Advertisement

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ಕುಷ್ಟಗಿ ಪೊಲೀಸರಿಂದ ಓರ್ವನ ಬಂಧನ, ಇನ್ನೋರ್ವ ಪರಾರಿ

03:42 PM Apr 09, 2022 | Team Udayavani |

ಕುಷ್ಟಗಿ : ಗುಜರಾತ್ ಟೈಟಾನ್ ಹಾಗೂ ಪಂಜಾಬ್ ಕಿಂಗ್ಸ್ ಇಲೆವನ್ ತಂಡದ ಐಪಿಎಲ್ ಕ್ರಿಕೆಟ್ ಗೆ ಬೆಟ್ಟಿಂಗ್ ನಲ್ಲಿ ನಿರತರಾಗಿದ್ದ ತಂಡಗಳ ಮೇಲೆ ಪೊಲೀಸರು ದಾಳಿ ನಡೆಸಿ ಒಬ್ಬ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದು ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.

Advertisement

ಕಳೆದ ರಾತ್ರಿ ಇಲ್ಲಿನ ಟೆಂಗುಂಟಿ ಕ್ರಾಸ್ ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಿರತರಾಗಿದ್ದಾರೆಂದು ಖಚಿತ ಮಾಹಿತಿ ಮೇರೆಗೆ ಪೊಲೀಸರು, ದಾಳಿ ನಡೆಸಿದ ಸಂದರ್ಭದಲ್ಲಿ ದುರ್ಗಾ ಕಾಲೋನಿಯ ಮಲ್ಲಪ್ಪ ಕುರ್ನಾಳ ಎಂಬ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಬಂಧಿತರಿಂದ ಮೋಬೈಲ್, 1,850ರೂ. ವಶಕ್ಕೆ ತೆಗೆದುಕೊಳ್ಳಲಾಗಿದೆ. ಮತ್ತೋರ್ವ ಆರೋಪಿ ದುರ್ಗಾ ಕಾಲೋನಿಯ ಶಶಿ ತಲಾಖಾನ್ ಪರಾರಿಯಾಗಿದ್ದಾನೆ.

ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ನಟಿ ಸೋನಂ ಕಪೂರ್ ಮನೆಯಲ್ಲಿ ದರೋಡೆ; 2.4 ಕೋಟಿ ರೂ. ಮೌಲ್ಯದ ಬಂಗಾರ ಕಳವು!

Advertisement
Advertisement

Udayavani is now on Telegram. Click here to join our channel and stay updated with the latest news.

Next