Advertisement
ಅನುಭವಿ ಆಟಗಾರರನ್ನು ಹೊಂದಿ ರುವ ಕೆಎಲ್ ರಾಹುಲ್ ಪಡೆ ಇಷ್ಟರ ವರೆಗೆ ಆಡಿದ ಐದು ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿದ್ದು ಎರಡರಲ್ಲಿ ಸೋತು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ರಾಜಸ್ಥಾನ್ ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಅಗ್ರಸ್ಥಾನದಲ್ಲಿದೆ. ಹಾಗಾಗಿ ಇದು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿರುವವರ ನಡುವಣ ಹೋರಾಟವಾಗಿದೆ.
Related Articles
Advertisement
ಕೃಣಾಲ್ ಪಾಂಡ್ಯ, ಕೃಷ್ಣಪ್ಪ ಗೌತಮ್ ಕೂಡ ಉತ್ತಮ ದಾಳಿ ಸಂಘಟಿಸಿ ಗಮನ ಸೆಳೆದಿದ್ದಾರೆ. ವೇಗಿಗಳ ಪೈಕಿ ಮಾರ್ಕ್ ವುಡ್ ಮತ್ತು ಆವೇಶ್ ಖಾನ್ ಭರ್ಜರಿ ನಿರ್ವಹಣೆ ನೀಡಿದ್ದಾರೆ. ಯಧುವೀರ್ ಸಿಂಗ್ ಚರಕ್ ಪಂಜಾಬ್ ವಿರುದ್ಧ ಐಪಿಎಲ್‌ಗೆ ಪದಾರ್ಪಣೆಗೈದ ಪಂದ್ಯ ದಲ್ಲಿಯೇ ಎರಡು ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ.
ರಾಜಸ್ಥಾನ್ ಬ್ಯಾಟಿಂಗ್ ಬಲಿಷ್ಠಗರಿಷ್ಠ ನಾಲ್ಕು ಪಂದ್ಯಗಳಲ್ಲಿ ಗೆದ್ದಿರುವ ರಾಜಸ್ಥಾನ್ ಶ್ರೇಷ್ಠ ನಿರ್ವಹಣೆ ನೀಡುತ್ತಿದೆ. ಯಶಸ್ವಿ ಜೈಸ್ವಾಲ್, ಜಾಸ್ ಬಟ್ಲರ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಒಳಗೊಂಡ ತಂಡದ ಬ್ಯಾಟಿಂಗ್ ಬಲಿಷ್ಠವಾಗಿದೆ. ಪವರ್‌ಪ್ಲೇಯಲ್ಲಿ ಭರ್ಜರಿ ನಿರ್ವಹಣೆ ನೀಡಿದ ತಂಡವು ಎಲ್ಲ ಪಂದ್ಯಗಳಲ್ಲಿಯೂ ಉತ್ತಮ ಆರಂಭವನ್ನು ಪಡೆದಿದೆ. 204 ರನ್ ಗಳಿಸಿರುವ ಬಟ್ಲರ್ ತಂಢದ ಗರಿಷ್ಠ ಸ್ಕೋರರ್ ಆಗಿದ್ದರೆ ಜೈಸ್ವಾಲ್ 136 ರನ್ ಗಳಿಸಿದ್ದಾರೆ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಆರಂಭಿಕರು ವಿಫಲರಾದಾಗ ನಾಯಕ ಸ್ಯಾಮ್ಸನ್ 32 ಎಸೆತಗಳಲ್ಲಿ 60 ರನ್ ಸಿಡಿಸುವ ಮೂಲಕ ತಂಡವನ್ನು ಆಧರಿಸಿ ದ್ದರು. ವೆಸ್ಟ್ ಇಂಡೀಸ್‌ನ ಶಿಮ್ರಾನ್ ಹೆಟ್‌ಮೈರ್ ಕೇವಲ 26 ಎಸೆತಗಳಲ್ಲಿ 56 ರನ್ ಗಳಿಸಿ ತಂಡಕ್ಕೆ ಜಯ ಒದಗಿಸಿದ್ದರು. ದೇವದತ್ ಪಡಿಕ್ಕಲ್ ಉತ್ತಮವಾಗಿ ಆಡಿದ್ದರೆ ರಿಯಾನ್ ಪರಾಗ್ ಇನ್ನೂ ಅವಕಾಶಗಳನ್ನು ಪಡೆಯಲು ವಿಫಲರಾಗುತ್ತಿದ್ದಾರೆ. ರಾಜಸ್ಥಾನದ ಸ್ಪಿನ್ ಪಡೆ ಬಲಿಷ್ಠ ವಾಗಿದೆ. ಯಜುವೇಂದ್ರ ಚಹಲ್, ಆ್ಯಡಂ ಝಂಪ ಮತ್ತು ಆರ್. ಅಶ್ವಿನ್ ಅವರ ಉಪಸ್ಥಿತಿ ಎದುರಾಳಿ ತಂಡಕ್ಕೆ ನಡುಕ ಹುಟ್ಟಿಸಲಿದೆ. ಸ್ಪಿನ್ ಬಲದಿಂದಲೇ ತಂಡವು ಚೆನ್ನೈ ವಿರುದ್ಧ ಜಯಭೇರಿ ಬಾರಿಸಿತ್ತು. ವೇಗಿ ಟ್ರೆಂಟ್ ಬೌಲ್ಟ್ ಆರಂಭದ ಎರಡು ವಿಕೆಟ್ ಹಾರಿಸುವ ಮೂಲಕ ಡೆಲ್ಲಿ ತಂಡ ಹಳಿ ತಪ್ಪುವಂತೆ ಮಾಡಿದ್ದರು. ಮಧ್ಯಮ ವೇಗಿ ಸಂದೀಪ್ ಶರ್ಮ ಕೂಡ ಗಮನ ಸೆಳೆಯುವಂತಹ ಬೌಲಿಂಗ್ ನಿರ್ವಹಣೆ ನೀಡುತ್ತಿದ್ದಾರೆ.