ಮುಂಬೈ: ಪಾಕಿಸ್ಥಾನದ ಮಾಜಿ ನಾಯಕ ವಾಸೀಂ ಅಕ್ರಮ್ ಅವರು ಭಾರತದ ಕ್ರಿಕೆಟ್ ಕೂಟ ಐಪಿಎಲ್ ಅನ್ನು ಹಾಡಿಹೊಗಳಿದ್ದು, ಪಾಕಿಸ್ಥಾನದ ಪಿಎಸ್ಎಲ್ ಗಿಂತ ಐಪಿಎಲ್ ಶ್ರೇಷ್ಠ ಎಂದಿದ್ದಾರೆ.
ಕೆಕೆಆರ್ ತಂಡದ ಬೌಲಿಂಗ್ ಕೋಚ್ ಆಗಿರುವ ವಾಸೀಂ ಅಕ್ರಮ್ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡುತ್ತಾ ಈ ಮಾತುಗಳನ್ನು ಆಡಿದ್ದಾರೆ.
ಕಳೆದ ಐದಾರು ವರ್ಷಗಳಿಂದ ತುಂಬಾ ಬದಲಾವಣೆಗಳಾಗಿದೆ. ಐಪಿಎಲ್ ಗಾಗಿ ಬಿಸಿಸಿಐ ತುಂಬಾ ಹಣ ವ್ಯಯಿಸುತ್ತಿದೆ. ಹೀಗಾಗಿ ಐಪಿಎಲ್ ಈಗ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕೂಟವಾಗಿ ಬೆಳೆದಿದೆ ಎಂದಿದ್ದಾರೆ ಅಕ್ರಮ್.
ಐಪಿಎಲ್ ನಿಂದ ಗಳಿಸುವ ಹಣವನ್ನು ಬಿಸಿಸಿಐ ಪ್ರಥಮ ದರ್ಜೆ ಕ್ರಿಕೆಟ್ ಗೆ ವ್ಯಯಿಸುತ್ತಿದೆ. ಹಾಗಾಗಿ ಉತ್ತಮ ಆಟಗಾರರು ಮೂಡಿಬರುತ್ತಾರೆ ಎಂದು ವಾಸೀಂ ಅಕ್ರಮ್ ಹೇಳಿದರು.
ಕೋವಿಡ್ ನಿಂದ ಮುಂದೂಡಲ್ಪಟ್ಟಿದ್ದ ಈ ಬಾರಿಯ ಐಪಿಎಲ್ ಸಪ್ಟೆಂಬರ್ 19ರಿಂದ ಯುಎಇ ನಲ್ಲಿ ನಡೆಯಲಿದೆ.