Advertisement

ಐಪಿಎಲ್‌: ಬಿಸಿಸಿಐ ಹೊಸ ನಿಯಮ

11:09 PM Apr 09, 2022 | Team Udayavani |

ಮುಂಬಯಿ: ಈ ಬಾರಿಯ ಐಪಿಎಲ್‌ನಲ್ಲಿ ಬಿಸಿಸಿಐ ರೂಪಿಸಿರುವ ನಿಯಮವೊಂದು ತಡವಾಗಿ ತಿಳಿದು ಬಂದಿದೆ. ಪ್ರೇಕ್ಷಕರು ಬಾವುಟ ಗಳನ್ನು ಕೋಲಿನಲ್ಲಿ ಸಿಕ್ಕಿಸಿಕೊಂಡು ಸ್ಟೇಡಿಯಂಗೆ ಹೋಗುವಂತಿಲ್ಲ. ಈ ಕೋಲುಗಳನ್ನು ಉಪ ಯೋಗಿಸಿ ಪಂದ್ಯದ ವೇಳೆ ಅಭಿಮಾನಿಗಳು ಹೊಡೆದಾಡಿಕೊಳ್ಳಬಹುದು ಅಥವಾ ಮೈದಾನಕ್ಕೆ ಎಸೆಯಬಹುದು.

Advertisement

ಇದರಿಂದ ಆಟಗಾರರಿಗೆ ಗಂಭೀರ ಗಾಯಗಳೂ ಆಗಬಹುದು. ಆದ್ದ ರಿಂದ ಕೋಲುಗಳನ್ನು ಒಯ್ಯಬೇಡಿ ಎಂದು ಬಿಸಿಸಿಐ ಹೇಳಿದೆ. ಇದರಿಂದ ಪಂದ್ಯದ ವೇಳೆ ಮೈದಾನದಲ್ಲಿ ಬಾವುಟಗಳನ್ನು ಹಾರಾಡಿಸುವ ಅಭಿಮಾನಿಗಳಿಗೆ ನಿರಾಶೆಯುಂಟಾಗಿದೆ.

ಕೊರೊನಾ ಪೂರ್ವದಲ್ಲಿ ಹೀಗೆ ಕೋಲಿಗೆ ಸಿಕ್ಕಿಸಿಕೊಂಡು ಬಾವುಟಗಳನ್ನು ಒಯ್ಯಬಹುದಿತ್ತು. ಆಗ ಸ್ವತಃ ಫ್ರಾಂಚೈಸಿಗಳೇ ಪಂದ್ಯದ ಆತಿಥ್ಯ ವಹಿಸುತ್ತಿದ್ದುದರಿಂದ ಬಾವುಟಗಳನ್ನು ಅವರೇ ನೀಡುತ್ತಿದ್ದರು. ಈಗ ಬಿಸಿಸಿಐ ಐಪಿಎಲ್‌ನ ಸಂಪೂರ್ಣ ಉಸ್ತುವಾರಿ ವಹಿಸಿದೆ. ಹೀಗಾಗಿ ಇಂಥದೊಂದು ನಿರ್ಬಂಧವನ್ನು ಹೇರಿದೆ.

ವಿದೇಶಿ ಆಟಗಾರರ ವಾರದ ಇಲೆವೆನ್‌
ಐಪಿಎಲ್‌ 3ನೇ ವಾರಕ್ಕೆ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ಕಳೆದ ವಾರ ಮಿಂಚಿದ ವಿದೇಶಿ ಸಾಧಕರ ಹನ್ನೊಂದರ ಬಳಗವೊಂದನ್ನು ಪ್ರಕಟಿಸಲಾಗಿದೆ.

1. ಜಾಸ್‌ ಬಟ್ಲರ್‌
2. ಕ್ವಿಂಟನ್‌ ಡಿ ಕಾಕ್‌
3. ಲಿವಿಂಗ್‌ಸ್ಟೋನ್‌
4. ನಿಕೋಲಸ್‌ ಪೂರಣ್‌
5. ಶಿಮ್ರನ್‌ ಹೆಟ್‌ಮೈರ್‌
6. ಜೇಸನ್‌ ಹೋಲ್ಡರ್‌
7. ಪ್ಯಾಟ್‌ ಕಮಿನ್ಸ್‌
8. ಡ್ವೇನ್‌ ಪ್ರಿಟೋರಿಯಸ್‌
9. ರಶೀದ್‌ ಖಾನ್‌
10. ಲಾಕಿ ಫ‌ರ್ಗ್ಯುಸನ್‌
11. ಮುಸ್ತಫಿಜುರ್‌ ರೆಹಮಾನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next