Advertisement
ತಂಡದಲ್ಲಿ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಇದ್ದಾರೆ. ಫಿಲ್ ಸಾಲ್ಟ್, ಟಿಮ್ ಡೇವಿಡ್, ರಜತ್ ಪಾಟೀದಾರ್, ಜಿತೇಶ್ ಶರ್ಮ ಅವರಂತಹ ಸ್ಫೋಟಕ ಆಟಗಾರರಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಜೋಶ್ ಹೇಝಲ್ವುಡ್, ಲುಂಗಿ ಎನ್ಗಿಡಿ, ಭುವನೇಶ್ವರ್ ಕುಮಾರ್, ಯಶ್ ದಯಾಳ್ ಇದ್ದಾರೆ. ಇವರಿಗೆ ನೆರವಾಗಲು ಆಲ್ರೌಂಡರ್ಗಳಾದ ಲಿಯಮ್ ಲಿವಿಂಗ್ಸ್ಟೋನ್, ಕೃಣಾಲ್ ಪಾಂಡ್ಯ ಇದ್ದಾರೆ. ದೇವದತ್ತ ಪಡಿಕ್ಕಲ್, ಮನೋಜ್ ಭಾಂಡಗೆ ಸ್ಥಾನ ಪಡೆಯುವ ಮೂಲಕ ರಾಜ್ಯದ ಆಟಗಾರರಿಲ್ಲ ಎಂಬ ಕೂಗಿಗೂ ತೆರೆಬಿದ್ದಿದೆ.
ಚಾಂಪಿಯನ್ ಕೆಕೆಆರ್ ತಂಡದ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಅವರನ್ನು ಈ ಬಾರಿ ಕೈಬಿಡಲಾಗಿದೆ. ಹೀಗಾಗಿ ನಾಯಕನ ಆಯ್ಕೆಯೇ ದೊಡ್ಡ ಸವಾಲಾಗಿದೆ. 1.75 ಕೋಟಿ ರೂ.ಗೆ ತಂಡದ ಪಾಲಾಗಿರುವ ಅಜಿಂಕ್ಯ ರಹಾನೆ ಅವರೇ ನಾಯಕರಾಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಯೋಚಿಸಿ ತೀರ್ಮಾನಿಸಲಾಗುತ್ತದೆ ಎಂದು ಸಿಇಒ ವೆಂಕಿ ಮೈಸೂರ್ ಹೇಳಿದ್ದಾರೆ. ಅತ್ಯಂತ ದುಬಾರಿ ಮೊತ್ತಕ್ಕೆ ಖರೀದಿಯಾದ ವೆಂಕಟೇಶ್ ಅಯ್ಯರ್ ಕೂಡ ರೇಸ್ನಲ್ಲಿದ್ದಾರೆ.
Related Articles
ಐಪಿಎಲ್ ಇತಿಹಾಸದಲ್ಲೇ ಫ್ರಾಂಚೈಸಿಯೊಂದರಿಂಸ ಖರೀದಿಸಲ್ಪಟ್ಟ ಅತೀ ಕಿರಿಯ ಆಟಗಾರನಾಗಿ ದಾಖಲೆ ನಿರ್ಮಿಸಿರುವ 13 ವರ್ಷದ ವೈಭವ್ ಸೂರ್ಯವಂಶಿ ವಿರುದ್ಧ ವಯೋಮಾನ ಅಕ್ರಮ ಆರೋಪ ಕೇಳಿಬಂದಿದೆ. ವೈಭವ್ ವಯಸ್ಸು 13 ಅಲ್ಲ, 15 ಎಂದು ಹೇಳಲಾಗುತ್ತಿದೆ. ಆದರೆ ಈ ಆರೋಪವನ್ನು ಅಲ್ಲಗೆಳೆದಿರುವ ವೈಭವ್ ತಂದೆ ಸಂಜೀವ್ ಸೂರ್ಯವಂಶಿ, ವಯಸ್ಸಿನ ಮರುಪರೀಕ್ಷೆಗೆ ಸಿದ್ಧ ಎಂದಿದ್ದಾರೆ. ವೈಭವ್ ಅವರನ್ನು ರಾಜಸ್ಥಾನ್ ತಂಡ 1.1 ಕೋಟಿ ರೂ.ಗೆ ಖರೀದಿಸಿದೆ.
Advertisement