Advertisement
ಮೊದಲು ಬ್ಯಾಟಿಂಗ್ ನಡೆಸಲು ನಿರ್ಧರಿಸಿದ ಡೆಲ್ಲಿ ತಂಡ 5 ವಿಕೆಟಿಗೆ 191 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಚೆನ್ನೈ 6 ವಿಕೆಟ್ ನಷ್ಟಕ್ಕೆ 171 ರನ್ ಮಾತ್ರ ಗಳಿಸಿತು. ಚೆನ್ನೈ 7 ರನ್ ಆಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ರುತುರಾಜ್ ಗಾಯಕ್ವಾಡ್ 1, ರಚಿನ್ 2 ರನ್ ಗಳಿಸಿ ನಿರ್ಗಮಿಸಿದರು. ಅಜಿಂಕ್ಯ ರಹಾನೆ 45, ಡ್ಯಾರಿಲ್ ಮಿಚೆಲ್ 34, ಶಿವಂ ದುಬೆ 18, ಕೊನೆಯಲ್ಲಿ ಧೋನಿ 37 ಮತ್ತು ಜಡೇಜ 21 ರನ್ ಗಳಿಸಿದರು. ಧೋನಿ16 ಎಸೆತಗಳಲ್ಲಿ 37 ರನ್ ಗಳಿಸಿದರು.4 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿ ಕೊನೆಯಲ್ಲಿ ಅಭಿಮಾನಿಗಳನ್ನು ರಂಜಿಸಿದರು.
ಕಾರು ಅಪಘಾತದಿಂದ ಗಂಭೀರ ಗಾಯಗೊಂಡು ಪೂರ್ಣ ರೀತಿಯಲ್ಲಿ ಚೇತರಿಸಿ ಐಪಿಎಲ್‌ನಲ್ಲಿ ಆಡಲು ಇಳಿದ ರಿಷಬ್ ಪಂತ್ ಅಮೋಘ ಅರ್ಧಶತಕ ದಾಖಲಿಸಿ ಯಶಸ್ವಿಯಾಗಿ ತನ್ನ ಪುನರಾಗಮನವನ್ನು ಸಾರಿದರು. ವಾರ್ನರ್ ಮತ್ತು ಪೃಥ್ವಿ ಶಾ ಮೊದಲ ವಿಕೆಟಿಗೆ 93 ರನ್ನುಗಳ ಜತೆಯಾಟ ನಡೆಸಿ ತಂಡ ಉತ್ತಮ ಮೊತ್ತ ಪೇರಿಸುವ ಸೂಚನೆಯಿತ್ತರು. ಆಬಳಿಕ ಬಂದ ರಿಷಬ್ ಪಂತ್ 32 ಎಸೆತಗಳಿಂದ 51 ರನ್ ಗಳಿಸಿದರು. ವಾರ್ನರ್ 35 ಎಸೆತಗಳಿಂದ 52 ರನ್ ಹೊಡೆದರೆ ಶಾ 27 ಎಸೆತಗಳಿಂದ 43 ರನ್ ಹೊಡೆದರು.
Related Articles
Advertisement