Advertisement

ಕ್ರೀಡಾಂಗಣಗಳಿಗೆ ಮುಕ್ತಿ; ಆಟ ಒಳಗೆ, ವೀಕ್ಷಕರು ಹೊರಗೆ!

01:04 AM May 19, 2020 | Sriram |

ಹೊಸದಿಲ್ಲಿ: ಲಾಕ್‌ಡೌನ್‌ 4.0 ಮೇ ಅಂತ್ಯದ ತನಕ ವಿಸ್ತರಿಸಲ್ಪಟ್ಟರೂ ಭಾರತದ ಕ್ರೀಡೆಯಲ್ಲಿ ಹೊಸ ಬೆಳಕೊಂದು ಮೂಡುವ ಸೂಚನೆ ಲಭಿಸಿದೆ. ಕೋವಿಡ್-19 ದಿಂದಾಗಿ ಕಳೆದ ಸುಮಾರು 2 ತಿಂಗಳಿಂದ ಮುಚ್ಚಿದ್ದ ಕ್ರೀಡಾಂಗಣಗಳು, ಕ್ರೀಡಾ ಸಂಕೀರ್ಣಗಳೆಲ್ಲ ನೂತನ ಮಾರ್ಗ ಸೂಚಿಯೊಂದಿಗೆ ತೆರೆಯಲ್ಪಡಲಿವೆ. ಹೀಗಾಗಿ ದೇಶಾದ್ಯಂತ ಸ್ತಬ್ಧವಾಗಿದ್ದ ಕ್ರೀಡಾ ಚಟುವಟಿಕೆ ನಿಧಾನವಾಗಿ ಗರಿಗೆದರಲಿದೆ. ಇದರಿಂದ ಐಪಿಎಲ್‌ ನಡೆಯುವ ಸಾಧ್ಯತೆಯೂ ಹೆಚ್ಚಿದೆ.

Advertisement

ನೂತನ ನಿಯಮಾವಳಿ ನಿರೀಕ್ಷೆಯಂತೆಯೇ ಇದೆ. ಸ್ಟೇಡಿಯಂ, ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ಗಳೆಲ್ಲ ತೆರೆದರೂ ಇವು ಸಾರ್ವ ಜನಿಕರಿಗೆ ಮುಕ್ತವಾಗದು. ವೀಕ್ಷಕರಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿ ಸಲಾಗಿದೆ. ಮುಂದೆ ಪಂದ್ಯಗಳಿಗೆ ಅವಕಾಶ ಲಭಿಸಿದರೂ ಖಾಲಿ ಸ್ಟೇಡಿಯಂನಲ್ಲೇ ನಡೆಸಲಾಗುವುದು. ಹಾಗೆಯೇ ಕ್ರೀಡಾ ಪಟುಗಳು ಆರೋಗ್ಯ ಮಾರ್ಗಸೂಚಿಯನ್ನು ಪಾಲಿಸಿ ಸಣ್ಣ ಸಣ್ಣ ಗುಂಪುಗಳಾಗಿ ಅಭ್ಯಾಸ ನಡೆಸಬಹುದಾಗಿದೆ.

ಈ ಲಾಕ್‌ಡೌನ್‌ ಸಡಿಲಿಕೆಯಿಂದಾಗಿ ದೇಶದಲ್ಲಿ ಹಾಕಿ, ಕ್ರಿಕೆಟ್‌, ಫುಟ್‌ಬಾಲ್‌ ಪಂದ್ಯಗಳನ್ನು ನಡೆಸಲು ಸಾಧ್ಯವಾಗಲಿದೆ ಎಂಬುದೊಂದು ಲೆಕ್ಕಾಚಾರ. ಆದರೆ ಪ್ರೇಕ್ಷಕರಿಗೆ ನಿರ್ಬಂಧ ಇರುವುದರಿಂದ ಇದು ಎಷ್ಟರ ಮಟ್ಟಿಗೆ ಯಶಸ್ಸು ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇದು ಐಪಿಎಲ್‌ಗ‌ೂ ಅನ್ವಯಿಸಲಿದೆ.

ಐಪಿಎಲ್‌ ಆಯೋಜನೆ ಸಾಧ್ಯವೇ?
ಇದರಿಂದ 2020ರ ಐಪಿಎಲ್‌ ಪಂದ್ಯಾ ವಳಿಯನ್ನು ಖಾಲಿ ಸ್ಟೇಡಿಯಂನಲ್ಲಿ ನಡೆಸುವ ಬಗ್ಗೆ ಸಂಘಟಕರು ಯೋಚಿಸ ಬಹುದು. ಆದರೆ ಪ್ರಯಾಣ ನಿರ್ಬಂಧ ಇರುವುದರಿಂದ ಹಾಗೂ ವಿದೇಶಿ ಆಟಗಾರರು ಪಾಲ್ಗೊಳ್ಳುವ ಸಾಧ್ಯತೆ ಇಲ್ಲ ವಾದ್ದರಿಂದ ಈಗಲೇ ಐಪಿಎಲ್‌ ಬಗ್ಗೆ ಕನಸು ಕಟ್ಟುವುದು ದುಬಾರಿಗುವುದು ಖಂಡಿತ.

ಕಳೆದ ವಾರವಷ್ಟೇ ಕ್ರೀಡಾ ಸಚಿವ ರಿಜಿಜು ಅವರು ಕ್ರೀಡಾ ಪ್ರಮುಖರೊಂದಿಗೆ ಸಾಲು ಸಾಲು ವೀಡಿಯೋ ಸಮಾವೇಶ ನಡೆಸಿ ಎಲ್ಲರ ಅಹವಾಲುಗಳನ್ನು ಆಲಿಸಿದ್ದರು. ಕನಿಷ್ಠ, ಒಲಿಂಪಿಕ್ಸ್‌ ನಲ್ಲಿ ಪಾಲ್ಗೊಳ್ಳಲಿರುವ ಕ್ರೀಡಾ ಪಟುಗಳ ಅಭ್ಯಾ ಸಕ್ಕೆ ಅವಕಾಶ ಕಲ್ಪಿಸಿ ಎಂದು ಸಾಯ್‌ ಕೂಡ ಮನವಿ ಮಾಡಿತ್ತು.

Advertisement

ಗುತ್ತಿಗೆ ಆಟಗಾರರಿಗೆ ಅಭ್ಯಾಸಕ್ಕೆ ಅವಕಾಶ
ಹೊಸದಿಲ್ಲಿ: ಕೇಂದ್ರ ಸರಕಾರ ಘೋಷಿಸಿದ ನಾಲ್ಕನೇ ಹಂತದ ಲಾಕ್‌ಡೌನ್‌ ಮಾರ್ಗ ಸೂಚಿಯಲ್ಲಿ ಕೆಲ ಸಡಿಲಿಕೆ ಇರುವ ಕಾರಣದಿಂದಾಗಿ ಗುತ್ತಿಗೆ ಆಟಗಾರರಿಗೆ ಸ್ಥಳೀಯ ಮಟ್ಟದಲ್ಲಿ ಕೌಶಲ ಆಧಾರಿತ ತರಬೇತಿ ಶಿಬಿರ ಆರಂಭಿಸಲು ಯೋಚಿಸಲಾಗಿದೆ ಎಂದು ಬಿಸಿಸಿಐ ಖಜಾಂಚಿ ಅರುಣ್‌ ಧುಮಾಲ್‌ ಹೇಳಿದ್ದಾರೆ.

ಗೃಹ ಸಚಿವಾಲಯದ ಮಾರ್ಗಸೂಚಿಯಂತೆ ಮೈದಾನಗಳನ್ನು ತೆರೆಯಲು ಅವಕಾಶ ದೊರೆತಿದೆ. ಆದರೆ ವೀಕ್ಷಕರಿಗೆ ಅನುಮತಿ ನೀಡಲಾಗಿಲ್ಲ. ಇನ್ನೂ ಪ್ರಯಾಣ ನಿರ್ಬಂಧ ಸಲುವಾಗಿ ತರಬೇತಿಯಲ್ಲಿ ಪಾಲ್ಗೊಳ್ಳಲು ಸಾದ್ಯವಾಗದ ಆಟಗಾರರು ವೈಯಕ್ತಿಕವಾಗಿ ತರಬೇತಿ ಆರಂಭಿಸಬಹುದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next