ದುಬೈ: ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಗಮನ ಸೆಳೆದ ಮತ್ತೋರ್ವ ಆಟಗಾರ ಎಂದರೆ 20 ವರ್ಷದ ಸಮೀರ್ ರಿಜ್ವಿ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಈ ಯುವ ಆಟಗಾರನನ್ನು ಬರೋಬ್ಬರಿ 8.4 ಕೋಟಿ ರೂ ನೀಡಿ ತನ್ನ ತಂಡಕ್ಕೆ ಬರಮಾಡಿಕೊಂಡಿದೆ. ಸಿಎಸ್ ಕೆ ಮತ್ತು ಗುಜರಾತ್ ನಡುವಿನ ಬಿಡ್ಡಿಂಗ್ ಪೈಪೋಟಿಯಲ್ಲಿ ಕೊನೆಗೆ ರಿಜ್ವಿ ಚೆನ್ನೈ ಪಾಲಾದರು.
ಹಾಗಾದರೆ ಯಾರು ಈ ಸಮೀರ್ ರಿಜ್ವಿ? ಈ ಯುವ ಆಟಗಾರನಿಗೆ ಯಾಕಿಷ್ಟು ಬೇಡಿಕೆ ಎನ್ನುವುದರ ಮಾಹಿತಿ ಇಲ್ಲಿದೆ.
ಜಿಯೋ ಸಿನಿಮಾದಲ್ಲಿ ನಡೆದ ಐಪಿಎಲ್ ಅಣಕು ಹರಾಜಿನಲ್ಲಿ ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ ಅಭಿನವ್ ಮುಕುಂದ್, ರಿಜ್ವಿ ಬಲಗೈ ಸುರೇಶ್ ರೈನಾ ಎಂದು ಐಪಿಎಲ್ ಸ್ಕೌಟ್‌ನಿಂದ ಹೇಳಲಾಗಿದೆ ಎಂದು ಬಹಿರಂಗಪಡಿಸಿದರು.
ಯುಪಿ ಟಿ20 ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ ಸಮೀರ್ ರಿಜ್ವಿ ಅತ್ಯಂತ ವೇಗದ ಶತಕ ದಾಖಲಿಸಿದ್ದಾರೆ. ಯುವ ಬ್ಯಾಟರ್ ದೇಶೀಯ ಆಟಗಾರ ಟಿ20ಗಳಲ್ಲಿ 134.70 ಸ್ಟ್ರೈಕ್ ರೇಟ್‌ನಲ್ಲಿ 49.16 ಸರಾಸರಿ ಹೊಂದಿದ್ದಾರೆ.
“ಸಮೀರ್ ರಿಜ್ವಿ ಅವರ ಬ್ಯಾಟಿಂಗ್ ನಲ್ಲಿ ವಿಭಿನ್ನ ಉದ್ದೇಶವಿದೆ. ಅವರು ಆಯುಷ್ ಬಡೋನಿ ಮಾದರಿಯ ಆಟಗಾರ ಆದರೆ ನೇರವಾದ ಬ್ಯಾಟ್‌ನೊಂದಿಗೆ ಆಡುತ್ತಾರೆ” ಎಂದು ರೈನಾ ಅವರು ರಿಜ್ವಿ ಬಗ್ಗೆ ಹೇಳಿದ್ದಾರೆ.
ರಿಜ್ವಿ ಮೀರತ್‌ನ ನಿವಾಸಿಯಾಗಿದ್ದು, ವಯೋಮಾನದ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ