ಹೊಸದಿಲ್ಲಿ: ತೀವ್ರ ನಿರೀಕ್ಷೆಯ ಐಪಿಎಲ್ ಪ್ರಸಾರ ಹಕ್ಕು ರೇಸ್‌ನಿಂದ ಅಮೆಜಾನ್ ಹಿಂದೆ ಸರಿದಿದೆ. ಹೀಗಾಗಿ ಇದು ಚತುಷ್ಕೋಣ ಸ್ಪರ್ಧೆಗೆ ಸೀಮಿತಗೊಂಡಿದೆ. ಕಣದಲ್ಲಿರುವ ಕಂಪೆನಿಗಳೆಂದರೆ ಸ್ಟಾರ್, ವಿಯಾಕಾಮ್ 18, ಸೋಣಿ ಮತ್ತು ಜೀ ನೆಟ್‌ವರ್ಕ್.
ಜೂನ್ 12ರಂದು ನಡೆಯಲಿರುವ ಈ ಹರಾಜಿನಲ್ಲಿ ಯಾವ ಕಂಪೆನಿಗಳು ಬಾಗವಹಿಸಿದರೂ ಬಿಸಿಸಿಐಗೆ ಬಂಪರ್ ಲಾಭ ಆಗುವುದರಲ್ಲಿ ಅನುಮಾನವಿಲ್ಲ.
2018-2022ರ ಅವಧಿಯ ಮಾಧ್ಯಮ ಹಕ್ಕುಗಳಿಂದ 16,347.5 ಕೋಟಿ ರೂ. ಗಳಿಸಿತ್ತು. ಈ ಬಾರಿ 50ರಿಂದ 60 ಸಾವಿರ ಲಾಭ ದೊರಕುವ ಸಾಧ್ಯತೆ ಇದೆ.
ಈ ಬಾರಿಯ ಮೂಲ ಬೆಲೆ ದ್ವಿಗುಣಗೊಂಡಿದ್ದು, 33 ಸಾವಿರ ಕೋಟಿ ರೂ.ಗೆ ಏರಿದೆ. ಹರಾಜು ರೀತಿ ತುಸು ಭಿನ್ನವಾಗಿದ್ದು, ಟಿವಿ ಹಕ್ಕು ಮತ್ತು ನೇರ ಪ್ರಸಾರ ಹಕ್ಕುಗಳಿಗೆ ಪ್ರತ್ಯೇಕ ಹರಾಜು ಏರ್ಪಡಲಿದೆ.