Advertisement

ರಂಗಿನ ಐಪಿಎಲ್‌: ಹೀನಾಯ ಸೋಲುಗಳು, ಅಚ್ಚರಿಗಳು

11:50 AM Mar 25, 2019 | Team Udayavani |

ಪ್ರತೀ ವರ್ಷ ಬರುವ ಐಪಿಎಲ್‌  ಕೇವಲ ಆಟವಾಗಿ ಉಳಿದಿಲ್ಲ. ಅದು ಎಲ್ಲವನ್ನೂ ಮೀರಿ ಉದ್ಯಮವಾಗಿ, ಕೋಟ್ಯಂತರ ಅಭಿಮಾನಿಗಳ ಮನರಂಜನಾ ಕೇಂದ್ರವಾಗಿ, ಕೆಲವೊಮ್ಮೆ ಎದೆ ಬಡಿತ ನಿಲ್ಲಿಸುವ, ಇನ್ನು ಕೆಲವೊಮ್ಮೆ ಎದೆಬಡಿತ ತೀವ್ರಗೊಳಿಸುವ ಒಂದು ರೋಮಾಂಚನ.  ನೂರಾರು ಕ್ರಿಕೆಟಿಗರ ಜೀವನದ ಹರಿವನ್ನೇ ಬದಲಿಸುವ ಈ ಕೂಟ ಈ ಬಾರಿ ಮಾ.23ರಿಂದ ಶುರುವಾಗಲಿದೆ. 

Advertisement

* ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್‌ 146 ರನ್‌ಗಳಿಂದ ಸೋಲುಂಡಿದ್ದು ಐಪಿಎಲ್‌ನ ದೊಡ್ಡ ಸೋಲು.

* ಗುಜರಾತ್‌ ಲಯನ್ಸ್‌, ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ 144  ರನ್‌ಗಳಿಂದ ಸೋಲುಂಡಿದ್ದು ಐಪಿಎಲ್‌ನ 2ನೇ ದೊಡ್ಡ ಸೋಲು

* ಕೋಲ್ಕತ ನೈಟ್‌ ರೈಡರ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು140 ರನ್‌ಗಳಿಂದ ಸೋಲುಂಡಿತ್ತು.

* ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ 138 ರನ್‌ಗಳ ಅಂತರದಿಂದ ಸೋಲು ಕಂಡಿತು.

Advertisement

ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ  ಆರ್‌ಸಿಬಿಯ ಗೇಲ್‌ ಪರಾಕ್ರಮದ ಕಾರಣ, ಪುಣೆ 130 ರನ್‌ಗಳ ಸೋಲು ಅನುಭವಿಸಿತ್ತು.

ಅಚ್ಚರಿಗಳು
* ಸರ್ಫ್ರಾಜ್ಗೆ 10 ವರ್ಷ: 2008ರಲ್ಲಿ ಐಪಿಎಲ್‌ ಆರಂಭವಾದಾಗ ಸಫ್ರಾìಜ್‌ ಖಾನ್‌ಗೆ ಕೇವಲ 10 ವರ್ಷ. ಅವರು ಐಪಿಎಲ್‌ಗೆ ಆಯ್ಕೆಯಾಗುವಾಗ 17 ವರ್ಷವಾಗಿತ್ತು.
* ಗರಿಷ್ಠ ಸೊನ್ನೆ, ಗರಿಷ್ಠ ಅರ್ಧಶತಕ: ಐಪಿಎಲ್‌ನಲ್ಲಿ ಗರಿಷ್ಠ ಶೂನ್ಯ ಸಂಪಾದನೆ (12) ಮಾಡುವುದ ರೊಂದಿಗೆ, ಗರಿಷ್ಠ ಅರ್ಧಶತಕ (35) ಗಳಿಸಿದ ಆಟ ಗಾರ ಗೌತಮ್‌ ಗಂಭೀರ್‌.
* 6 ಬಾರಿ ಫ್ರಾಂಚೈಸಿ ಬದಲಿಸಿದ ಪಾರ್ಥಿವ್‌: ಪಾರ್ಥಿವ್‌ ಪಟೇಲ್‌ 6 ಬೇರೆ ಬೇರೆ ಫ್ರಾಂಚೈಸಿಗಳಲ್ಲಿ ಆಡಿದ್ದಾರೆ. ಅತಿಹೆಚ್ಚು ಬಾರಿ ಫ್ರಾಂಚೈಸಿ ಬದಲಾಯಿಸಿದ ದಾಖಲೆಯಿದು.
*ದುರದೃಷ್ಟವಂತ ಅಶೋಕ್‌ ದಿಂಡಾ: ವೇಗಿ ಅಶೋಕ್‌ ದಿಂಡಾ 5 ಬೇರೆ ಬೇರೆ ಫ್ರಾಂಚೈಸಿಗಳಲ್ಲಿ ಆಡಿದ್ದಾರೆ. ಪ್ರಾರಂಭದ 5 ಬಾರಿ ಅವರು ಪ್ರತಿನಿಧಿಸಿದ ತಂಡ ಲೀಗ್‌ನಲ್ಲೇ ಸೋತು ಹೋಗಿದೆ.
*10 ಬಾರಿ ಪಾಂಡೆ, ಉತ್ತಪ್ಪ ಒಂದಾಗಿ ಆಟ


ಆರಂಭದ ಹತ್ತು ಐಪಿಎಲ್‌ಗ‌ಳಲ್ಲಿ ಕರ್ನಾಟಕದ ರಾಬಿನ್‌ ಉತ್ತಪ್ಪ, ಮನೀಶ್‌ ಪಾಂಡೆ ಒಂದಾಗಿ ಆಡಿದ್ದರು. ಕಳೆದ ಆವೃತ್ತಿ ಇಬ್ಬರೂ ಬೇರಾಗಿದ್ದಾರೆ.
* ರನ್‌ ನೀಡದೇ ಕಾಡಿದ ಸ್ಟೇನ್‌: 2013ರಲ್ಲಿ ಹೈದರಾಬಾದ್‌ ಪರ ಆಡಿದ ಆಫ್ರಿಕಾ ವೇಗಿ ಡೇಲ್‌ ಸ್ಟೇನ್‌ 407 ಎಸೆತ ಎಸೆದಿದ್ದರು. ಈ ಪೈಕಿ 212 ಎಸೆತಗಳಿಗೆ ರನ್‌ ನೀಡಿರಲಿಲ್ಲ.
* ಚೆನ್ನೈ ಆಡಿದ ಎಲ್ಲ ಪಂದ್ಯಗಳಲ್ಲಿ ರೈನಾ: ಒಂದು ಫ್ರಾಂಚೈಸಿ ಭಾಗವಹಿಸಿದ ಎಲ್ಲ ಪಂದ್ಯಗಳಲ್ಲಿ ಆಡಿದ ಖ್ಯಾತಿ ಸುರೇಶ್‌ ರೈನಾ ಅವರದ್ದು. ಅವರು ಚೆನ್ನೈ ಕಿಂಗ್ಸ್‌ ಪರ ಆರಂಭದ 8 ಆವೃತ್ತಿಗಳಲ್ಲಿ ಕಾಣಿಸಿಕೊಂಡಿದ್ದರು.
*ಎಂದೂ ಫೈನಲ್‌ಗೇರದ ಡೆಲ್ಲಿ : ಒಮ್ಮೆಯೂ ಐಪಿಎಲ್‌ ಫೈನಲ್‌ನಲ್ಲಿ ಆಡದ ತಂಡ ಡೆಲ್ಲಿ ಡೇರ್‌ ಡೆವಿಲ್ಸ್‌. 11 ಆವೃತ್ತಿಗಳಲ್ಲಿ ಆಡಿಯೂ ಫೈನಲ್‌ ಪ್ರವೇಶಿಸಲು ವಿಫ‌ಲವಾದ ದುರದೃಷ್ಟ ತಂಡ ಅದು.
*4 ಬಾರಿ ಕಿರೀಟ ಗೆದ್ದ ರೋಹಿತ್‌: 4 ಬಾರಿ ಐಪಿಎಲ್‌ ಗೆದ್ದ ಖ್ಯಾತಿ ರೋಹಿತ್‌ ಶರ್ಮ ಅವರದ್ದು. ಮುಂಬೈ ನಾಯಕರಾಗಿ 3 ಬಾರಿ, ಡೆಕ್ಕನ್‌ ಚಾರ್ಜರ್ಸ್‌ ಆಟಗಾರರಾಗಿ ಒಮ್ಮೆ ಗೆದ್ದಿದ್ದಾರೆ.

ಶತಕ ಸಾಮ್ರಾಟರು


ಅಂತಾರಾಷ್ಟ್ರೀಯ ಪಂದ್ಯಗಳೂ ಸೇರಿ, ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಗರಿಷ್ಠ 21 ಶತಕ ಬಾರಿಸಿದ ವಿಶ್ವದಾಖಲೆ ಕ್ರಿಸ್‌ಗೇಲ್‌ ಹೆಸರಿನಲ್ಲಿದೆ. ಐಪಿಎಲ್‌ನಲ್ಲೂ ಅವರದ್ದೇ ಮೇಲುಗೈ. ಅವರು 6 ಶತಕದ ಮೂಲಕ ಅಗ್ರಸ್ಥಾನ ಪಡೆದಿದ್ದರೆ, 4 ಶತಕ ಬಾರಿಸಿರುವ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ.
ಕ್ರಿಸ್‌ ಗೇಲ್‌, ಪಂಜಾಬ್‌ 6
ವಿರಾಟ್‌ ಕೊಹ್ಲಿ, ಆರ್‌ಸಿಬಿ 4
ಡಿ ವಿಲಿಯರ್, ಆರ್‌ಸಿಬಿ 3
ಡೇವಿಡ್‌ ವಾರ್ನರ್‌, ಹೈದ್ರಾಬಾದ್‌ 3
ಶೇನ್‌ ವಾಟ್ಸನ್‌, ಚೆನ್ನೈ 4

Advertisement

Udayavani is now on Telegram. Click here to join our channel and stay updated with the latest news.

Next