Advertisement

ಮುಂಬೈಗೆ ಐಪಿಎಲ್ ಕಿರೀಟ

03:03 AM May 13, 2019 | Sriram |

ಹೈದರಾಬಾದ್‌: ಒಂದು ತಿಂಗಳಿಗೂ ಹೆಚ್ಚು ಕಾಲ ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನೆ ಮನಸ್ಸು ಆವರಿಸಿದ್ದ 12ನೇ ಆವೃತ್ತಿ ಐಪಿಎಲ್ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಟಿ20 ಕೂಟಕ್ಕೆ ರವಿವಾರ ಅದ್ಧೂರಿ ತೆರೆ ಬಿದ್ದಿದೆ.

Advertisement

ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ರೋಹಿತ್‌ ಶರ್ಮ ನೇತೃತ್ವದ ಮುಂಬೈ ಇಂಡಿಯನ್ಸ್‌ ರೋಚಕ 1 ರನ್‌ ಗೆಲುವು ಸಾಧಿಸಿತು. ಮುಂಬೈ ಒಟ್ಟಾರೆ 4ನೇ ಸಲ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡು ಇತಿಹಾಸದ ಪುಟ ಸೇರಿತು.

ಹಾಲಿ ಚಾಂಪಿಯನ್‌ ಪಟ್ಟದಲ್ಲಿದ್ದ ಚೆನ್ನೈ ಲಸಿತ ಮಹಾಲಿಂಗ ಎಸೆದ ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಎಡವಿ ಟ್ರೋಫಿ ಗೆಲ್ಲುವ ಅವಕಾಶದಿಂದ ವಂಚಿತಗೊಂಡಿತು.

ಮೊದಲು ಬ್ಯಾಟಿಂಗ್‌ ಮಾಡಿದ್ದ ಮುಂಬೈ ಇಂಡಿಯನ್ಸ್‌ ಕೈರನ್‌ ಪೊಲಾರ್ಡ್‌ ಅವರ ಅಜೇಯ 41 ರನ್‌ ನೆರವಿನಿಂದ 20 ಓವರ್‌ಗೆ 8 ವಿಕೆಟ್‌ಗೆ 149 ರನ್‌ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಚೆನ್ನೈ ತಂಡವು ಶೇನ್‌ ವಾಟ್ಸನ್‌ (80 ರನ್‌) ಅರ್ಧಶತಕ ನೆರವಿನಿಂದ ಗೆಲುವಿನ ಹೋರಾಟ ನಡೆಸಿತಾದರೂ ಕೊನೆಯಲ್ಲಿ ಮುಂಬೈ ಬಿಗಿ ಬೌಲಿಂಗ್‌ ದಾಳಿಗೆ ಸಿಲುಕಿ 20 ಓವರ್‌ಗೆ 7 ವಿಕೆಟ್‌ಗೆ 148 ರನ್‌ಗಳಿಸಿ ಶರಣಾಯಿತು.

ಮುಂಬೈ ಇಂಡಿಯನ್ಸ್‌
ಕ್ವಿಂಟನ್‌ ಡಿ ಕಾಕ್‌ ಸಿ ಧೋನಿ ಬಿ ಠಾಕೂರ್‌ 29
ರೋಹಿತ್‌ ಶರ್ಮ ಸಿ ಧೋನಿ ಬಿ ಚಹರ್‌ 15
ಸೂರ್ಯಕುಮಾರ್‌ ಯಾದವ್‌ ಬಿ ತಾಹಿರ್‌ 15
ಇಶಾನ್‌ ಕಿಶನ್‌ ಸಿ ರೈನಾ ಬಿ ತಾಹಿರ್‌ 23
ಕೃಣಾಲ್‌ ಪಾಂಡ್ಯ ಸಿ ಮತ್ತು ಬಿ ಠಾಕೂರ್‌ 7
ಕೈರನ್‌ ಪೊಲಾರ್ಡ್‌ ಔಟಾಗದೆ 41
ಹಾರ್ದಿಕ್‌ ಪಾಂಡ್ಯ ಎಲ್‌ಬಿಡಬ್ಲ್ಯು ಚಹರ್‌ 16
ರಾಹುಲ್‌ ಚಹರ್‌ ಸಿ ಡು ಪ್ಲೆಸಿಸ್‌ ಬಿ ಚಹರ್‌ 0
ಮಿಚೆಲ್‌ ಮೆಕ್ಲೆನಗನ್‌ ರನೌಟ್‌ 0
ಜಸ್‌ಪ್ರೀತ್‌ ಬುಮ್ರಾ ಔಟಾಗದೆ 0
ಇತರ 3
ಒಟ್ಟು (8 ವಿಕೆಟಿಗೆ) 149
ವಿಕೆಟ್‌ ಪತನ: 1-45, 2-45, 3-82, 4-89, 5-101, 6-140, 7-140, 8-141.
ಬೌಲಿಂಗ್‌: ದೀಪಕ್‌ ಚಹರ್‌ 4-1-26-3
ಶಾದೂìಲ್‌ ಠಾಕೂರ್‌ 4-0-37-2
ಹರ್ಭಜನ್‌ ಸಿಂಗ್‌ 4-0-27-0
ಡ್ವೇನ್‌ ಬ್ರಾವೊ 3-0-24-0
ಇಮ್ರಾನ್‌ ತಾಹಿರ್‌ 3-0-23-2
ರವೀಂದ್ರ ಜಡೇಜ 2-0-12-0
ಚೆನ್ನೈ ಸೂಪರ್‌ ಕಿಂಗ್ಸ್‌
ಫಾ ಡು ಪ್ಲೆಸಿಸ್‌ ಸ್ಟಂಪ್ಟ್ ಡಿ ಕಾಕ್‌ ಬಿ ಕೃಣಾಲ್‌ 26
ಶೇನ್‌ ವಾಟ್ಸನ್‌ ರನೌಟ್‌ 80
ಸುರೇಶ್‌ ರೈನಾ ಎಲ್‌ಬಿಡಬ್ಲ್ಯು ಚಹರ್‌ 8
ಅಂಬಾಟಿ ರಾಯುಡು ಸಿ ಡಿ ಕಾಕ್‌ ಬಿ ಬುಮ್ರಾ 1
ಎಂ.ಎಸ್‌. ಧೋನಿ ರನೌಟ್‌ 2
ಡ್ವೇನ್‌ ಬ್ರಾವೊ ಸಿ ಡಿ ಕಾಕ್‌ ಬಿ ಬುಮ್ರಾ 15
ರವೀಂದ್ರ ಜಡೇಜ ಔಟಾಗದೆ 5
ಶಾದೂìಲ್‌ ಠಾಕೂರ್‌ ಎಲ್‌ಬಿಡಬ್ಲ್ಯು ಮಾಲಿಂಗ 2
ಇತರ 9
ಒಟ್ಟು (20 ಓವರ್‌ಗಳಲ್ಲಿ 7 ವಿಕೆಟಿಗೆ) 148
ವಿಕೆಟ್‌ ಪತನ: 1-33, 2-70, 3-73, 4-81, 5-133, 6-146, 7-148.
ಬೌಲಿಂಗ್‌: ಮಿಚೆಲ್‌ ಮೆಕ್ಲೆನಗನ್‌ 4-0-24-0
ಕೃಣಾಲ್‌ ಪಾಂಡ್ಯ 3-0-39-1
ಲಸಿತ ಮಾಲಿಂಗ 4-0-49-1
ಜಸ್‌ಪ್ರೀತ್‌ ಬುಮ್ರಾ 4-0-14-2
ರಾಹುಲ್‌ ಚಹರ್‌ 4-0-14-1
ಹಾರ್ದಿಕ್‌ ಪಾಂಡ್ಯ 1-0-3-0

Advertisement

ವಿಜೇತರಿಗೆ ದೊರೆತ ನಗದು
20 ಕೋಟಿ ಮುಂಬೈ (ವಿನ್ನರ್‌)
12.5 ಕೋಟಿ ಚೆನ್ನೈ (ರನ್ನರ್‌ ಅಪ್‌)
10.5 ಕೋಟಿ ಡೆಲ್ಲಿ (ತೃತೀಯ ಸ್ಥಾನ)
 8.5 ಕೋಟಿ ಹೈದರಾಬಾದ್‌ (4ನೇ ಸ್ಥಾನ)

Advertisement

Udayavani is now on Telegram. Click here to join our channel and stay updated with the latest news.

Next