Advertisement

IPL Auction: ಐವರು ಆಟಗಾರರ ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ ಅವಕಾಶ? ಇಲ್ಲಿದೆ ಹರಾಜು ವಿವರ

10:23 AM Sep 26, 2024 | Team Udayavani |

ನವದೆಹಲಿ: ಈ ಬಾರಿ ಐಪಿಎಲ್‌ ಹರಾಜಿನ (IPL Auction) ವೇಳೆ ಫ್ರಾಂಚೈಸಿಗಳಿಗೆ ಐವರು ಆಟಗಾರರನ್ನು ಉಳಿಸಿಕೊಳ್ಳಲು ಬಿಸಿಸಿಐ (BCCI) ಅವಕಾಶ ನೀಡುವ ಸಾಧ್ಯತೆಯಿದೆ. ಇದೇ ವೇಳೆ ಆರ್‌ಟಿಎಮ್‌ (Right To Match Card) ಆಯ್ಕೆಯನ್ನು ರದ್ದು ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

Advertisement

ಒಂದು ವೇಳೆ ಇದು ಸಾಧ್ಯವಾದರೆ ಆರ್‌ಸಿಬಿ ಸೇರಿದಂತೆ ಪ್ರಮುಖ ಫ್ರಾಂಚೈಸಿಗಳಿಗೆ ತಮ್ಮ ತಾರೆಯರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ. ಮುಖ್ಯವಾಗಿ ಚೆನ್ನೈ ಕಿಂಗ್ಸ್‌, ಮುಂಬೈ ಇಂಡಿಯನ್ಸ್‌ ನಂತಹ ತಂಡಗಳಿಗೆ ಭಾರೀ ಅನುಕೂಲವಾಗಲಿದೆ.

ಚೆನ್ನೈ ತನ್ನ ಖ್ಯಾತ ಆಟಗಾರ ಎಂ.ಎಸ್‌.ಧೋನಿಯನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ. ಈ ಹಿಂದಿನಂತೆ ನಾಲ್ವರನ್ನು ಮಾತ್ರ ಉಳಿಸಿಕೊಳ್ಳಲು ಅವಕಾಶ ನೀಡಿದ್ದರೆ ಚೆನ್ನೈಗೆ ಅದು ಕಷ್ಟವಾಗುತ್ತಿತ್ತು. ಇನ್ನು ಮುಂಬೈಗೆ ತನ್ನ ತಾರಾ ಆಟಗಾರರಾದ ಹಾರ್ದಿಕ್‌ ಪಾಂಡ್ಯ, ರೋಹಿತ್‌ ಶರ್ಮಾ, ಜಸ್‌ಪ್ರೀತ್‌ ಬುಮ್ರಾ, ಸೂರ್ಯಕುಮಾರ್‌ ಯಾದವ್‌ರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ.

ಇತ್ತೀಚೆಗೆ ನಡೆದ ಐಪಿಎಲ್‌ ಫ್ರಾಂಚೈಸಿಗಳೊಂದಿಗಿನ ಬಿಸಿಸಿಐ ಸಭೆಯಲ್ಲಿ, ಹಲವು ಫ್ರಾಂಚೈಸಿಗಳು ಕನಿಷ್ಠ 5ರಿಂದ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿ ಎಂದು ವಿನಂತಿಸಿದ್ದವು. ಅದಕ್ಕೆ ಬಿಸಿಸಿಐ ಸಮ್ಮತಿಸಿದೆ ಎನ್ನಲಾಗಿದೆ. ಈ ವರ್ಷ ನವೆಂಬರ್‌ನಲ್ಲಿ ಐಪಿಎಲ್‌ ಹರಾಜು ನಡೆಯಲಿದೆ.

Advertisement

ಲಾಭವೇನು?: ಕನಿಷ್ಠ ಐವರನ್ನು ಉಳಿಸಿಕೊಳ್ಳುವುದರಿಂದ ಫ್ರಾಂಚೈಸಿಗಳು ತಮ್ಮ ತಾರಾ ಆಟಗಾರರನ್ನು ಉಳಿಸಿಕೊಳ್ಳಬಹುದು. ಹಾಗೆಯೇ ತಮ್ಮ ಬ್ರಾಂಡ್‌ ಮೌಲ್ಯವನ್ನೂ ಕಾಪಾಡಿಕೊಳ್ಳಬಹುದು ಎಂದು ಬಿಸಿಸಿಐ ಚಿಂತಿಸಿದೆ ಎನ್ನಲಾಗಿದೆ.

ಮುಂಚೆ ಹೇಗಿತ್ತು?: 2022 ಐಪಿಎಲ್‌ ಋತುವಿನಿಂದಲೇ ಫ್ರಾಂಚೈಸಿಗಳು ನಾಲ್ವರನ್ನು ಉಳಿಸಿಕೊಳ್ಳಲು ಅವಕಾಶವಿತ್ತು. ಈ ಪೈಕಿ ಗರಿಷ್ಠ ಮೂವರು ಭಾರತೀಯರನ್ನು ಉಳಿಸಿಕೊಳ್ಳಬಹುದಿತ್ತು. ಗರಿಷ್ಠವೆಂದರೆ ಇಬ್ಬರು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಲು ಸಾಧ್ಯವಿತ್ತು. ಆ ಹೊತ್ತಿಗೆ ಆರ್‌ಟಿಎಂ ಅವಕಾಶವನ್ನು ರದ್ದು ಮಾಡಲಾಗಿತ್ತು. ಈ ಬಾರಿಯೂ ಅದನ್ನು ಮರುಸ್ಥಾಪಿಸುವ ಸಾಧ್ಯತೆಯಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next