲಿ ಚಾಂಪಿಯನ್‌ ಆಗಿ ಮೂಡಿಬಂದ ತಂಡ ಯಾವುದೆಂದರೆ… ಉದ್ಘಾಟನಾ ಪಂದ್ಯದಲ್ಲಿ ಸೋತ ಮುಂಬೈ ಇಂಡಿಯನ್ಸ್‌!

Advertisement

2014ರ ಚಾಂಪಿಯನ್‌ ಆಗಿದ್ದ ಕೋಲ್ಕತಾ ನೈಟ್‌ರೈಡರ್ 2015ರಲ್ಲೂ ಗೆಲುವಿನ ಆರಂಭ ಪಡೆಯಿತು. ಮುಂಬೈಯನ್ನು 7 ವಿಕೆಟ್‌ಗಳಿಂದ ಮಣಿಸಿತು. ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ 3 ವಿಕೆಟಿಗೆ 168 ರನ್‌ ಗಳಿಸಿದರೆ, ಕೋಲ್ಕತಾ 18.3 ಓವರ್‌ಗಳ ಆಟದಲ್ಲಿ 3 ವಿಕೆಟಿಗೆ 170 ರನ್‌ ಬಾರಿಸಿ ಗೆದ್ದು ಬಂದಿತು.

ಮುಂಬೈ ಪರ ರನ್‌ ಪೇರಿಸಿದ್ದು ಇಬ್ಬರೇ. ಆರಂಭಿಕ ರೋಹಿತ್‌ ಶರ್ಮ ಮತ್ತು 5ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಕೋರಿ ಆ್ಯಂಡರ್ಸನ್‌. ಈ ನಡುವಿನ ಮೂವರು ಸೇರಿ ಗಳಿಸಿದ್ದು ಹನ್ನೆರಡೇ ರನ್‌. ಪವರ್‌ ಪ್ಲೇ ಒಳಗಾಗಿ 37 ರನ್ನಿಗೆ ಈ 3 ವಿಕೆಟ್‌ ಉರುಳಿ ಹೋಗಿತ್ತು. ಅನಂತರ ವಿಕೆಟ್‌ ಬೀಳಲೇ ಇಲ್ಲ. ರೋಹಿತ್‌-ಆ್ಯಂಡರ್ಸನ್‌ ಮುರಿಯದ 4ನೇ ವಿಕೆಟಿಗೆ 131 ರನ್‌ ಒಟ್ಟುಗೂಡಿಸಿ ಸವಾಲಿನ ಮೊತ್ತ ಪೇರಿಸುವಲ್ಲಿ ಯಶಸ್ವಿಯಾದರು.

ಶತಕ ವಂಚಿತ ರೋಹಿತ್‌
ಶತಕದತ್ತ ಸಾಗುತ್ತಿದ್ದ ರೋಹಿತ್‌ಗೆ ಎರಡೇ ರನ್ನಿನ ಕೊರತೆ ಕಾಡಿತು. ಅವರ ಅಜೇಯ 98 ರನ್‌ 65 ಎಸೆತಗಳಿಂದ ಬಂತು. ಸಿಡಿಸಿದ್ದು 12 ಬೌಂಡರಿ, 4 ಸಿಕ್ಸರ್‌. ಆ್ಯಂರ್ಡನ್‌ 41 ಎಸೆತಗಳಿಂದ ಅಜೇಯ 55 ರನ್‌ ಹೊಡೆದರು (4 ಬೌಂಡರಿ, 3 ಸಿಕ್ಸರ್‌). ಮಾರ್ನೆ ಮಾರ್ಕೆಲ್‌ 18 ರನ್ನಿತ್ತು 2 ವಿಕೆಟ್‌ ಹಾರಿಸಿದರು. ಈ ಸಾಧನೆಯಿಂದಾಗಿ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿದು ಬಂತು.

ಚೇಸಿಂಗ್‌ಗೆ ಇಳಿದ ಕೋಲ್ಕತಾ ರಾಬಿನ್‌ ಉತ್ತಪ್ಪ (9) ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಗೌತಮ್‌ ಗಂಭೀರ್‌ (57), ಮನೀಷ್‌ ಪಾಂಡೆ (40) ಮತ್ತು ಸೂರ್ಯಕುಮಾರ್‌ ಯಾದವ್‌ (ಅಜೇಯ 46) ಉತ್ತಮ ಬ್ಯಾಟಿಂಗ್‌ ಪ್ರದರ್ಶನವಿತ್ತರು. ಮೂರೇ ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.

Advertisement

ಒಟ್ಟಾರೆಯಾಗಿ ಇದು ಬ್ಯಾಟ್ಸ್‌ಮನ್‌ಗಳ ಪಂದ್ಯವಾಗಿತ್ತು. ಎರಡೂ ತಂಡಗಳ ಬೌಲರ್‌ಗಳಿಗೆ ಉರುಳಿಸಲು ಸಾಧ್ಯವಾದದ್ದು ತಲಾ 3 ವಿಕೆಟ್‌ ಮಾತ್ರ.

ಸ್ಕೋರ್‌ ಪಟ್ಟಿ
ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ಔಟಾಗದೆ 98
ಆರನ್‌ ಫಿಂಚ್‌ ಸಿ ಉಮೇಶ್‌ ಬಿ ಮಾರ್ಕೆಲ್‌ 5
ಆದಿತ್ಯ ತಾರೆ ಸಿ ಉಮೇಶ್‌ ಬಿ ಶಕಿಬ್‌ 7
ಅಂಬಾಟಿ ರಾಯುಡು ಸಿ ಪಠಾಣ್‌ ಬಿ ಮಾರ್ಕೆಲ್‌ 0
ಕೋರಿ ಆ್ಯಂಡರ್ಸನ್‌ ಔಟಾಗದೆ 55
ಇತರ 3
ಒಟ್ಟು (3 ವಿಕೆಟಿಗೆ) 168
ವಿಕೆಟ್‌ ಪತನ: 1-8, 2-37, 3-37.
ಬೌಲಿಂಗ್‌:
ಉಮೇಶ್‌ ಯಾದವ್‌ 3-0-36-0
ಮಾರ್ನೆ ಮಾರ್ಕೆಲ್‌ 4-1-18-2
ಶಕಿಬ್‌ ಅಲ್‌ ಹಸನ್‌ 4-0-48-1
ಸುನೀಲ್‌ ನಾರಾಯಣ್‌ 4-0-28-0
ಆ್ಯಂಡ್ರೆ ರಸೆಲ್‌ 3-0-21-0
ಪೀಯೂಷ್‌ ಚಾವ್ಲಾ 2-0-16-0
ಕೋಲ್ಕತಾ ನೈಟ್‌ರೈಡರ್
ರಾಬಿನ್‌ ಉತ್ತಪ್ಪ ಸಿ ಹರ್ಭಜನ್‌ ಬಿ ಆ್ಯಂಡರ್ಸನ್‌ 9
ಗೌತಮ್‌ ಗಂಭೀರ್‌ ಸಿ ರಾಯುಡು ಬಿ ಬುಮ್ರಾ 57
ಮನೀಷ್‌ ಪಾಂಡೆ ಸಿ ಪೊಲಾರ್ಡ್‌ ಬಿ ಹರ್ಭಜನ್‌ 40
ಸೂರ್ಯಕುಮಾರ್‌ ಔಟಾಗದೆ 46
ಯೂಸುಫ್ ಪಠಾಣ್‌ ಔಟಾಗದೆ 14
ಇತರ 4
ಒಟ್ಟು (18.3 ಓವರ್‌ಗಳಲ್ಲಿ 3 ವಿಕೆಟಿಗೆ) 170
ವಿಕೆಟ್‌ ಪತನ: 1-13, 2-98, 3-121.
ಬೌಲಿಂಗ್‌:
ಲಸಿತ ಮಾಲಿಂಗ 4-0-27-0
ವಿನಯ್‌ ಕುಮಾರ್‌ 3.3-0-21-0
ಕೋರಿ ಆ್ಯಂಡರ್ಸನ್‌ 2-0-21-1
ಜಸ್‌ಪ್ರೀತ್‌ ಬುಮ್ರಾ 3-0-38-1
ಪ್ರಗ್ಯಾನ್‌ ಓಜಾ 2-0-23-0
ಹರ್ಭಜನ್‌ ಸಿಂಗ್‌ 4-0-38-1
ಪಂದ್ಯಶ್ರೇಷ್ಠ: ಮಾರ್ನೆ ಮಾರ್ಕೆಲ್‌

 

Advertisement

Udayavani is now on Telegram. Click here to join our channel and stay updated with the latest news.

Next