ಬೆಂಗಳೂರು: ರಾಯಲ್ ಚಾಲೆಂಜರರ್ಸ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏ.8ರಂದು ಪಂದ್ಯ ನಡೆಯಲಿದ್ದು, ಪ್ರೇಕ್ಷಕರ ಅನುಕೂಲಕ್ಕಾಗಿ ಬಿಎಂಟಿಸಿ ಹಾಗೂ ನಮ್ಮ ಮೆಟ್ರೊ ವಿಶೇಷ ಸೇವೆ ಒದಗಿಸಲಿವೆ.
ಏಳೆಂಟು ಪಂದ್ಯಗಳು: ಐಪಿಎಲ್ ಪಂದ್ಯಗಳಲ್ಲಿ ಒಟ್ಟು 14 ಪಂದ್ಯಗಳನ್ನು ಬೆಂಗಳೂರು ಲೀಗ್ ಹಂತದಲ್ಲಿ ಆಡುತ್ತಿದೆ. ಇದರಲ್ಲಿ ಏಳು ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಇನ್ನು 3 ಪ್ಲೇ ಆಫ್ ಪಂದ್ಯಗಳು ನಡೆಯಲಿದ್ದು, ಅದರಲ್ಲಿ ಒಂದು ಬೆಂಗಳೂರಲ್ಲಿ ನಡೆಯುವ ಸಾಧ್ಯತೆ ಇದೆ.
ಇದರಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಟ್ಟು 7-8 ಪಂದ್ಯಗಳು ನಡೆಯಲಿವೆ. ಸದ್ಯದ ಪ್ರಕಾರ ಏ.8 ರಂದು ರಾತ್ರಿ 8ಕ್ಕೆ, ಏ.14ರಂದು ಸಂಜೆ 4ಕ್ಕೆ, ಏ.16ರಂದು ರಾತ್ರಿ 8ಕ್ಕೆ, ಏ.25ರಂದು ರಾತ್ರಿ 8ಕ್ಕೆ, ಏ.27ರಂದು ರಾತ್ರಿ 8ಕ್ಕೆ, ಮೇ 5 ರಂದು ರಾತ್ರಿ 8ಕ್ಕೆ, ಮೇ 7 ರಂದು ಸಂಜೆ 4 ಗಂಟೆಗೆ ಬೆಂಗಳೂರಿನಲ್ಲಿ ಪಂದ್ಯ ನಡೆಯಲಿದೆ.
ಸಾಮಾನ್ಯ ದಿನಗಳಲ್ಲಿ 6 ನಿಮಿಷಕ್ಕೆ ಒಂದು ಮೆಟ್ರೊ ರೈಲು ಸಂಚರಿಸುತ್ತಿದೆ. ಇದಲ್ಲದೇ ರಾತ್ರಿ 11ರವರೆಗೆ ಮೆಟ್ರೊ ರೈಲು ಸೇವೆ ಇರುತ್ತದೆ. ಆದರೆ ಐಪಿಲ್ ಪಂದ್ಯ ಬೆಂಗಳೂರಲ್ಲಿ ನಡೆಯುವ ಸಂದರ್ಭ ತಡರಾತ್ರಿ ಪಂದ್ಯ ಮುಗಿದ ಒಂದೆರಡು ಗಂಟೆವರೆಗೂ ಸೇವೆ ಸಲ್ಲಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.
ಐಪಿಎಲ್ ಪಂದ್ಯ ವೀಕ್ಷಿಸಲು ಮಹಿಳೆಯರು, ಮಕ್ಕಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇವರ ಸುರಕ್ಷತೆಗೆ ಸಮೂಹ ಸಾರಿಗೆಯೇ ಸೂಕ್ತ ಎಂಬುದನ್ನು ಅರಿತಿರುವ ಪೊಲೀಸರು ಕೂಡ ಬಿಎಂಆರ್‌ಸಿಎಲ್ ಹಾಗೂ ಬಿಎಂಟಿಸಿ ಸಂಸ್ಥೆಗೆ ಹೆಚ್ಚುವರಿ ಸೇವೆ ನೀಡಲು ಮನವಿ ಮಾದ್ದಾರೆ ಎನ್ನಲಾಗಿದೆ.